More

    ಬ್ಯಾನ್​ ಆದ್ರೂ ಸಿಗ್ತಿದ್ದ ಪಬ್​ಜಿಗೆ ಫುಲ್​ಸ್ಟಾಪ್​: ಇಂದಿನಿಂದ ಭಾರತದಲ್ಲಿ ನೋ ಎಂಟ್ರಿ!

    ನವದೆಹಲಿ: ದೇಶದ ಭದ್ರತೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಇದಾಗಲೇ ಭಾರತ 118 ಆ್ಯಪ್​ಗಳನ್ನು ಬ್ಯಾನ್​ ಮಾಡಿದೆ. ಅದರಲ್ಲಿ ಒಂದಾಗಿರುವ ಪಬ್​ಜಿ ಇಂದಿನಿಂದ ಅಂದರೆ ಅಕ್ಟೋಬರ್​ 30ರಿಂದ ಸಂಪೂರ್ಣ ಕಾರ್ಯ ನಿರ್ವಹಣೆ ಬಂದ್​ ಮಾಡಿದೆ.

    ಇದಾಗಲೇ 118 ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆಯಲಾಗಿದೆ. ಆದರೆ ಈ ಆ್ಯಪ್​ಗಳ ಪೈಕಿ ಪಬ್​ಜಿ ಸೇರಿದಂತೆ ಕೆಲವೊಂದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಲೇ ಇತ್ತು. ಆದರೆ, ಇಂದಿನಿಂದ ಆ್ಯಪ್​ ಕಾರ್ಯ ಸ್ಥಗಿತಗೊಳಿಸಲಾಗಿದೆ.

    ಪಬ್​ಜಿ ಆಡಳಿತ ಮಂಡಳಿ ತನ್ನ ಫೇದಗಗಬುಕ್ ಪೇಜ್​ನಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅಕ್ಟೋಬರ್ 30ರಿಂದ ಭಾರತದಲ್ಲಿ ತನ್ನ ಸೇವೆ ನಿಲ್ಲಿಸಿದ್ದೇವೆ ಎಂದು ತಿಳಿಸಿದೆ.

    ಇದನ್ನೂ ಓದಿ: ಜೀನ್ಸ್​ ಬ್ಯಾನ್​ ಮಾಡಿದ್ದಕ್ಕೆ ಲುಂಗಿ ಧರಿಸಿ ಬಂದ್ರಾ ಈ ಯುವತಿಯರು?

    ಅಂದಹಾಗೆ ಪಬ್​ಜಿಗೂ ಫುಲ್​ಫಾರ್ಮ್​ ಇದೆ ಎನ್ನುವುದು ಗೊತ್ತೆ? ಇದರ ವಿಸ್ತ್ರತ ರೂಪ Players Unknown Battleground. ಈ ಆಟವನ್ನು ಆರಂಭಿಸಿದ್ದು ದಕ್ಷಿಣ ಕೊರಿಯಾ. 2017ರ ಡಿಸೆಂಬರ್​ 20ರಂದು ಇದನ್ನು ಕೊರಿಯಾದ ಪಬ್​ಜಿ ಕಾರ್ಪೋರೇಷನ್​ ಆರಂಭಿಸಿತ್ತು.

    ನಂತರ ಇದಕ್ಕೆ ಇನ್ನಷ್ಟು ರೂಪ ತುಂಬಿ, ಮಕ್ಕಳೂ ಇದರಲ್ಲಿ ಅಡಿಕ್ಟ್​ ಆಗುವಂತೆ ಹಾಗೂ ಅತ್ಯಂತ ಭಯಾನಕ ಎನ್ನುವಂಥ ಟಾಸ್ಕ್​ ಕೊಟ್ಟು ಮಕ್ಕಳ ಮನಸ್ಸನ್ನೇ ಪರಿವರ್ತನೆ ಮಾಡಿ ಅವರ ಜೀವವನ್ನೂ ತೆಗೆಯುವ ಮಟ್ಟಿನ ಸಾಫ್ಟ್​ವೇರ್​ ಅಭಿವೃದ್ಧಿ ಮಾಡಿದ್ದು ಚೀನಾ ಮೂಲಕ ಟೆನ್​ಸೆಂಟ್​ ಎಂಬ ಕಂಪೆನಿ. ಈ ಆಟವಾಡಿ ಇದಾಗಲೇ ಹಲವಾರು ಮಕ್ಕಳು, ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

    ಕಳೆದ ಸೆಪ್ಟೆಂಬರ್​ನಲ್ಲಿ ಭಾರತದಲ್ಲಿ ಇದನ್ನು ನಿಷೇಧ ಮಾಡಲಾಗಿದೆ. ಆದರೂ ಕೆಲವೊಂದು ರೂಪದಲ್ಲಿ ಇದು ಕಾರ್ಯ ನಿರ್ವಹಿಸುತ್ತಲೇ ಇತ್ತು. ಆದ್ದರಿಂದ ಇಂದಿನಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಸ್ಟಾಪ್​ ಮಾಡಲಾಗಿದೆ.

    ಈ ಗೇಮ್​ ಮಕ್ಕಳ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಇದು ಬ್ಯಾನ್​ ಆಗಿರುವ ಕಾರಣಕ್ಕೆ ಕೆಲ ಮಕ್ಕಳು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವುದು ವರದಿಯಾಗಿದೆ.

    ಭಾರತ ವಿರೋಧಿ ಮೀಟಿಂಗ್​ ಮಧ್ಯೆ ಶ್ರೀರಾಮ, ಹನುಮಾನ್​- ಪಾಕ್​ ಗಣ್ಯರು ಸುಸ್ತೋ ಸುಸ್ತು!

    ಬಾರ್​ನಿಂದ ನಗರಸಭೆ ಕಾಂಗ್ರೆಸ್​ ಸದಸ್ಯ ಕಿಡ್ನಾಪ್​: ಸಿಸಿಟಿವಿಯಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts