More

    ಸಂಸತ್ ಕಲಾಪ ನುಂಗಿದ ಕೃಷಿ ಕಾನೂನು: ಗರಂ ಆದ ವಾತಾವರಣ- ನಾಳೆಗೆ ಮುಂದೂಡಿಕೆ

    ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್ ಮಂಡನೆಯ ಮರುದಿನವಾದ ಇಂದು ರಾಜ್ಯಸಭೆಯ ಕಲಾಪ ಆರಂಭಗೊಂಡಿತ್ತು. ಆದರೆ ‘ಕೃಷಿ ಕಾನೂನು’ ಮತ್ತು ರೈತರ ಹೋರಾಟ ಭಾರಿ ಕೋಲಾಹಲ ಸೃಷ್ಟಿಸಿ, ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

    ಕೃಷಿ ಕಾನೂನನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದ ವಿಪಕ್ಷಗಳು ಸಭಾತ್ಯಾಗ ಮಾಡಿದವು. ರೈತರ ಪ್ರತಿಭಟನೆಯ ಬಗ್ಗೆ ಚರ್ಚಿಸಲು ನಾಳೆ ಅವಕಾಶ ನೀಡುತ್ತೇನೆ ಎಂದು ಸಭಾಪತಿ ವೆಂಕಯ್ಯನಾಯ್ಡು ತಿಳಿಸಿದರು. ಈ ಕುರಿತು ಮಂಡನೆ ಮಾಡಿದ್ದ ನಿಲುವಳಿಗೆ ಸಂಬಂಧಿಸಿದಂತೆ ಮಾತನಾಡಿದ್ದ ನಾಯ್ಡ, ನಾಳೆ ಅವಕಾಶ ನೀಡುವುದಾಗಿ ಹೇಳಿದರು. ಆದರೆ ಈ ಮಾತನ್ನು ಕೇಳದ ವಿಪಕ್ಷಗಳು ಗದ್ದಲ ಸೃಷ್ಟಿಸಿದವು.

    ಮಾತ್ರವಲ್ಲದೇ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸಿದರು. ವೆಂಕಯ್ಯನಾಯ್ಡು ಅವರು ಸದಸ್ಯರನ್ನು ಸಮಾಧಾನಗೊಳಿಸುವ ಪ್ರಯತ್ನಿಸಿದರೂ ಪ್ರಯೋಜವಾಗಲಿಲ್ಲ. “ಕೃಷಿ ಕಾನೂನುಗಳ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಇದೆ ಎಂದು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಈ ಕುರಿತು ಸದನದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂಬುದು ತಪ್ಪು ಅಭಿಪ್ರಾಯ. ಮತದಾನಕ್ಕೆ ಸಂಬಂಧಿಸಿದಂತೆ, ಜನರು ತಮ್ಮದೇ ಆದ ವಾದಗಳನ್ನು ಹೊಂದಿರಬಹುದು ಆದರೆ ಪ್ರತಿ ಪಕ್ಷವು ತಮ್ಮ ಭಾಗವನ್ನು ಪೂರ್ಣಗೊಳಿಸಿ ಸಲಹೆಗಳನ್ನು ನೀಡಿತ್ತು. ಆದಾಗ್ಯೂ
    ಸದಸ್ಯರ ಪ್ರತಿಭಟನೆ ಸರಿಯಲ್ಲ ಎಂದು ವೆಂಕಯ್ಯನಾಯ್ಡು ಹೇಳಿದರು.

    ಇಷ್ಟು ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಸೇರಿದಂತೆ ಕೆಲವು ಸದಸ್ಯರು ಸಭಾತ್ಯಾಗ ಮಾಡಿದರು. ಇದೇ ಗಲಾಟೆಯಲ್ಲಿ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತಾದರೂ ಪ್ರತಿ ಬಾರಿಯೂ ಗದ್ದಲವೇ ಸೃಷ್ಟಿಯಾಗಿದ್ದರಿಂದ ನಾಳೆ ಬೆಳಗ್ಗೆ 9 ಗಂಟೆಗೆ ಕಲಾಪವನ್ನು ಮುಂದೂಡಲಾಯಿತು.

    ಆಕ್ಸ್‌ಫರ್ಡ್ ನಿಘಂಟಿನಲ್ಲಿ ಸೇರಿದ ‘ಆತ್ಮನಿರ್ಭರತಾ’: ವರ್ಷದ ಶಬ್ದವಾಗಿ ಆಯ್ಕೆ

    ಚಿನ್ನದುರೈ ವೆಡ್ಸ್​ ಶ್ವೇತಾ- ಮದುಮಕ್ಕಳನ್ನು ಆಶೀರ್ವದಿಸಲು ನೀರಿನೊಳಕ್ಕೆ ಧುಮುಕಿ…!

    ರಿಮೋಟ್​ ಕಂಟ್ರೋಲ್​​ ಸಹಾಯದಿಂದ ನಿದ್ರಿಸುತ್ತಾಳೀಕೆ! 14 ವರ್ಷ ನಿದ್ದೆಗೆಟ್ಟವಳ ವಿಚಿತ್ರ ಕೇಸಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts