More

    ಶುಕ್ರನಲ್ಲಿ ಏಲಿಯನ್​! ಈ ಗ್ರಹ ನನ್ನದೇ ಎನ್ನುತ್ತಿದೆ ರಷ್ಯಾ- ಏನಿದರ ವಿಶೇಷತೆ?

    ನವದೆಹಲಿ: ಶುಕ್ರಗ್ರಹದಲ್ಲಿ ಏಲಿಯನ್‌ಗಳು ಬದುಕಿರುವ ಸಾಧ್ಯತೆಯಿದೆ ಎಂದು ಈಚೆಗೆ ವಿಜ್ಞಾನಿಗಳು ಹೇಳಿದ್ದೇ ತಡ ಈ ಗ್ರಹ ಬಾಹ್ಯಾಕಾಶ ವಿಜ್ಞಾನಿಗಳ ಕೇಂದ್ರಬಿಂದುವಾಗಿಬಿಟ್ಟಿದೆ. ಶುಕ್ರಗ್ರಹದ ಅಧ್ಯಯನಕ್ಕೆ ದಿಢೀರ್ ಪೈಪೋಟಿಯೂ ಶುರುವಾಗಿದೆ.

    ಈ ಗ್ರಹದ ಮೇಲಿರುವ ಮೋಡಗಳಲ್ಲಿ ಜೀವದ ಸುಳಿವು ಸಿಕ್ಕಿದೆ ಎಂದು ಸಂಶೋಧಕರು ಮಾಹಿತಿ ಹೊರಗೆಡವಿದ ಬಳಿಕ ಇದರ ಮೇಲಿನ ಕುತೂಹಲ ಬಹುಪಟ್ಟು ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ರಷ್ಯಾ ಈ ಗ್ರಹದ ಮೇಲೆ ಒಡೆತನ ಸಾಧಿಸಿದೆ. ಶುಕ್ರ ಗ್ರಹದ ಮೇಲೆ ತನ್ನದೇ ಹಕ್ಕಿದೆ ಎಂದು ಹೇಳುತ್ತಿದೆ. ಭೂಮಿಯ ಅವಳಿ ಎಂದೇ ಕರೆಯಲಾಗುವ ಶುಕ್ರಗ್ರಹದ ಮೇಲೆ ಅರ್ಧ ಶತಮಾನದ ಹಿಂದೆಯೇ ರಷ್ಯಾ ಕಾಲಿಟ್ಟಿದ್ದರಿಂದ ಅದು ತನಗೇ ಸೇರಿದ್ದು ಎಂದು ಹಕ್ಕುಸ್ಥಾಪನೆ ಮಾಡುತ್ತಿದೆ.

    ಭೂಮಿಗೆ ಅತ್ಯಂತ ಸನಿಹದ ಶುಕ್ರನ ಮೇಲ್ಮೈ ಮೇಲಿರುವ ಮೋಡಗಳಲ್ಲಿ ಫಾಸ್ಫೈನ್ ಎಂಬ ರಾಸಾಯನಿಕಕಣವನ್ನು ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇಂಥ ಕಣಗಳು ಜೀವಿಗಳಿಂದ ಮಾತ್ರ ಉತ್ಪಾದಿಸಲು ಸಾಧ್ಯಅಥವಾ ಜೀವಿಗಳು ಇರುವ ಕಡೆ ಮಾತ್ರ ಫಾಸ್ಪೈ ನ್‍ಕಂಡುಬರುತ್ತದೆಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದ್ದರಿಂದ ಶುಕ್ರಗ್ರಹದಲ್ಲಿ ಏಲಿಯನ್ (ಅನ್ಯಗ್ರಹ ಜೀವಿಗಳು) ವಾಸ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಶುಕ್ರನ ಮೇಲೆ ಇಡೀ ವಿಶ್ವದ ಗಮನ ನೆಟ್ಟಿದೆ.

    ರಷ್ಯಾದ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಡಿಮಿಟ್ರಿ ರೋಗೋಜಿನ್ ಅವರು ಶುಕ್ರನನ್ನು ರಷ್ಯನ್ ಗ್ರಹ ಎಂದೇ ಸಂಬೋಧಿಸಿದ್ದಾರೆ. ಶುಕ್ರದ ನೆಲದ ಮೇಲೆ ಯಶಸ್ವಿಯಾಗಿ ಅಡಿ ಇಟ್ಟ ಮೊದಲ ಹಾಗೂ ಏಕೈಕ ದೇಶ ನಮ್ಮದು. ರಷ್ಯಾದ ಗಗನನೌಕೆಯು ಆ ಗ್ರಹದ ಬಗ್ಗೆ ಮಾಹಿತಿ ಕಲೆಹಾಕಿತ್ತು. ಅಲ್ಲಿ ನರಕದಂಥ ವಾತಾವರಣ ಇದೆ ಎಂಬುದನ್ನು ಪತ್ತೆಹಚ್ಚಿದ್ದು, ಈ ಗ್ರಹ ನಮಗೇ ಸೇರಿದ್ದು ಎಂದು ಹೇಳಿದ್ದಾರೆ.

    ಮಂಗಳ ಗ್ರಹಕ್ಕೂ ಮುನ್ನವೇ ಮನುಷ್ಯ ಶುಕ್ರ ಗ್ರಹದಲ್ಲಿ ಅನ್ವೇಷಣೆ ಆರಂಭಿಸಿದ್ದ. 60ರಿಂದ 80ರ ದಶಕಗಳವರೆಗೆ ಭೂಮಿಯಿಂದ ಅನೇಕ ಬಾರಿ ನೌಕೆಗಳನ್ನು ಶುಕ್ರನ ಅಂಗಳಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಮೊದಲಿಗರು ಆಗಿನ ಸೋವಿಯತ್ ರಷ್ಯಾದವರು. ‘ವೆನೆರಾ’ ಹೆಸರಲ್ಲಿ ಶುಕ್ರಯಾನ ಕೈಗೊಂಡಿದ್ದ ರಷ್ಯಾ 1961ರಲ್ಲಿ ತನ್ನ ಮೊದಲ ನೌಕೆ ಹಾರಿಬಿಟ್ಟಿತ್ತು. ಆದರೆ ಅದು ಭೂಮಿಯ ಕಕ್ಷೆಯನ್ನೂ ದಾಟಲು ಸಾಧ್ಯವಾಗಿರಲಿಲ್ಲ. ಹೀಗೆ ಸತತ ಪ್ರಯತ್ನಗಳ ನಂತರ ‘ವೆನೆರಾ-13’ ಶುಕ್ರಗ್ರಹದ ಮೇಲೆ ಲ್ಯಾಂಡ್ ಆಗಿತ್ತು. ಇದು ಶುಕ್ರಗ್ರಹದ ಮೇಲೆ ಇಳಿದ ಮೊದಲ ಹಾಗೂ ಏಕೈಕ ಉಪಗ್ರಹ. ಅಮೆರಿಕದೊಂದಿಗಿನ ಶೀತಲ ಸಮರ ತಾರಕದಲ್ಲಿದ್ದ ವೇಳೆ ತಾಂತ್ರಿಕವಾಗಿ ಬಹಳ ಮುಂದಿದ್ದ ರಷ್ಯಾ ಹಲವು ಬಾರಿ ತನ್ನ ನೌಕೆಯನ್ನು ಕಳುಹಿಸಿ ಯಶಸ್ವಿಯಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ರಷ್ಯಾ ಇದೀಗ ಹಕ್ಕುಸಾಧಿಸುತ್ತಿದೆ.

    ಇದನ್ನೂ ಓದಿ: ಟ್ರಂಪ್​ ಹೆಸರಲ್ಲಿ ಬಂದ ಪತ್ರದಲ್ಲಿ ಪ್ರಾಣಘಾತಕ ವಿಷ: ಕಳಿಸಿದ್ಯಾರು? ಆತಂಕದಲ್ಲಿ ಶ್ವೇತಭವನ!

    ವಿಷಕಾರಿ ಅನಿಲ ಹಾಗೂ ಸುಟ್ಟುಕರಕಲಾಗುವಷ್ಟು ಸುಡು ಬಿಸಿಲು ಹೊಂದಿರುವ ಶುಕ್ರನ ವಾತಾವರಣದಲ್ಲಿ ಜೀವ ಇರಲು ಸಾಧ್ಯವೇ ಇಲ್ಲ ಎಂದು ನಂಬಲಾಗಿತ್ತು. ಆದರೆ, ಈಚೆಗೆ ಕೆಲ ಸಂಶೋಧಕರು ಇಲ್ಲಿ ಫಾಸ್​ಫೈನ್ ಅನಿಲದ ಅಂಶಗಳನ್ನು ಪತ್ತೆ ಮಾಡಿದ್ದಾರೆ. ಶುಕ್ರ ಗ್ರಹದಲ್ಲಿಯೂ ಜೀವಿಗಳು ಬದುಕಿರಬಹುದು, ಶುಕ್ರನ ಆ್ಯಸಿಡ್ ಮೋಡಗಳ ಒಳಗೆ ಜೀವಿಗಳು ತೇಲುತ್ತಾ ಬದುಕಿರಬಹುದು ಎಂದು ಅಂದಾಜಿಸಲಾಗಿದೆ. ‘ನೇಚರ್ ಅಸ್ಟ್ರಾನಮಿ’ಯಲ್ಲಿ ಪ್ರಕಟವಾಗಿದ್ದ ಸಂಶೋಧನಾ ವರದಿಯಲ್ಲಿ ಶುಕ್ರನಲ್ಲಿ ಜೀವಿಗಳು ಬದುಕಿರಬಹುದು ಎಂದು ವಿವರಿಸಲಾಗಿದೆ. ಆದ್ದರಿಂದ ಶುಕ್ರಗ್ರಹ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.

    ಅದೇ ಇನ್ನೊಂದೆಡೆ, ಭಾರತದ ಇಸ್ರೋ ಸಂಸ್ಥೆ ಶುಕ್ರನ ಅಧ್ಯಯನಕ್ಕೆ ಶುಕ್ರಯಾನ್-1 ನೌಕೆಯನ್ನು ಕಳುಹಿಸುತ್ತಿದೆ. ಇದಾದರೆ ಶುಕ್ರನಲ್ಲಿಗೆ ನೌಕೆ ಕಳುಹಿಸಿದ ಐದನೇ ದೇಶವಾಗಲಿದೆ ಭಾರತ. ಈ ಮುಂಚೆ ರಷ್ಯಾ, ಅಮೆರಿಕ, ಯೂರೋಪ್ ಮತ್ತು ಜಪಾನ್ ದೇಶಗಳು ಶುಕ್ರನ ಬಳಿ ಹೋಗಿವೆ. ಆದರೆ, ಅದರ ನೆಲದ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆ ರಷ್ಯಾದ್ದು.

    ಭಾರತದ ಮೇಲೆ ಬೇಹುಗಾರಿಕೆಗೆ ನೌಕೆ ಕಳುಹಿಸಿದ ಚೀನಾ: ಎಲ್ಲೆಡೆ ತೀವ್ರ ಕಟ್ಟೆಚ್ಚರ

    ಅತ್ಯಾಚಾರ ಮಾಡಿದರೆ ‘ಅದಕ್ಕೇ’ ಬೀಳತ್ತೆ ಕತ್ತರಿ!​​ ಈ ದೇಶದಲ್ಲಿ ಬಂತು ಹೊಸ ಕಾನೂನು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts