More

    ಮೂರು ಬಾರಿ ಶಾಸಕಿಯಾಗಿದ್ದ ಮಾಜಿ ಸಚಿವೆ ರೇಣುಕಾ ರಾಜೇಂದ್ರನ್​ ನಿಧನ

    ಬೆಂಗಳೂರು: ಮೂರು ಬಾರಿ ಶಾಸಕಿಯಾಗಿ, ಗುಂಡೂರಾವ್​ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ರೇಣುಕಾ ರಾಜೇಂದ್ರನ್ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

    ಇತ್ತೀಚೆಗೆ ಇವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಅದರಿಂದ ಅವರು ಗುಣಮುಖರಾಗಿದ್ದರು. ಇದೀಗ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಚಿಕ್ಕಬಳ್ಳಾಪುರ ಮೂಲದ ರೇಣುಕಾ ಅವರು, ಇಬ್ಬರು ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ಪತಿ ರಾಜೇಂದ್ರನ್ ಅವರು ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಮೇಲ್ಮನೆ ಅವಾಂತರಕ್ಕೆ ಜೆಡಿಎಸ್​ನ ಅವಕಾಶವಾದಿ ರಾಜಕಾರಣವೇ ಕಾರಣವಾಯಿತಾ?

    ದೇವರಾಜ ಅರಸು ಅವರು ಕೆಳವರ್ಗದ ಶೋಷಿತ ಜನರನ್ನು ಮೇಲಕ್ಕೆತ್ತಿ ರಾಜಕೀಯದಲ್ಲಿ ಸ್ಥಾನಮಾನ ನೀಡುವ ತಯಾರಿಲ್ಲದ್ದ ಸಂದರ್ಭದಲ್ಲಿ ಅಂದರೆ 1972ರಲ್ಲಿ, ರೇಣುಕಾ ರಾಜೇಂದ್ರನ್ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಆ ಸಂದರ್ಭದಲ್ಲಿ ಶಾಸಕರಾಗಿದ್ದ ಮೂವರು ದಲಿತರಲ್ಲಿ ರೇಣುಕಾ ಕೂಡ ಒಬ್ಬರು. ಇವರು ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದರು. 1978ರಲ್ಲಿಯೇ ಇವರು ಇನ್ನೊಮ್ಮೆ ಶಾಸಕಿಯಾಗಿ ಗೆದ್ದುಬಂದರು.

    1980ರಲ್ಲಿ ಆರ್. ಗುಂಡೂರಾವ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೇಣುಕಾ ರಾಜೇಂದ್ರನ್ ಸಚಿವರಾಗಿದ್ದರು. ಆದರೆ ಭ್ರಷ್ಟಾಚಾರ ಆರೋಪ ಇವರ ಮೇಲೆ ಸುತ್ತಿಕೊಂಡಿತ್ತು. ಅನೇಕ ವರ್ಷಗಳ ನಂತರ ಇವರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಸಾಬೀತಾಗಿತ್ತು.

    1989ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದು, ಮೂರನೇ ಬಾರಿಗೆ ಶಾಸಕಿಯಾದರು. ಹೀಗೆ ಐದು ಬಾರಿ ಚುನಾವಣಾ ಕಣಕ್ಕಿಳಿದಿದ್ದ ರೇಣುಕಾ ಅವರು ಕಳೆದೊಂದು ದಶಕದಿಂದ ರಾಜಕೀಯದಿಂದ ದೂರವೇ ಉಳಿದಿದ್ದರು.

    ಮಧ್ಯಾಹ್ನ ಮುಹೂರ್ತ ಇದ್ರೆ, ವರ ಬಂದದ್ದು ರಾತ್ರಿ! ಕೋಪದಿಂದ ಬೇರೆಯವರನ್ನು ಮದ್ವೆಯಾದ ವಧು

    ನಾಯಿಗೆ ಹಾಕಲು ರೊಟ್ಟಿ ಮಾಡಿಲ್ಲವೆಂದು ಅಕ್ಕನನ್ನೇ ಗುಂಡಿಕ್ಕಿ ಕೊಂದ ತಮ್ಮ!

    ಮತಾಂತರ ಆಗಿಹೋಗಿದೆ, ಮೂರು ತಿಂಗಳ ಗರ್ಭಿಣಿ: ಗಂಡನನ್ನು ಬಿಟ್ಟುಬಿಡಿ ಎಂದ ಯುವತಿ!

    ಈಗ ವಿರೋಧಿಸುತ್ತಿರುವ ಕೃಷಿ ಕಾಯ್ದೆ ಬೇಕೆಂದು ಅಂದು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದ ಇದೇ ರೈತರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts