More

    ತೆಲಂಗಾಣದ ಮೊದಲ ಗೃಹಸಚಿವ ರೆಡ್ಡಿ ನಿಧನ

    ಹೈದರಾಬಾದ್ : ತೆಲಂಗಾಣದ ಮೊದಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ನಾಯನಿ ನರಸಿಂಹ ರೆಡ್ಡಿ ಇಂದು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

    ಕರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು, ಶ್ವಾಸಕೋಶದ ಸಮಸ್ಯೆಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿದ್ದ ರೆಡ್ಡಿ ಆನಂತರ ಆರೋಗ್ಯ ಹದಗೆಟ್ಟ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಶ್ವಾಸಕೋಶದಲ್ಲಿ ತೀವ್ರ ಹಾನಿಯಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

    ಇದನ್ನೂ ಓದಿ: ಅನಂತಪದ್ಮನಾಭನ ಗರ್ಭಗುಡಿಗೆ ಬಂದ ಮೊಸಳೆ: ಇದೊಂದು ಪವಾಡ ಎಂದ ಭಕ್ತರು

    ಹೈದರಾಬಾದ್ ಟ್ರೇಡ್ ಯೂನಿಯನ್ ಹಿರಿಯ ಮುಖಂಡರಾಗಿದ್ದ ಇವರು ತೆಲಂಗಾಣ ಪ್ರತ್ಯೇಕ ರಾಜ್ಯದ ಪ್ರಮುಖರಾಗಿದ್ದರು. ಆಂಧ್ರ ವಿಭಜನೆಗೂ ಮೊದಲು 1978, 1985 ಮತ್ತು 2014 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

    ರೆಡ್ಡಿ ನಿಧನಕ್ಕೆ ದುಃಖವ್ಯಕ್ತಪಡಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಚಳುವಳಿಯಲ್ಲಿ ಹಾಗೂ ರಾಜ್ಯ ಸರಕಾರದ ಸಚಿವರಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡರು.

    ಮೂರನೆಯ ಪತಿ ಜತೆಯೂ ಬಿರುಕು? ಗಂಡ ಸರಿಯಿಲ್ಲ ಎಂದು ಕಣ್ಣೀರಿಟ್ಟ ಬಿಗ್​ಬಾಸ್​ ಸ್ಪರ್ಧಿ, ನಟಿ

    ಅನುಮತಿಯಿಲ್ಲದೇ ಸಿಬಿಐಗೆ ನೋ ಎಂಟ್ರಿ ಎಂದ ಮಹಾರಾಷ್ಟ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts