More

    ಆರ್​ಆರ್​ಆರ್ ಟೀಸರ್‌ ಬಿಡುಗಡೆ- ಮುಸ್ಲಿಂ ಏಕೆ ಎಂದ ಹಲವರು; ಸರಿಯಾಗಿ ನೋಡಿ ಎಂದರು ಕೆಲವರು!

    ಹೈದರಾಬಾದ್​: ಬಹು ನಿರೀಕ್ಷೆಯ ರಾಜಮೌಳಿ ನಿರ್ದೇಶನದ ರೌದ್ರಂ ರಣಂ ರುಧಿರಮ್ (ಆರ್​ಆರ್​ಆರ್) ಚಿತ್ರದ ಟೀಸರ್‌ ಇಂದು ಬಿಡುಗಡೆಯಾಗಿದೆ. ‌

    ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ನಿರ್ದೇಶನದ ಚಿತ್ರ ಇದಾಗಿದೆ. ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶೂಟಿಂಗ್‌ ಆರಂಭಿಸಲಾಗಿದೆ. ಇದೇ ವರ್ಷಾಂತ್ಯದಲ್ಲಿ ತೆರೆ ಕಾಣಬೇಕಿದ್ದ ಚಿತ್ರಕ್ಕೆ ಕರೊನಾ ಅಡ್ಡಿಬಂದಿದ್ದ ಹಿನ್ನೆಲೆಯಲ್ಲಿ ಅದು ಮುಂಡೂಡಲ್ಪಟ್ಟಿದ್ದು, ಸದ್ಯ ಟೀಸರ್‌ ಬಿಡುಗಡೆ ಮಾಡಲಾಗಿದೆ.

    ವಿಶೇಷ ಟೀಸರ್‌ನಲ್ಲಿ ಜೂನಿಯರ್ ಎನ್‌ಟಿಆರ್‌ ನಟಿಸಿರುವ ಕೋಮರಂ ಭೀಮ್ ಪಾತ್ರವನ್ನು ಪರಿಚಯಿಸಲಾಗಿದೆ. 450 ಕೋಟಿ ರೂಪಾಯಿಗೂ ಅಧಿಕ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಜೂ. ಎನ್​ಟಿಆರ್, ರಾಮ್​ಚರಣ್​ ತೇಜ, ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸುತ್ತಿದ್ದಾರೆ.

    ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಿ ಭಾಷೆಯಲ್ಲಿ ಚಿತ್ರ ತೆರೆಕಾಣಲಿದೆ.

    ದಕ್ಷಿಣ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದೆನಿಸಿರುವ ಈ ಚಿತ್ರದ ಟೀಸರ್‌ ಅನ್ನು ಇದಾಗಲೇ ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿದ್ದಾರೆ. ಇಂದು ಚಿತ್ರದ ಟೀಸರ್ ರಿಲೀಸ್ ಮಾಡುವುದಾಗಿ ಸಿನಿಮಾತಂಡ ಅನೌನ್ಸ್ ಮಾಡಿತ್ತು. ಈ ದಿನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಚಿತ್ರದ ಟೀಸರ್ ರಿಲೀಸ್ ಆಗಿದೆ.

    1920ರ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿ ರೂಪಿಸಲಾದ ಈ ಕಥೆ ಆರ್‌ಆರ್‌ಆರ್‌ನ ಮೂಲ. ಕೋಮರಂ ಭೀಮ್‌ ಶಿಕ್ಷಣ ಪಡೆಯದೆ ಕೆಲ ವರ್ಷ ಹಳ್ಳಿ ತೊರೆಯುತ್ತಾರೆ. ಸ್ವಲ್ಪ ವರ್ಷಗಳ ಬಳಿಕ ವಿದ್ಯಾವಂತನಾಗಿ ಹಳ್ಳಿಗೆ ಮರಳುತ್ತಾರೆ. ಅಲ್ಲಿ ಬುಡಕಟ್ಟು ಜನರ ಹಕ್ಕುಗಳಿಗಾಗಿ ನಿಜಾಮ ಸರ್ಕಾರದ ವಿರುದ್ಧ ನಿರಂತರ ಹೋರಾಡುತ್ತಾರೆ. ಮುಂದೆ ಬ್ರಿಟಿಷರ ಕೈಯಲ್ಲಿ ಹತ್ಯೆಗೊಳಗಾಗುತ್ತಾರೆ. ಆ ಹೋರಾಟಗಾರನನ್ನು ಟೀಸರ್‌ನಲ್ಲಿ ಕಾಣಬಹುದು.

    ಒಂದೇ ಅವಧಿಯಲ್ಲಿ ಜನಿಸಿದ ವಿವಿಧ ಪ್ರದೇಶಗಳ ಇಬ್ಬರು ತೆಲುಗು ಬುಡಕಟ್ಟು ಮುಖಂಡರು ತಮ್ಮ ಹಳ್ಳಿಗಳಿಂದ ಕೆಲವು ವರ್ಷಗಳ ಕಾಲ ಕಣ್ಮರೆಯಾಗಿ ಹಿಂದಿರುಗಿರುವುದು, ಜನರ ಹಕ್ಕುಗಳಿಗಾಗಿ ಶಸ್ತ್ರ ಕೈಗೆತ್ತಿಕೊಂಡದ್ದು ಮತ್ತು ಬ್ರಿಟಿಷರ ಕೈಯಲ್ಲಿ ಹುತಾತ್ಮರಾದ ಚಿತ್ರಣ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಆರ್‌ಸಿಬಿ ತಂಡದ ಹೊಸ ಸ್ಟಾರ್, ಸಿರಾಜ್ ಕಾಲೆಳೆದವರು ಈಗ ಬೆನ್ನು ತಟ್ಟುತ್ತಿದ್ದಾರೆ!

    ಸದ್ಯ ರಿಲೀಸ್ ಆಗಿರುವ ಟೀಸರ್‌ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಕೆಲವರು ಇದು ಇತಿಹಾಸವನ್ನು ತಿರುಚಿದ ಸಿನಿಮಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ, ಕೋಮರಂ ಭೀಮ್‌ ಟೀಸರ್‌ನಲ್ಲಿ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆತ ಮುಸ್ಲಿಂ ಹೇಗಾದ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧಗಳು ಶುರುವಾಗಿದೆ.

    ಆದರೆ ಇದೊಂದು ಇತಿಹಾಸವನ್ನು ತಿರುಚಿದ ಚಿತ್ರ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತಿಹಾಸವನ್ನು ತಿರುಚಿದ ಅನೇಕ ಚಿತ್ರಗಳು ಬಂದಿವೆ. ಇದೀಗ ದಕ್ಷಿಣ ಭಾರತದ ಚಿತ್ರವೂ ಇತಿಹಾಸವನ್ನು ತಿರುಚಲು ಹೊರಟಿದೆ. ಈ ಚಿತ್ರದ ಟೀಸರ್‌ ನೋಡಿ ನನಗೆ ಬಹಳ ನಿರಾಸೆಯಾಗಿದೆ ಎಂದು ರಾಹುಲ್‌ ಎನ್ನುವವರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜನರಿಗೆ ಸುಳ್ಳನ್ನು ನೀಡಲು ನೀವು ಯಾಕೆ ಬಯಸುತ್ತೀರಿ, ಸತ್ಯ ಮರೆಮಾಚುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಇದರ ಪರವಾಗಿ ಹಲವಾರು ಮಂದಿ ಕಮೆಂಟ್‌ ಹಾಕಿದ್ದು, ನೀವು ಟೀಸರ್‌ ಸರಿ ನೋಡಿಲ್ಲ, ಸಿನಿಮಾವನ್ನು ನೋಡಿದ ಮೇಲೆ ಸತ್ಯ ಗೊತ್ತಾಗುತ್ತದೆ ಎಂದು ಕೆಲವರು ಹೇಳಿದ್ದಾರೆ.

    ಒಟ್ಟಿನಲ್ಲಿ ಪರ-ವಿರೋಧದ ಅಲೆ ಎದ್ದಿರುವ ಈ ಚಿತ್ರದ ಬಿಡುಗಡೆಯ ನಂತರವಷ್ಟೇ ಸತ್ಯಾಂಶ ಏನು ಎಂದು ಹೊರಬರಬೇಕಿದೆ.

    ಕೆಲಸಕ್ಕೆ ಅಡ್ಡಿಬಂತು ‘ನಿಯಮ ಉಲ್ಲಂಘನೆ’ ಗಡ್ಡ: ಸಬ್ ಇನ್ಸ್‌ಪೆಕ್ಟರ್ ಅಮಾನತು

    ಸಚಿವ ಅಮಿತ್​ ಷಾ ಹುಟ್ಟುಹಬ್ಬಕ್ಕೆ ಪ್ರಧಾನಿಯಿಂದ ಹೀಗೊಂದು ಟ್ವೀಟ್​​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts