More

    ವಿದ್ಯಾರ್ಥಿಗಳು ಅಂಬೇಡ್ಕರ್ ವಿಚಾರಧಾರೆ ಓದಲಿ

    ಶಿಗ್ಗಾಂವಿ: ದೇಶದ ಎಲ್ಲ ದಾರ್ಶನಿಕರಿಗಿಂತ ದೊಡ್ಡ ವ್ಯಕ್ತಿತ್ವ ಹೊಂದಿದ್ದವರು ಡಾ. ಭೀಮರಾವ್ ಅಂಬೇಡ್ಕರ್. ಅವರ ಚಿಂತನೆ, ಸಾಮಾಜಿಕ ಹೋರಾಟಗಳು ವಿಭಿನ್ನವಾಗಿವೆ. ಅವರ ಹೋರಾಟಗಳ ಕುರಿತು ಸಾಕಷ್ಟು ಪುಸ್ತಕಗಳು ಲಭ್ಯವಿದ್ದು, ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಓದಬೇಕು ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಶೈಲ ಹುದ್ದಾರ ಹೇಳಿದರು.

    ಪಟ್ಟಣದ ರಂಭಾಪುರಿ ವೀರಗಂಗಾಧರ ಪದವಿ ಕಾಲೇಜ್​ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್ ಓದá- ಭಾಷಣ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಎಚ್.ಆರ್. ದೇವಿಹೊಸೂರ ಮಾತನಾಡಿ, ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದಾಗ ಸಮಾಜಮುಖಿ ಕಾನೂನುಗಳನ್ನು ಜಾರಿಗೆ ತಂದಿದ್ದರು. ಅವರು ಹಿಂದು ಕೋಡ್ ಬಿಲ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು. ಅದರಲ್ಲಿ ದಲಿತರ ಬಗ್ಗೆ ಉಲ್ಲೇಖವಿರಲಿಲ್ಲ. ಬದಲಾಗಿ ಮಹಿಳಾ ಸಬಲೀಕರಣ, ಮಹಿಳೆಯರ ಶಿಕ್ಷಣ ಕುರಿತು ಉಲ್ಲೇಖಸಲಾಗಿತ್ತು. ಆದರೆ, ಸಂಸತ್ತಿನಲ್ಲಿ ಹಿಂದು ಕೋಡ್ ಬಿಲ್ ಅಂಗೀಕಾರವಾಗದ ಕಾರಣ ಅವರು ಮನನೊಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿರಾಶಾವಾದಿ ವ್ಯಕ್ತಿಯಾಗಿದ್ದರು ಎಂದರು.

    ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ ವಿಷಯ ಕುರಿತು ಡಾ. ಜಯರಾಮಯ್ಯ ಉಪನ್ಯಾಸ ನೀಡಿದರು. ಪ್ರಾಚಾರ್ಯ ಪಿ.ಸಿ. ಹಿರೇಮಠ, ಡಾ. ಡಿ.ಎ. ಗೊಬ್ಬರಗುಂಪಿ ಮಾತನಾಡಿದರು.

    ಭಾಷಣ ಸ್ಪರ್ಧೆ ವಿಜೇತರಾದ ಸಾದಿಕ್ ನದಾಫ್, ಗೌರಮ್ಮ ಹೊಸಮನಿ, ಗೀತಾ ಚಂದಾಪುರ, ನಿಖಿತಾ ಸವಣೂರ, ಪೂಜಾ ಕೆಂಗಾಪುರ ಅವರಿಗೆ ಅಂಬೇಡ್ಕರ್ ಜೀವನಾಧಾರಿತ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ರಾಜರತ್ನ ದಾದುಗೌಡರ, ಶಂಕರ ಅರ್ಕಸಾಲಿ, ಫಕೀರಪ್ಪ ಎಸ್. ಶಿವಣ್ಣವರ, ಶರೀಫ ಮಾಕನವರ, ಬಸವರಾಜ ಶಿಗ್ಗಾಂವಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts