More

    ಕಳೆದ ವರ್ಷಕ್ಕಿಂತ ಪ್ರೇಮಿಗಳು ಡಬಲ್‌? ಬೆಂಗಳೂರು ವಿಮಾನ ನಿಲ್ದಾಣದಿಂದ 5.15 ಲಕ್ಷ ಕೆ.ಜಿ ಗುಲಾಬಿ ಸಾಗಣೆ

    ಬೆಂಗಳೂರು: ಪ್ರೇಮಿಗಳ ದಿನದಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.15 ಲಕ್ಷ ಕೆ.ಜಿ. ಗುಲಾಬಿ ಹೂಗಳ ಸಾಗಾಣೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ದ್ವಿಗುಣವಾಗಿದೆ.

    ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿವರ್ಷ ಪ್ರೇಮಿಗಳ ದಿನದಂದು 25 ವಿಮಾನ ನಿಲ್ದಾಣಗಳಿಗೆ ಗುಲಾಬಿಯನ್ನು ರಫ್ತು ಮಾಡಲಾಗುತ್ತದೆ. ಕಳೆದ ವರ್ಷ 2.17 ಲಕ್ಷ ಕೆ.ಜಿಯಷ್ಟು ರಫ್ತು ಮಾಡಲಾಗಿತ್ತು. ಈ ಬಾರಿ 5.15 ಲಕ್ಷ ಕೆ.ಜಿ. ರಫ್ತು ಮಾಡಿರುವುದು ದುಪ್ಪಟ್ಟು ಹೆಚ್ಚಳ ಕಂಡಿದೆ. ಅದರಲ್ಲೂ ದೇಶಿಯ ಸಾಗಣೆಯಲ್ಲಿಯೇ 3.15 ಲಕ್ಷ ಕೆ.ಜಿ. ರಫ್ತು ಮಾಡಲಾಗಿದ್ದು, ಕಳೆದ ವರ್ಷ ಈ ಪ್ರಮಾಣ ಕೇವಲ 1.03 ಲಕ್ಷ ಕೆ.ಜಿ ಮಾತ್ರ ರಫ್ತು ಮಾಡಲಾಗಿತ್ತು ಎಂದು ಬಿಐಎಎಲ್ ಮುಖ್ಯ ಸ್ಟಾರ್ಟಜಿ ಡೆವಲಪರ್ ಆಫೀಸರ್ ಸಾತ್ಯಕಿ ರಂಗನಾಥ್ ತಿಳಿಸಿದ್ದಾರೆ.

    ಭಾರತ ಅದರಲ್ಲೂ ಕರ್ನಾಟಕ ಗುಲಾಬಿ ರಫ್ತು ಮಾಡುವಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ವರ್ಷ ಗುಲಾಬಿ ರಫ್ತಿನ ಪ್ರಮಾಣ ಹೆಚ್ಚುತ್ತಲೇ ಇದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿ, ಮುಂಬೈ, ಕೊಲ್ಕತ್ತ, ಗೌಹಾಟಿ, ಚಂಡೀಗಢ ಹಾಗೂ ಸಿಂಗಾಪುರ, ಲಂಡನ್, ದುಬೈ ಸೇರಿದಂತೆ ಅಂತರಾಷ್ಟ್ರೀಯ ತಾಣಗಳಿಗೆ ರಫ್ತು ಮಾಡಲಾಗಿದೆ. 2020-21ರ ವರ್ಷದಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 60 ಸಾವಿರ ಮೆಟ್ರಿಕ್ ಟನ್‌ನಷ್ಟು ಕೋಲ್ಡ್ ಸ್ಟೋರೇಜ್ ಹೊಂದಿದ್ದು, ಕಡಿಮೆ ಬಾಳಿಕೆ ಅವಧಿಯ ಪದಾರ್ಥಗಳ ಸಾಗಣೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

    ರೈಲ್ವೆ ಇಲಾಖೆಯಿಂದ ಮತ್ತೊಂದು ಮೈಲಿಗಲ್ಲು: ಇನ್ಮುಂದೆ ಮನೆಯ ಬಾಗಿಲಿಗೇ ಬರಲಿದೆ ಎಲ್ಲಾ ವಿಧದ ಪಾರ್ಸೆಲ್‌!

    ಮಾರಾಟ ಮಾಡಿದ್ದ ಜಮೀನನ್ನೇ ಕಬಳಿಸಿದ ಶಾಸಕ ಜಮೀರ್‌? ಕೋರ್ಟ್‌ ಆದೇಶದ ಮೇರೆಗೆ ಎಫ್‌ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts