More

    ಸರ್ಕಾರಿ ಹಣ ಪತಿಯ ಟ್ರಸ್ಟ್‌ಗೆ: ಮಾಜಿ ಸಚಿವೆಗೆ ಐದು ವರ್ಷ ಜೈಲು- ತೀರ್ಪು ಪ್ರಕಟಿಸುತ್ತಿದ್ದಂತೆಯೇ ಅನಾರೋಗ್ಯ!

    ಚೆನ್ನೈ: ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಸರ್ಕಾರಿ ಹಣ ದುರ್ಬಳಕೆ ಮಾಡಿರುವ ಆರೋಪ ಹೊತ್ತಿದ್ದ ತಮಿಳುನಾಡು ಮಾಜಿ ಸಚಿವೆ ಆರ್.ಇಂದಿರಾ ಕುಮಾರಿ ಅವರಿಗೆ ತಮಿಳುನಾಡಿನ ವಿಶೇಷ ವಿಚಾರಣಾ ಕೋರ್ಟ್‌ ಐದು ವರ್ಷಗಳ ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಅವರ ಪತಿ ನಿವೃತ್ತ ಅಧಿಕಾರಿ ಶಣ್ಮುಗಂ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ಪ್ರಕರಣ ಸಂಬಂಧ ಇಂದಿರಾ ಕುಮಾರಿಯವರ ಪಿಎ ಆಗಿದ್ದ ವೆಂಕಟಕೃಷ್ಣನ್ ಅವರಿಗೆ 10 ಸಾವಿರ ರೂ ದಂಡ ವಿಧಿಸಿ ಕೇಸ್​​ನಿಂದ ಖುಲಾಸೆಗೊಳಿಸಲಾಗಿದೆ.

    1991-1996ರಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸರ್ಕಾರದಲ್ಲಿ ಜೆ.ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಇಂದಿರಾ ಕುಮಾರಿ ಸಮಾಜ ಕಲ್ಯಾಣ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಶ್ರವಣದೋಷ ಮತ್ತು ದೃಷ್ಟಿಹೀನತೆ ಹೊಂದಿರುವ ವಿಶೇಷ ಮಕ್ಕಳಿಗೆ ಶಾಲೆ ನಿರ್ಮಿಸಲು ತಮ್ಮ ಪತಿ ನಡೆಸುತ್ತಿದ್ದ ಟ್ರಸ್ಟ್​​ಗೆ ಅಕ್ರಮವಾಗಿ ಸರ್ಕಾರದಿಂದ 15.45 ಲಕ್ಷ ರೂಪಾಯಿ ಹಣ ನೀಡಿದ್ದರು.

    ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದಾಗ ತಮಿಳುನಾಡಿನ ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.

    ಈ ಶಿಕ್ಷೆ ಕೇಳುತ್ತಲೇ ಅಲ್ಲಿಯೇ ಇದ್ದ ಇಂದಿರಾ ಕುಮಾರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ವಿಚಾರಣೆಯನ್ನು ನ್ಯಾಯಾಧೀಶರಾದ ಅಲಿಸಿಯಾ ನಡೆಸಿ ಶಿಕ್ಷೆ ವಿಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಅಧಿಕಾರಿ ಕಿರುಬಾಕರನ್​​ ಅವರು ಕೂಡ ಭಾಗಿಯಾಗಿದ್ದರು. ಆದರೆ ಅವರು ಇದಾಗಲೇ ಮೃತಪಟ್ಟಿದ್ದಾರೆ.

    ಕೋವಿಡ್‌ಗೆ ಬಲಿಯಾದ ಚೀಟಿದಾರ- ಉಲ್ಟಾ ಹೊಡೆದ ಮಕ್ಕಳು: ನೂರಾರು ಜನರ ಸ್ಥಿತಿ ಅಯೋಮಯ!

    ಈ ಅರ್ಹತೆಗಳಿವೆಯೆ? ಹಾಗಿದ್ರೆ ನನ್ನ ಸೊಸೆಯಾಗ್ಬೋದು: ಫೇಸ್‌ಬುಕ್‌ನಲ್ಲಿ ವಿವಾದಿತ ಧರ್ಮಗುರು ಆಹ್ವಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts