More

    ರಾಮಮಂದಿರ ಭೂಮಿ ಪೂಜೆ v/s ಇಂದಿರಾಗಾಂಧಿ ಭಾಷಣ: ಏಟು-ತಿರುಗೇಟು

    ನವದೆಹಲಿ: ಇದೇ 5ರಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆಯ ರಾಮಮಂದಿರದ ಭೂಮಿಪೂಜೆಯ ಕಾರ್ಯಕ್ರವನ್ನ ಡಿ.ಡಿ.ವಾಹಿನಿಯಲ್ಲಿ ನೇರ ಪ್ರಸಾರ ಮಾಡಲು ಇದಾಗಲೇ ಸಿದ್ಧತೆ ನಡೆದಿರುವ ಬೆನ್ನಲ್ಲೇ ವಿರೋಧ ಪಕ್ಷಗಳಿಂದ ಭಾರಿ ಟೀಕೆಗಳು ವ್ಯಕ್ತವಾಗಿವೆ.

    ಇಂಥ ಕಾರ್ಯಕ್ರಮವನ್ನು ನೇರಪ್ರಸಾರ ಮಾಡುವ ಮೂಲಕ ಸಂಪನ್ಮೂಲಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ನೇರಪ್ರಸಾರದ ಅವಶ್ಯಕತೆ ಏನಿದೆ ಎಂದೆಲ್ಲಾ ಬಿಜೆಪಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ.

    ಇದೇನು ಸರ್ಕಾರಿ ಕಾರ್ಯಕ್ರಮವಲ್ಲ. ಅದನ್ನು ಸರ್ಕಾರದ ಚಾನೆಲ್‌ ಒಂದರಲ್ಲಿ ನೇರ ಪ್ರಸಾರ ಮಾಡುವುದು ಸರಿಯಲ್ಲ, ಇದರಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ.

    ಇದರ ಬೆನ್ನಲ್ಲೇ ಸರ್ಕಾರದ ವಾಹಿನಿಯಾಗಿರುವ ಡಿಡಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಮುಂದಾಗಿದ್ದಕ್ಕೆ ಸಿಪಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಪಿಐ ಸಂಸದ ಬಿನೊಯ್ ವಿಶ್ವಂ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಜಾತ್ಯತೀತತೆ ಮತ್ತು ಧಾರ್ಮಿಕ ಸಾಮರಸ್ಯದ ತತ್ವಗಳ ಮೇಲೆ ಸ್ಥಾಪಿತವಾದ ದೇಶಕ್ಕೆ ರಾಷ್ಟ್ರೀಯ ವಾಹಿನಿಯಾಗಿರುವ ದೂರದರ್ಶನ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯವನ್ನು ಪ್ರಸಾರ ಮಾಡುವುದು ರಾಷ್ಟ್ರೀಯ ಸಮಗ್ರತೆಯ ಅಂಗೀಕೃತ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಪತ್ರ ಬರೆದಿದ್ದಾರೆ.

    ಇಂಥ ಯಾವುದೇ ಕಾರ್ಯಕ್ರಮವನ್ನು ಹಿಂದೆಂದೂ ನೇರ ಪ್ರಸಾರ ಮಾಡಿಲ್ಲ. ಈ ಕಾರ್ಯಕ್ರಮ ಮಾತ್ರ ಏಕೆ ಮಾಡಬೇಕು ಎಂದು ಕೆಲವರ ಪ್ರಶ್ನೆಗೆ ತಿರುಗೇಟು ನೀಡಿರುವ ಬಿಜೆಪಿ, ದೂರದರ್ಶನ ನ್ಯಾಷನಲ್‌ ಚಾನೆಲ್‌ನಲ್ಲಿ 1980ರ ಉತ್ತರ ಪ್ರದೇಶದ ದಿಯೋಬಂದ್‌ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಮಾಡಿದ ಭಾಷಣದ ವಿಡಿಯೋವನ್ನು ಟ್ಚಿಟ್ಟರ್‌ನಲ್ಲಿ ಅಪ್ಲೋಡ್‌ ಮಾಡಿ ಟೀಕಿಸಿದವರಿಗೆ ತಿರುಗೇಟು ನೀಡಿದೆ.

    ಭಾರತ ಮತ್ತು ಜಗತ್ತಿಗೆ ದಾರುಲ್ ಉಲೂಮ್ ನಿಜವಾದ ಇಸ್ಲಾಮಿಕ್ ಸಂಪ್ರದಾಯದ ಸೇವೆ ಸಲ್ಲಿಸುತ್ತಲೇ ಇರುತ್ತದೆ. 1980ರ ದಿಯೋಬಂದ್‌ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಮಾಡಿದ ಭಾಷಣದದ ವಿಡಿಯೋ ಇದಾಗಿದ್ದು, ಭೂಮಿ ಪೂಜೆಯ ಲೈವ್‌ ವಿರೋಧಿಸುವ ಜನರು ಡಿಡಿ ಪ್ರಸಾರ ಮಾಡಿರುವ ಇಂದಿರಾ ಅವರ ದಿಯೋಬಂದ್ ಭೇಟಿಯ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದೆ. (ಏಜೆನ್ಸೀಸ್‌)

    ಇದನ್ನೂ ಓದಿ: ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್‌ಚಾರ್ಜ್‌: ಆರೋಗ್ಯ ಸ್ಥಿರ

    ಕಾಂಗ್ರೆಸ್‌ ಮುಖಂಡನ ಫೋನ್‌ನಿಂದ ಅಶ್ಲೀಲ ಫೋಟೋ ಹರಿದಾಟ- ಅಲ್ಲೋಲ ಕಲ್ಲೋಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts