More

    ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

    ರಷ್ಯಾ: ಒಂದು ದೇಶ ತಾನು ಶಕ್ತಿಶಾಲಿ ಎಂದು ಸಾಬೀತು ಮಾಡಲು ತನ್ನ ಬಳಿ ಇರುವ ಅಸ್ತ್ರಗಳ ಬಗ್ಗೆ ಮಾತನಾಡುತ್ತದೆ. ಅದೇ ರೀತಿ ಇಡೀ ವಿಶ್ವದಲ್ಲಿಯೇ ತಾನೇ ಬಲಶಾಲಿ, ಶಕ್ತಿಶಾಲಿಯಾಗಬೇಕೆಂದು ಎಲ್ಲಾ ದೇಶಗಳು ಬಯಸುವುದು ಸಹಜವೇ.

    ಈ ಪೈಕಿ ಅತ್ಯಂತ ಶಕ್ತಿಶಾಲಿ ಹಾಗೂ ಅಷ್ಟೇ ಭಯಾನಕ ಎಂದು ಘೋಷಿಸಿರುವ ಅಸ್ತ್ರಗಳ ಪಟ್ಟಿಯಲ್ಲಿ ಅಣುಬಾಂಬ್‌ಗೆ ಮೊದಲ ಸ್ಥಾನವಿದೆ. ಅದಕ್ಕಾಗಿಯೇ ಅಣುಬಾಂಬ್‌ ಇರುವ ದೇಶಗಳ ಮೇಲೆ ದಾಳಿ ಮಾಡಲು ಉಳಿದ ದೇಶಗಳು ಸ್ವಲ್ಪ ಹಿಂದೇಟು ಹಾಕುವುದಿದೆ.

    ಇಲ್ಲಿಯವರೆಗೆ ಜಪಾನ್‌ ಮೇಲೆ ಅಮೆರಿಕ ಅಣುಬಾಂಬ್‌ ಸ್ಫೋಟಿಸಿದ್ದೇ ಮೊದಲ ಘಟನೆಯಾಗಿದೆ. ಅಮೆರಿಕವು 1945ರ ಆಗಸ್ಟ್‌ನಲ್ಲಿ ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ಹಾಕಿರುವುದೇ ಮೊದಲ ಹಾಗೂ ಕೊನೆಯ ಅಣುಬಾಂಬ್‌.

    ಹೌದು. ಇದಾದ ಮೇಲೆ ಯಾವ ದೇಶಗಳೂ ಯಾವ ದೇಶಗಳ ಮೇಲೂ ಇದುವರೆಗೆ ಅಣುಬಾಂಬ್‌ ಸ್ಫೋಟ ಮಾಡಿದ್ದಿಲ್ಲ. ಈ ವಿಷಯ ಇಲ್ಯಾಕೆ ಬಂದಿತೆಂದರೆ, ಇದೀಗ ರಷ್ಯಾ ತನ್ನ ಬಳಿ ಇರುವ ಅಣುಬಾಂಬ್‌ನ ವಿಡಿಯೋ ಒಂದನ್ನು ಶೇರ್‌ ಮಾಡಿದೆ. ಸುಮಾರು 50 ವರ್ಷಗಳ ಹಿಂದೆ ನಡೆಸಿದ ಟೆಸ್ಟ್ ಒಂದರ ವಿಡಿಯೋ ಇದಾಗಿದೆ.

    ಅಂದರೆ ರಷ್ಯಾದ ಬಳಿ ಈ ಭಯಾನಕ ಅಣುಬಾಂಬ್‌ ಐದು ದಶಕಗಳ ಹಿಂದಿನಿಂದಲೂ ಇದ್ದು, ಇಲ್ಲಿಯವರೆಗೆ ರಹಸ್ಯವನ್ನು ಕಾಪಾಡಿಕೊಂಡು ಬಂದಿದೆ. ಈ ಅಣುಬಾಂಬ್‌ನ ಭೀಕರತೆ ಎಷ್ಟಿದೆ ಎಂದರೆ ಅದೇ 1945ರಲ್ಲಿ ಅಮೆರಿಕ ಹಿರೋಷಿಮಾ ಮತ್ತು ನಾಗಾಸಕಿ ಮೆಲೆ ಸ್ಫೋಟಿಸಿದ್ದ ಅಣು ಬಾಂಬ್‌ಗಿಂತಲೂ ಮೂರು ಸಾವಿರ ಪಟ್ಟು ಅಧಿಕಶಕ್ತಿಶಾಲಿಯಾಗಿದೆ ಎನ್ನಲಾಗಿದೆ. ಅತ್ಯಂತ ಸುಲಭದಲ್ಲಿ ಹೇಳಬೇಕೆಂದರೆ ಯಾವುದಾದರೂ ದೇಶದ ಮೇಲೆ ಈ ಅಣುಬಾಂಬ್‌ ಬಿದ್ದರೆ ಇಡೀ ದೇಶಕ್ಕೆ ದೇಶವೇ ಖತಂ ಆಗಲಿದೆ ಎನ್ನಲಾಗಿದೆ. ಒಮ್ಮೆ ಇದು ಸ್ಫೋಟಿಸಿದರೆ ಅಲ್ಲಿಯುಂಟಾಗುವ ಹಾನಿಯನ್ನು ಅಂದಾಜಿಸಲೂ ಸಾಧ್ಯವಿಲ್ಲ.

    ಇದನ್ನೂ ಓದಿ: ಕರೊನಾ ಶ್ವಾಸಕೋಶಕ್ಕಷ್ಟೇ ಸೀಮಿತವಾಗಿಲ್ಲ: ವೈರಸ್‌ ಭಯಾನಕತೆ ಬಿಚ್ಚಿಟ್ಟಿದ್ದಾರೆ ಏಮ್ಸ್‌ ತಜ್ಞರು

    ಅಂದಹಾಗೆ ಇದರ ಹೆಸರು ತ್ಸಾರ್‌ ಬೊಂಬಾ. ಇತಿಹಾಸದಲ್ಲಿ ಇದು ಈವರೆಗಿನ ಮಾನವ ನಿರ್ಮಿತ ಅತಿ ದೊಡ್ಡ ವಿಸ್ಫೋಟ ಎನ್ನಲಾಗಿದೆ. 1961ರಲ್ಲಿ 50 ಮೆಗಾ ಟನ್ ಥರ್ಮೋನ್ಯೂಕ್ಲಿಯರ್ ಬಾಂಬ್ ಸ್ಫೋಟಗೊಳಿಸಲಾಗಿತ್ತು.ಈ ವಿಸ್ಪೋಟವನ್ನು ಆರ್ಕ್ಟಿಕ್ ವಲಯದ ದ್ವೀಪವೊಂದರಲ್ಲಿ 13 ಸಾವಿರ ಅಡಿ ದೂರದಲ್ಲಿ ಮಾಡಲಾಗಿತ್ತು. ಈ ಬಾಂಬ್ ಸಾಮರ್ಥ್ಯ ಹಿರೋಶಿಮಾ ಮೇಲೆ ಹಾಕಲಾದ ಬಾಂಬ್‌ಗಿಂತ 3,333 ಪಟ್ಟು ಅಧಿಕವಿದೆ ಎನ್ನಲಾಗಿದೆ. ಈ ಸ್ಫೋಟದ ದೃಶ್ಯ ನಾರ್ವೆವರೆಗೆ ಕಂಡಿತ್ತು. ಸ್ಫೋಟದ ಬಳಿಕ ಆಗಸದಲ್ಲಿ ಅಣಬೆಯಾಕಾರದ ಮೋಡದಂತ ಆಕೃತಿ ಕಂಡು ಬಂದಿತ್ತೆನ್ನಲಾಗಿದೆ. ಇದು ವಾಯು ಮಂಡಲದಲ್ಲಿ 2 ಲಕ್ಷದ 13 ಸಾವಿರ ಅಡಿಯ ಆಕೃತಿ ಮೂಡಿಸಿತ್ತು.ಈ ಬಾಂಬ್ ಈವರೆಗಿನ ಅತ್ಯಂತ ಶಕ್ತಿಶಾಲಿ ಪರಮಾಣು ಆಗಿತ್ತು. ಅಮೆರಿಕ 1954ರಲ್ಲಿ ಸ್ಫೋಟಿಸಲಾದ 15 ಮೆಗಾಟನ್ ಕೈಸಲ್ ಬ್ರಾವೋ ಬಾಂಬ್ ಬಳಿಕ ಇದನ್ನು ಬಾಂಬ್ ಕೇಸ್‌ ಒಂದರಲ್ಲಿ ಹಾಕಲಾಗಿತ್ತು.

    ಈ ಬಾಂಬ್‌ನ್ನು ವಿಶೇಷವಾಗಿ ಡಿಸೈನ್ ಮಾಡಲಾದ ವಾಹನವೊಂದರಲ್ಲಿ ಟೆಸ್ಟ್ ಮಾಡಲು ಕೊಂಡೊಯ್ಯಲಾಗಿತ್ತು. ಇದನ್ನು ಕೆಳಕ್ಕೆ ಹಾಕಲು ಪ್ಯಾರಾಚೂಟ್‌ ಬಳಸಲಾಗಿತ್ತು. ಈ ಮೂಲಕ ಕೆಳಗೆ ಬೀಳುವಾಗ ಇದರ ವೇಗ ಕಡಿಮೆ ಮಾಡಲಾಗಿತ್ತು. ಈ ಮೂಲಕ ಬಾಂಬ್ ಸ್ಫೋಟಗೊಳ್ಳುವುದಕ್ಕೂ ಮೊದಲೇ ವಿಮಾನದ ಪೈಲಟ್ ಆ ಅಪಾಯದಿಂದ ಪಾರಾಗಿದ್ದರು

    ಈ ಸ್ಫೋಟದ ಪರಿಣಾಮ ಭೂಕಂಪವೂ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 5.0 ರಷ್ಟು ತೀವ್ರತೆ ದಾಖಲಾಗಿತ್ತು.

    40 ನಿಮಿಷಗಳ ಈ ವಿಡಿಯೋದಲ್ಲಿ ಅಣುಬಾಂಬ್‌ ಪರೀಕ್ಷೆಯ ಸಂಪೂರ್ಣ ಮಾಹಿತಿ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts