ಇಬ್ಬರು ಯುವತಿಯರ ಜತೆ ಕುಡಿದು ಮತ್ತೇರಿಸಿಕೊಂಡು ಕಿರಿಕ್‌! ನಟ ರಕ್ಷಿತ್‌ ಸೇರಿದಂತೆ ಏಳು ಮಂದಿ ವಿರುದ್ಧ ಎಫ್‌ಐಆರ್‌

rakshith
Published on

ಬೆಂಗಳೂರು: ಕುಡಿದು ಗಲಾಟೆ ಮಾಡಿರುವ ಆರೋಪದ ಮೇಲೆ ಕಿರುತೆರೆಯ ಪ್ರಸಿದ್ಧ ನಟ ರಕ್ಷಿತ್‌ ಸೇರಿದಂತೆ ಏಳು ಮಂದಿ ನಟರ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ನಟ ರಕ್ಷಿತ್ ಜತೆಗೆ ಅನುಷಾ, ಶರಣ್ಯ, ರವಿಚಂದ್ರನ್‌, ರಂಜನ್‌, ರಾಕೇಶ್‌ ಕುಮಾರ್‌, ಅಭಿಷೇಕ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಕೆಂಗೇರಿ ಬಳಿಯಲ್ಲಿನ ಜಿಂಜರ್ ಲೇಕ್ ವ್ಯೂ ಹೋಟೆಲ್ ಒಂದರಲ್ಲಿ ಇವರು ಕುಡಿದು ಗಲಾಟೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇವರ ವಿರುದ್ಧ ಸ್ಥಳೀಯರು ದೂರು ನೀಡಿದ್ದರು. ಈ ಎಲ್ಲ ನಟರು ರಾತ್ರಿ 10 ಗಂಟೆಗೆ ಶೂಟಿಂಗ್​ ಮುಗಿಸಿ ಕೆಂಗೇರಿ ಬಳಿ ಇರುವ ಹೋಟೆಲ್​ಗೆ ಬಂದಿದ್ದರು. ನೈಟ್‌ ಕರ್ಫ್ಯೂ ಇರುವ ಕಾರಣ, 10 ಗಂಟೆಗೆ ಹೋಟೆಲ್ ಬಂದ್ ಮಾಡಿದ್ದರೂ ಮ್ಯಾನೇಜರ್​​ಗೆ ಕರೆ ಮಾಡಿ ಹೋಟೆಲ್​ ಬಾಗಿಲು ತೆಗೆಸಿದ್ದಾರೆ ಇವರು. ನಂತರ ಬಳಿಕ ಹೋಟೆಲ್ ಒಳಗೆ ಕುಳಿತು ಮದ್ಯ ಸೇವನೆ ಮಾಡಿ ಪಾರ್ಟಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಸಿಕ್ಕಾಪಟ್ಟೆ ಕೂಗಾಡಿದ್ದು, ಇದು ನೆರೆಹೊರೆಯವರಿಗೆ ಸಿಟ್ಟು ತರಿಸಿದ್ದು, ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ನಟರನ್ನು ಬಂಧಿಸಿ ನಂತರ ಪೊಲೀಸ್‌ ಠಾಣೆಗೆ ಕರೆತಂದು ಬಿಡುಗಡೆ ಮಾಡಿದ್ದಾರೆ.

ಇವರ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಎನ್​ಡಿಎಂಎ ಮತ್ತು ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸ್ಟೇಷನ್ ಬೇಲ್ ನೀಡಿ ಇವರನ್ನು ಬಿಡುಡಗೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ವೈದ್ಯಕೀಯ ಪರೀಕ್ಷೆಯಿಂದ ಕುಡಿದದ್ದನ್ನು ಪತ್ತೆ ಮಾಡಿದ್ದರೂ ರಕ್ಷಿತ್‌ ಮಾತ್ರ ಇದನ್ನು ಒಪ್ಪಿಕೊಳ್ಳುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net