More

    ‘ನಾನು ಬ್ರಾಹ್ಮಣ’ ಎಂದ ರೈನಾ: ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ- ಅಭಿಮಾನಿಗಳನ್ನು ಕಳಕೊಂಡ ಕ್ರಿಕೆಟಿಗ!

    ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣ, ಬ್ರಾಹ್ಮಣ್ಯದ ಕುರಿತಂತೆ ನಡೆಯುತ್ತಿದ್ದ ವಾದ-ಪ್ರತಿವಾದ ಸ್ವಲ್ಪ ತಣ್ಣಗಾಗುತ್ತಲೇ ಇದೇ ಶಬ್ದ ಇದೀಗ ಮತ್ತೊಮ್ಮೆ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ.

    ಸಂದರ್ಶನವೊಂದರ ವೇಳೆ ನಾನು ಬ್ರಾಹ್ಮಣ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಸಹಜವಾಗಿ ನೀಡಿರುವ ಹೇಳಿಕೆ ಇದೀಗ ಜಾತಿಯ ಸ್ವರೂಪ ಪಡೆದು ಜಾಲತಾಣದಲ್ಲಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದ್ದು, ಟೀಕೆಗಳ ಸುರಿಮಳೆಯೇ ಶುರುವಾಗಿಬಿಟ್ಟಿದೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ತಮಿಳುನಾಡು ಪ್ರೀಮಿಯರ್ ಲೀಗ್ ಕೂಟದಲ್ಲಿ ಸುರೇಶ್ ರೈನಾ ವೀಕ್ಷಕ ವಿವರಣೆ ನೀಡುತ್ತಿದ್ದರು. ಈ ವೇಳೆ ತಮಿಳುನಾಡಿನ ಸಂಸ್ಕೃತಿಯನ್ನು ನೀವು ಹೇಗೆ ಅಳವಡಿಸಿಕೊಂಡಿದ್ದೀರಿ ಎಂದು ಅವರಿಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ರೈನಾ, 2004ರಿಂದಲೂ ನಾನು ಚೆನ್ನೈನಲ್ಲಿ ಆಡುತ್ತಿದ್ದೇನೆ. ನಾನೊಬ್ಬ ಬ್ರಾಹ್ಮಣನಾದ ಕಾರಣ ಇಲ್ಲಿನ ಸಂಸ್ಕೃತಿಯನ್ನು ಬೇಗನೇ ಅರಿಯಲು ಸಾಧ್ಯವಾಗಿದೆ ಎಂದು ಹೇಳಿಕೆ ನೀಡಿದರು.

    ಬ್ರಾಹ್ಮಣ ಎಂಬ ಶಬ್ದ ಇವರ ಬಾಯಿಯಿಂದ ಹೊರಟಿರುವುದೇ ಅಪರಾಧವಾಗಿಬಿಟ್ಟಿದೆ. ಹಲವರು ಇವರ ಹೇಳಿಕೆಗೆ ಕಿಡಿ ಕಾರುತ್ತಿದ್ದಾರೆ. ಇಷ್ಟು ವರ್ಷ ಚೆನ್ನೈನಲ್ಲಿ ಇದ್ದರೂ ಇಲ್ಲಿಯ ಸಂಸ್ಕೃತಿ ನೀವು ಅರಿತಿಲ್ಲ, ನಿಮ್ಮದೇ ಒಂದು ಊಹಾಪೋಹದ ಮಾತನಾಡುತ್ತಿದ್ದೀರಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ಚೆನ್ನೈ ಬಗ್ಗೆ ಈ ರೀತಿ ಮಾತನಾಡುವ ಅಧಿಕಾರ ನಿಮಗಿಲ್ಲ ಎಂದಿದ್ದಾರೆ ಇನ್ನು ಕೆಲವರು.

    ಸುರೇಶ್‌ ರೈನಾ ಬಗ್ಗೆ ಅಪಾರ ವಿಶ್ವಾಸ, ಪ್ರೀತಿ ಹೊಂದಿದ್ದೆ. ಆದರೆ ಈ ರೀತಿ ಅವರು ಹೇಳಿಕೆ ನೀಡಿರುವುದರಿಂದ ಅವರ ಮೇಲಿನ ಪ್ರೀತಿ ಹೊರಟುಹೋಗಿದೆ. ಅವರನ್ನು ಹೇಟ್‌ ಮಾಡುತ್ತಿದ್ದೇನೆ ಎಂಬ ಕಮೆಂಟ್‌ಗಳೂ ಬಂದಿವೆ. ನಾವಂತೂ ಇನ್ನುಮುಂದೆ ಇವರ ಅಭಿಮಾನಿಯಲ್ಲ, ಇಂಥದ್ದೊಂದು ಕೆಟ್ಟಿ ಸಂಸ್ಕೃತಿಗೆ ಇವರು ನಾಂದಿ ಹಾಡಿದ್ದಾರೆ ಎಂದು ಹಲವು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ!

    ಇದೇ ವೇಳೆ ಕೆಲವರು ರೈನಾ ಸುರೇಶ್‌ ಪರವಾಗಿಯೂ ಮಾತನಾಡಿದ್ದು, ಈ ಹೇಳಿಕೆಯಲ್ಲಿ ಏನೂ ತಪ್ಪು ಕಾಣಿಸುತ್ತಿಲ್ಲ, ಈ ರೀತಿ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದಿದ್ದಾರೆ.

    ಬ್ಲೂ ಫಿಲ್ಮ್‌ ನೇರಪ್ರಸಾರಕ್ಕೆ ಪ್ಲ್ಯಾನ್‌- ಪೊಲೀಸರಿಗೆ 25 ಲಕ್ಷ ರೂ. ಲಂಚ? ಇ- ಮೇಲ್‌ನಿಂದ ರಹಸ್ಯ ಸ್ಫೋಟ!

    ಮನೆ ಬಾಗಿಲಿಗೆ ಬಂದ ನಾಗರಹಾವನ್ನು ಅರ್ಧ ಗಂಟೆ ತಡೆದುನಿಲ್ಲಿಸಿದ ಬೆಕ್ಕು! ಫೋಟೋ ವೈರಲ್

    ಎಟಿಎಂನಿಂದ ಹಣ ವಿತ್‌ಡ್ರಾ: ಆಗಸ್ಟ್‌1 ರಿಂದ ಬದಲಾಗಲಿದೆ ನಿಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts