More

    ರೈಲಿನಡಿ ಸಿಲುಕಿದರೂ ಮರುಜೀವ ಪಡೆದ ವೃದ್ಧ- ಮೈ ಝುಂ ಎನ್ನುವ ವಿಡಿಯೋ ಇಲ್ಲಿದೆ ನೋಡಿ..

    ಮುಂಬೈ: ಆಯಸ್ಸು ಗಟ್ಟಿಯಾಗಿದ್ದರೆ ಎಂಥ ಸಾವು ಹತ್ತಿರ ಬಂದರೂ ಅದು ವಾಪಸ್​ ಹೋಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

    ರೈಲ್ವೆ ಹಳಿ ದಾಟುವ ವೇಳೆ ಆಯತಪ್ಪಿ ಬಿದ್ದು ರೈಲಿಗೆ ಸಿಲುಕಿಕೊಳ್ಳುತ್ತಿದ್ದ ವೃದ್ಧನೊಬ್ಬ ಕೂದಲೆಳೆ ಅಂತರದಿಂದ ಪಾರಾಗಿ ಬಂದಿರುವ ಘಟನೆ ಇದಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರ ಮೈ ಝುಂ ಎನ್ನಿಸುವಂತಿದೆ.

    ಮುಂಬೈನ ಕಲ್ಯಾಣ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣದ ಫ್ಲಾಟ್‍ಫಾರ್ಮ್ ನಂ.4ರಲ್ಲಿ ಮಧ್ಯಾಹ್ನ 12.45ಕ್ಕೆ ಈ ಘಟನೆ ನಡೆದಿದೆ. ಹರಿ ಶಂಕರ್ ಎಂಬ 70 ವರ್ಷದ ವೃದ್ಧರೊಬ್ಬರು ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಚೀಫ್ ಪರ್ಮನೆಂಟ್ ವೇ ಇನ್ಸ್‌ಪೆಕ್ಟರ್‌ ಸಂತೋಷ್ ಕುಮಾರ್, ಲೋಕೊ ಪೈಲಟ್ ಎಸ್.ಕೆ ಪ್ರಧಾನ್ ಮತ್ತು ಸಹಾಯಕ ಲೋಕೊ ಪೈಲಟ್ ರವಿಶಂಕರ್‌ಗೆ ಕೂಗಿ ಹೇಳುವ ಮೂಲಕ ಎಚ್ಚರಿಸಿದ್ದಾರೆ. ಆಗ ಇಬ್ಬರು ಪೈಲಟ್‍ಗಳು ತಕ್ಷಣ ಬ್ರೇಕ್ ಹಾಕಿದ್ದಾರೆ. ಕೂಡಲೇ ರೈಲಿನ ಕೆಳಗೆ ಸಿಲುಕಿಕೊಂಡಿದ್ದ ವೃದ್ಧನನ್ನು ಹೊರ ಎಳೆದಿದ್ದಾರೆ.

    ಸಾಧಾರಣವಾಗಿ ರೈಲಿಗೆ ಬ್ರೇಕ್​ ಹಾಕಿದರೆ ಅದು ಬಹುದೂರವರೆಗೆ ಹೋಗಿ ನಿಲ್ಲುತ್ತದೆ. ಇಲ್ಲಿ ವೃದ್ಧನ ಆಯಸ್ಸು ಗಟ್ಟಿ ಇತ್ತೆಂದು ಕಾಣಿಸುತ್ತದೆ. ರೈಲು ವೃದ್ಧನನ್ನು ತಲುಪುವ ಮೊದಲೇ ವಿಷಯ ತಿಳಿದ ತಕ್ಷಣ ಬ್ರೇಕ್​ ಹಾಕಿದ್ದರಿಂದ ರೈಲಿನ ಅಡಿ ವೃದ್ಧ ಸಿಲುಕಿದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹರಿಶಂಕರ್​ ಅವರ ಜೀವವನ್ನು ರಕ್ಷಿಸಿದ ಕಾರ್ಯವನ್ನು ಮೆಚ್ಚಿ ಕೇಂದ್ರ ರೈಲ್ವೆಯ ಜನರಲ್ ಮ್ಯಾನೇಜರ್ ಅಲೋಕ್ ಕನ್ಸಾಲ್ ಇಬ್ಬರು ಲೋಕೊ ಪೈಲಟ್‍ಗಳಿಗೆ ಹಾಗೂ ಸಿಪಿಡಬ್ಲೂಐಗೆ ತಲಾ ಎರಡು ಸಾವಿರ ರೂಪಾಯಿಗಳ ನಗದನ್ನು ಬಹುಮಾನವಾಗಿ ಘೋಷಿಸಿದ್ದಾರೆ.

    ಬೆಂಗಳೂರಿನಲ್ಲೊಂದು ಶಾಕಿಂಗ್​ ಘಟನೆ: ಬ್ಯಾಂಕ್​ ಒಳಗೆ ನುಗ್ಗಿ ರೌಡಿಯ ಭೀಕರ ಹತ್ಯೆ!

    ಇದು ‘ಮುತ್ತಿನ’ ಕಥೆ: ಸಾರ್ವಜನಿಕ ಸ್ಥಳದಲ್ಲೇ ಕಿಸ್​ ಮಾಡಿ ವೈರಲ್​ ಆದ್ಲು ಶ್ರುತಿ ಹಾಸನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts