More

    ಜೆಡಿಎಸ್‌ನಲ್ಲಿದ್ದುಕೊಂಡು ಬಿಜೆಪಿಯಿಂದ ಟಿಕೆಟ್‌ಗೆ ಲಾಬಿ! ಅಸಮಾಧಾನದ ಸ್ಫೋಟ: ಸಿಎಂಗೆ ಶುರುವಾಯ್ತು ತಲೆನೋವು

    ಮೈಸೂರು: ಜೆಡಿಎಸ್‌ ಬಂಧವನ್ನು ಕಳಚಿ ಒಬ್ಬೊಬ್ಬರಾಗಿ ಬೇರೆ ಪಕ್ಷ ಸೇರ್ಪಡೆಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇದೇ ಪಕ್ಷದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಕೂಡ ಪಕ್ಷ ತೊರೆಯುವ ಒಲವು ತೋರಿದ್ದಾರೆ. ಜೆಡಿಎಸ್ ನಿಂದ ದೂರವಿದ್ದರೂ ತಾಂತ್ರಿಕವಾಗಿ ಅದೇ ಪಕ್ಷದ ಎಂಎಲ್‌ಸಿ ಆಗಿರುವ ಸಂದೇಶ್ ನಾಗರಾಜು ಅವರು, ಬಿಜೆಪಿಯಿಂದ ಎಂಎಲ್‌ಸಿ ಟಿಕೆಟ್‌ಗಾಗಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಬಿಜೆಪಿ ಸೇರ್ಪಡೆಗೂ ಮುನ್ನವೇ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿರುವುದು ಇದೀಗ ಆಂತರಿಕವಾಗಿ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ. ಜನವರಿ 5ರವರೆಗೂ ಜೆಡಿಎಸ್ ಪಕ್ಷದ ಎಂಎಲ್‌ಸಿ ಆಗಿ ಇರುತ್ತೇನೆ ಎನ್ನುವುದಾಗಿ ಹೇಳಿಕೆ ನೀಡಿರುವ ನಡುವೆಯೇ ಬಿಜೆಪಿಯಿಂದ ಟಿಕೆಟ್‌ಗೆ ಲಾಬಿ ಮಾಡುತ್ತಿದ್ದು ಇದೀಗ ಬಿಜೆಪಿಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

    ನಿನ್ನೆ ಮೈಸೂರು ಕಚೇರಿಯಲ್ಲಿ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಸಂದೇಶ್ ನಾಗರಾಜು ಬೇಡಿಕೆಗೆ ಆಕ್ಷೇಪ ವ್ಯಕ್ತವಾಗಿದೆ. ಹೊರಗಿನವರನ್ನು ಬಿಟ್ಟು ಪಕ್ಷದವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿಬಂದಿದೆ.

    ಕಳೆದ ಬಾರಿ ಅಲ್ಪಮತಗಳ ಅಂತರದಿಂದ ಸೋತಿದ್ದ ಕೌಟಿಲ್ಯ ರಘು, ಲಿಂಗಾಯತ ಮುಖಂಡ ಯು.ಎಸ್.ಶೇಖರ್, ಸಂಸದ ವಿ.ಶ್ರೀನಿವಾಸ ಪ್ರಸಾದ್ ಆಪ್ತ ಸಿ.ಬಸವೇಗೌಡ, ಬಿಜೆಪಿ ‌ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ನಡುವೆ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿರುವ ನಡುವೆಯೇ ಇದೀಗ ಸಂದೇಶ್‌ ನಾಗರಾಜ್‌ ಅವರೂ ಲಾಬಿ ನಡೆಸಿರುವುದು ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಲೆನೋವಾಗಿದೆ.

    ಪಕ್ಷದವನ್ನು ಬಿಟ್ಟು ಹೊರಗಿನಿಂದ ಬರುವ ಸಂದೇಶ್ ನಾಗರಾಜುಗೆ ಬಿಜೆಪಿ ಮಣೆ ಹಾಕುತ್ತಾ? 76 ವರ್ಷ ವಯಸ್ಸಿನ ಸಂದೇಶ್ ನಾಗರಾಜುಗೆ ವಯೋಮಿತಿ ಅನ್ವಯ ಆಗಲ್ವ? ಜೆಡಿಎಸ್‌ನಲ್ಲೂ ಪಕ್ಷ ನಿಷ್ಠ ಎನಿಸಿಕೊಳ್ಳದ ಸಂದೇಶ್ ನಾಗರಾಜ್ ಅವರಿಗೆ ಬಿಜೆಪಿ ಟಿಕೆಟ್‌ ನೀಡತ್ತಾ ಎಂಬುದಾಗಿ ರಾಜಕೀಯ ವಲಯದಲ್ಲಿ ಪ್ರಶ್ನೆಗಳು ಸುಳಿದಾಡುತ್ತಿವೆ.

    ಜೆಡಿಎಸ್‌ನಲ್ಲಿದ್ದುಕೊಂಡು ಬಿಜೆಪಿಯಿಂದ ಟಿಕೆಟ್‌ಗೆ ಲಾಬಿ! ಅಸಮಾಧಾನದ ಸ್ಫೋಟ: ಸಿಎಂಗೆ ಶುರುವಾಯ್ತು ತಲೆನೋವು

    ಉಚಿತವಾಗಿ ಪಿಜ್ಜಾ ತಿಂದ್ರೆ ನಿಮಗೆ ಸಿಗುತ್ತೆ ಐದು ಲಕ್ಷ ರೂಪಾಯಿ- ಇಲ್ಲಿದೆ ಬಿಗ್‌ ಆಫರ್‌!

    ಬ್ಯೂಟಿ ಕಿಂಗ್‌, ಮದ್ಯಪ್ರಿಯ, ಪ್ರಶಸ್ತಿಗಳ ಸರದಾರ 21 ಕೋಟಿ ರೂ. ಬೆಲೆಯ ಸುಲ್ತಾನ್‌ ಹೃದಯಾಘಾತದಿಂದ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts