More

    ರಾಮಭಂಟನಿಗಾಗಿ ತಯಾರಾಯ್ತು ಏಳು ಅಡಿಯ ರಾಖಿ- ವಿಶೇಷತೆ ಏನು ಗೊತ್ತಾ?

    ಚಂಡೀಗಢ: ನಾಳೆಯೇ ರಕ್ಷಾಬಂಧನ. ಹಲವಾರು ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗಾಗಿ ಬಗೆಬಗೆಯ ರಾಖಿಗಳನ್ನು ಆರಿಸುವಲ್ಲಿ ತಲ್ಲೀನರಾಗಿದ್ದರೆ, ಇನ್ನು ಕೆಲವರು ಖುದ್ದು ತಾವೇ ತಯಾರು ಮಾಡುವ ರಾಖಿಯನ್ನು ಕಟ್ಟಿ ಸಂಭ್ರಮಿಸಲಿದ್ದಾರೆ.

    ಇದು ಸಹೋದರ- ಸಹೋದರಿಯ ಪ್ರೀತಿಯ ಮಾತಾದರೆ, ಇನ್ನು ಕೆಲವರು ಪ್ರಧಾನಿಯಿಂದ ಹಿಡಿದು ಕೆಲವು ಗಣ್ಯರಿಗೆ ರಾಖಿ ಕಟ್ಟಿದರೆ, ಇನ್ನು ಕೆಲವು ಕಡೆ ಜನರನ್ನು ರಕ್ಷಣೆ ಮಾಡಿ ಎಂದು ಸಹೋದರನಾಗಿ ದೇವರನ್ನೇ ನೋಡುವುದಿದೆ.

    ಇಂಥದ್ದೇ ಒಂದು ಸಂಪ್ರದಾಯ ಚಂಡೀಗಢದಲ್ಲಿಯೂ ಇದೆ. ಇಲ್ಲಿ ಮಹಿಳಾ ಗುಂಪೊಂದು ಪ್ರತಿವರ್ಷವೂ ಬಗೆಬಗೆಯ ರಾಖಿಗಳನ್ನು ತಯಾರಿಸಿ ದೇವರಿಗೆ ನೀಡುವುದಿದೆ.
    ಈ ಬಾರಿ ಎಲ್ಲೆಲ್ಲೂ ಶ್ರೀರಾಮನ ಜಪ ಜೋರಾಗಿ ನಡೆದಿದೆ. ಅತ್ತ ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ಭೂಮಿಪೂಜೆಗೆ ಸಿದ್ಧತೆ ನಡೆದಿರುವ ಬೆನ್ನಲ್ಲೇ ಇತ್ತ, ಚಂಡೀಗಢದಲ್ಲಿ ಈ ಮಹಿಳೆಯರು ರಾಮಬಂಧ ಹುನುಮಂತನಿಗಾಗಿ ದಾಖಲೆಯ ರಾಖಿಯನ್ನು ತಯಾರು ಮಾಡಿದ್ದಾರೆ.

    ಈ ರಾಖಿಯ ವಿಶೇಷತೆ ಎಂದರೆ ಇದು ಏಳು ಅಡಿ ಎತ್ತರವಿದ್ದು, ಪರಿಸರ ಸ್ನೇಹಿಯಾಗಿದೆ. ಇಲ್ಲಿ 32 ಅಡಿ ಎತ್ತರದ ಹುನುಮನ ಮೂರ್ತಿಯಿದ್ದು, ಆ ಮೂರ್ತಿಗಾಗಿ ಈ ರಾಖಿಯನ್ನು ತಯಾರು ಮಾಡಲಾಗಿದೆ.

    ಇದನ್ನೂ ಓದಿ: ರಾಮನಿಗಾಗಿ ಒಂದೂಕಾಲು ಲಕ್ಷ ಮಣ್ಣಿನ ಹಣತೆ: ಖುಷಿಯಲ್ಲಿ ಕುಂಬಾರರು

    ಮೀನಾ ತಿವಾರಿ ಎಂಬುವವರ ನೇತೃತ್ವದಲ್ಲಿ ಮಹಿಳೆಯರ ಗುಂಪು 15 ದಿನಗಳವರೆಗೆ ಸೇರಿ ಈ ರಾಖಿ ಸಿದ್ಧಪಡಿಸಿದ್ದಾರೆ. ದಿನವೂ 2-3 ಗಂಟೆಗಳವರೆಗೆ ಇದನ್ನು ತಯಾರಿಸುತ್ತಿರುವುದಾಗಿ ಹೆಳಿದ್ದಾರೆ.

    ಈ ರಾಖಿಯಲ್ಲಿ ರಾಮನ ದೊಡ್ಡ ಭಾವಚಿತ್ರವಿದ್ದು, ಇದಕ್ಕೆ ರುದ್ರಾಕ್ಷಿಗಳು, ಕೃತಕ ಹೂಗಳು ಮತ್ತು ರಿಬ್ಬನ್ ಗಳಿಂದ ಅಲಂಕಾರ ಮಾಡಲಾಗಿದೆ. ಚಂಡೀಗಢದಲ್ಲಿರುವ 32 ಅಡಿ ಉದ್ದದ ಹನುಮಾನ್ ಮೂರ್ತಿಯ ಬಲಗೈ ಈ ರಾಖಿಯನ್ನು ಕಟ್ಟಲಾಗುವುದು. ನಾವು ಪ್ರತಿವರ್ಷ ರಾಖಿಯನ್ನು ತಯಾರಿಸುತ್ತೇವೆ. ಆದರೆ ಈ ಬಾರಿ ವಿಶೇಷವಾಗಿ ಈ ರಾಖಿಯನ್ನು ತಯಾರಿಸಿದ್ದೇವೆ ಎಂದು ಮೀನಾ ಹೇಳಿದ್ದಾರೆ. (ಏಜೆನ್ಸೀಸ್‌)

    ಸ್ನೇಹಿತರ ಜತೆ ಹೆಂಡತಿ ಮೇಲೆ ಅತ್ಯಾಚಾರ ಮಾಡಿ ಬೀಸಾಕಿದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts