ಆಗ ಬಾಲಕಿ, ಈಗ ಅಮ್ಮ: ‘ಜೋಡೋ ಯಾತ್ರೆ’ಯಲ್ಲಿ ಶೂಸ್​ ಸರಿಪಡಿಸುತ್ತ ಚಪ್ಪಾಳೆ ಗಿಟ್ಟಿಸಿಕೊಳ್ತಿರೋ ರಾಹುಲ್​

blank
blank

ಮಂಡ್ಯ: ಕೆಲ ದಿನಗಳ ಹಿಂದೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿಯ ಚಪ್ಪಲಿ ಸಡಿಲಿಕೆಯಾಗಿ ನಡೆಯಲು ತೊಂದರೆ ಅನುಭವಿಸುತ್ತಿದ್ದಳು. ಇದನ್ನು ಗಮನಿಸಿದ್ದ ಸಂಸದ ರಾಹುಲ್ ಗಾಂಧಿ ತಕ್ಷಣವೇ ತಾವೇ ಬಾಗಿ ಬಾಲಕಿಯ ಚಪ್ಪಲಿಯನ್ನು ಸರಿಪಡಿಸಿದ್ದರು. ಅದು ಭಾರಿ ಮೆಚ್ಚುಗೆ ಗಳಿಸಿತ್ತು.

ಇದೀಗ ಅಮ್ಮ ಸೋನಿಯಾ ಗಾಂಧಿಯವರ ಶೂಸ್​ ಲೇಸ್​ ಅನ್ನು ಕಟ್ಟುವ ಮೂಲಕ ಮತ್ತೆ ರಾಹುಲ್​ ಗಾಂಧಿ ಭಾರಿ ಶ್ಲಾಘನೆ ಗಳಿಸಿದ್ದಾರೆ. ಇಂದು ಮಂಡ್ಯ ಜಿಲ್ಲೆಯಲ್ಲಿ ಯಾತ್ರೆಗೆ ಸೋನಿಯಾ ಗಾಂಧಿ ಆಗಮಿಸಿದ್ದಾರೆ. ಮೆಡಿಕಲ್ ಚೆಕಪ್‍ಗಾಗಿ ವಿದೇಶಕ್ಕೆ ತೆರಳಿದ್ದ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಮಡಿಕೇರಿಯಿಂದ ತೆರಳಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಅವರ ಶೂಸ್​ ಲೇಸ್​ ತೆರೆದುಕೊಂಡಿತ್ತು. ರಾಹುಲ್​ ಗಾಂಧಿ ಇದನ್ನು ಗಮನಿಸಿ ಕೆಳಕ್ಕೆ ಬಗ್ಗಿ ಅವರ ಶೂಸ್​ ಲೇಸ್​ ಸರಿ ಮಾಡಿದರು. ಇದರ ವಿಡಿಯೋ ಭಾರಿ ವೈರಲ್​ ಆಗಿದ್ದು, ಇದ್ದರೆ ಇಂಥ ಮಗ ಇರಬೇಕು ಎಂದು ಹಲವರು ಕಮೆಂಟ್​ ಮೂಲಕ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಬಿಜೆಪಿ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಾಯಿಯ ಪಾದ ತೊಳೆದು ಪೂಜೆ ಮಾಡಿದಾಗ ಸ್ಟಂಟ್​ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ಸಿಗರು ಇದನ್ನು ಹೊಗಳುತ್ತಿರುವುದನ್ನು ನೋಡಿದರೆ ವಿಚಿತ್ರ ಎನಿಸುತ್ತದೆ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕಳೆದ ಶುಕ್ರವಾರ ಪಕ್ಷದ ನಾಯಕ ರಾಹುಲ್ ಗಾಂಧಿ ಕೇರಳದ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಕರ್ನಾಟಕಕ್ಕೆ ಪ್ರವೇಶಿಸಿದರು. (ಏಜೆನ್ಸೀಸ್​)

ರಾವಣನ ಬದಲು ಇಡಿ, ಸಿಬಿಐ ಪ್ರತಿಕೃತಿ ದಹಿಸಿದ ಕಾಂಗ್ರೆಸ್​: ಕೇಂದ್ರದ ವಿರುದ್ಧ ಕೈ ನಾಯಕರ ಕಿಡಿ

ಇಂಜಿನಿಯರಿಂಗ್​ ಪರೀಕ್ಷೆಯಲ್ಲೂ ಇದೆಂಥ ಗೋಲ್​ಮಾಲ್? ರಷ್ಯನ್​ ಹ್ಯಾಕರ್ಸ್​ ನೆರವು ಪಡೆದಿದ್ದ 820 ವಿದ್ಯಾರ್ಥಿಗಳು!

Share This Article

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…

ಈ ಅಭ್ಯಾಸಗಳು ನಿಮ್ಮನ್ನು ಎಂದಿಗೂ ಶ್ರೀಮಂತರಾಗಲು ಬಿಡುವುದಿಲ್ಲ, ಅವುಗಳನ್ನು ತಕ್ಷಣ ಬಿಟ್ಟುಬಿಡಿ | Chanakya Niti

Chanakya Niti: ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದೂ ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅವರು ತಮ್ಮ…