More

    ರಷ್ಯಾ ಅಧ್ಯಕ್ಷ ಪುತಿನ್​ ಬದುಕೋದು ಮೂರೇ ವರ್ಷ: ಆತಂಕಕಾರಿ ರಹಸ್ಯ ಬಿಚ್ಚಿಟ್ಟ ಗುಪ್ತಚರ ಅಧಿಕಾರಿ!

    ರಷ್ಯಾ: ಯೂಕ್ರೇನ್​ ಮೇಲೆ ದಾಳಿ ಮಾಡಿದ ನಂತರ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ (69) ಅವರ ಆರೋಗ್ಯದ ಕುರಿತಂತೆ ಇದಾಗಲೇ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ತಮ್ಮ ಸ್ನೇಹಿತೆಯಿಂದ ಮಗು ಪಡೆದಿರುವ ಪುತಿನ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ರಷ್ಯಾದ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ನೀಡಿರುವ ಆತಂಕಕಾರಿ ವರದಿ!

    ‘ಇಂಡಿಪೆಂಡೆಂಟ್’ ತನ್ನ ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದೆ. ಇಂಗ್ಲೆಂಡ್​ನಲ್ಲಿ ವಾಸಿಸುತ್ತಿರುವ ರಷ್ಯಾದ ಮಾಜಿ ಗೂಢಚಾರ ಬೋರಿಸ್ ಕಾರ್ಪಿಚ್‌ಕಾವ್‌ ಅವರಿಗೆ ರಷ್ಯನ್ ಫೆಡರಲ್ ಸೆಕ್ಯುರಿಟಿ ಸರ್ವಿಸ್​ನ ಅಧಿಕಾರಿ ಅಧಿಕಾರಿ ಪುತಿನ್​ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಅಧಿಕಾರಿ ತಿಳಿಸಿರುವುದು ಏನೆಂದರೆ ಪುತಿನ್​ ಅವರಿಗೆ ಕ್ಯಾನ್ಸರ್ ಇದೆ. ಇವರು ಬದುಕೋದು ಮೂರೇ ವರ್ಷ. ಇವರ ಸದ್ಯದ ಆರೋಗ್ಯ ಪರಿಸ್ಥಿತಿ ನೋಡಿದರೆ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಏಕೆಂದರೆ ಪುತಿನ್​ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ತೀವ್ರ ತಲೆನೋವಿನಿಂದ ಬಳಲುತ್ತಿರುವ ಅವರು, ಎಷ್ಟೇ ದೊಡ್ಡ ಅಕ್ಷರಗಳು ಇದ್ದರೂ ಓದಲು ಹೆಣಗಾಡುತ್ತಿದ್ದಾರೆ. ಟಿ.ವಿಯಲ್ಲಿ ನಡೆದ ಸಂದರ್ಶನದ ಸಮಯದಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿದೆ ಎಂದಿದ್ದಾರೆ.

    ಆದರೆ ಈ ಮಾಹಿತಿಯನ್ನು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ತಳ್ಳಿಹಾಕಿದ್ದಾರೆ. ಈ ರೀತಿ ಯಾವುದೇ ಸಮಸ್ಯೆ ಪುತಿನ್​ ಅವರಿಗೆ ಇಲ್ಲ ಎಂದಿದ್ದಾರೆ.

    35 ರೂ.ಗಾಗಿ ಐದು ವರ್ಷ, 2 ರೂ.ಗಾಗಿ ಮೂರು ವರ್ಷ ಏಕಾಂಗಿ ಹೋರಾಟ: ಲಾಭ ಪಡೆದದ್ದು 3 ಲಕ್ಷ ಜನ!

    100 ಮಂದಿಗೆ ತಲಾ 13 ಕೋಟಿ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌! ಅಕೌಂಟ್ ಬ್ಯಾಲೆನ್ಸ್‌ ನೋಡಿ ಸುಸ್ತಾದ ಗ್ರಾಹಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts