More

    ಪಿಎಸ್ಐ ನೇಮಕಾತಿ ಅಕ್ರಮ: ಒಳ ಉಡುಪಲ್ಲಿ ಬ್ಲೂಟೂಥ್​, ಕೆಮ್ಮಿದರೆ ಉತ್ತರ! ಕಿಂಗ್​ಪಿನ್​ ಇಂಜಿನಿಯರ್​ ಶರಣು

    ಕಲಬುರಗಿ: ಭಾರಿ ಕೋಲಾಹಲವನ್ನೇ ಸೃಷ್ಟಿಸಿರುವ ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಿಂಗ್​ಪಿನ್​ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಾ ಇಂದು ಸಿಐಡಿ ಕಚೇರಿಗೆ ಬಂದು ಶರಣಾಗಿದ್ದಾರೆ.

    ಒಳುಡುಪಿನಲ್ಲಿ ಬ್ಲೂ ಟೂಥ್​ ಇಟ್ಟು ಕಿವಿಯೋಳಗೆ ಚಿಕ್ಕದಾದ ಟ್ರಾನ್ಸ್​ಮೀಟರ್ ಕಿವಿಯಲ್ಲಿ ಇಟ್ಟುಕೊಂಡು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಇವರ ಮೇಲಿದೆ. ಬ್ಲೂ ಟೂಥ್​ ಬಳಕ್ಕೆ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸ್ಪೆಷಲ್ ಟ್ರೈನಿಂಗ್ ನೀಡಲಾಗುತ್ತಿತ್ತು. ಪರೀಕ್ಷಾರ್ಥಿ ಒಂದು ಬಾರಿ ಸಣ್ಣದಾಗಿ ಕೆಮ್ಮಿದರೆ ಉತ್ತರ ರಿಸಿವ್ ಎಂದು ಸೂಚನೆಯಾಗಿತ್ತು. ಅದಾದ ಬಳಿಕ ಇನ್ನೊಂದು ಪ್ರಶ್ನೆಯ ಉತ್ತರ ಹೇಳಲಾಗುತ್ತಿತ್ತು.

    ಪ್ರತಿ ಅಭ್ಯರ್ಥಿಗೆ ಒಂದು ಹೊಸ ಸಿಮ್ ಕಾಡ್೯ ಖರೀದಿಸಿ ನೀಡಲಾಗುತ್ತಿತ್ತು. ಪರೀಕ್ಷೆ ಮುಗಿದ ಬಳಿಕ ಈ ತಂಡ ಅಲ್ಲೇ ಸಿಮ್ ನಾಶ ಮಾಡುತ್ತಿತ್ತು. ಈ ಮೂಲಕ ಪೊಲೀಸರ ಕೈಗೆ ಸಿಕ್ಕರೂ ಕಾಲ್ ಡೆಟೆಕ್ಟ್ ಆಗದಂತೆ ನೋಡಿಕೊಳ್ಳಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯ ಮಂಜುನಾಥ್​ ಶರಣಾಗಿದ್ದಾರೆ. ವಕೀಲರ ಸೂಚನೆ ಮೇರೆಗೆ ಇವರು ಶರಣಾಗಿದ್ದಾರೆ ಎನ್ನಲಾಗಿದೆ. ಜಾಮೀನು ಕೋರಿ ಇವರು ಸಲ್ಲಿಸಿರುವ ಅರ್ಜಿ ಕೋರ್ಟ್​ನಲ್ಲಿದೆ. ಪ್ರಕರಣ ಗಂಭೀರ ಸ್ವರೂಪವಾಗಿದ್ದರಿಂದ ಶರಣಾಗಿತಿಯಾಗುವಂತೆ ವಕೀಲರು ಸೂಚನೆ ನೀಡಿದ್ದರಿಂದ ಶರಣಾಗಿದ್ದಾರೆ. ಇವರು ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿದ್ದರು.

    ಸಿಐಡಿ ಕಚೇರಿಗೆ ಆಟೋದಲ್ಲಿ ಬಂದು ಶರಣಾಗಿರುವ ಮಂಜುನಾಥ್, ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ನನ್ನ ಹೆಸರು ಬೇಕಂತಲೇ ಥಳಕು ಹಾಕಿಕೊಂಡಿದೆ. ಇದರದಲ್ಲಿ ನನ್ನ ಪಾತ್ರ ಏನೂ ಇಲ್ಲ. ನಾನು ಎಸ್ಕೇಪ್​ ಆಗಿರಲಿಲ್ಲ, ಬದಲಿಗೆ ಆರೋಗ್ಯ ಸರಿಯಿಲ್ಲದ್ದರಿಂದ ಮಂಗಳೂರಿನಲ್ಲಿದ್ದೆ. ನನಗೆ ಗೊತ್ತಿರುವ ಎಲ್ಲ ವಿಚಾರವನ್ನು ಸಿಐಡಿ ಮುಂದೆ ತಿಳಿಸುತ್ತೇ‌ನೆ ಎಂದಿದ್ದಾರೆ.

    ಈ ಪ್ರಕರಣದಲ್ಲಿ ಆರೋಪಿಗಳಾದ ಮಂಜುನಾಥ ತಮ್ಮ‌ ರವೀಂದ್ರ ಹಾಗೂ ಮುಖ್ಯಶಿಕ್ಷಕ ಕಾಶಿನಾಥ, ಅಭ್ಯರ್ಥಿ ಶಾಂತಾಬಾಯಿ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಇವರ ಪತ್ತೆಗೆ ಸಿಐಡಿ 10 ತಂಡಗಳನ್ನು ರಚಿಸಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸುತ್ತಿದೆ.

    PSI ನೇಮಕಾತಿ ಹಗರಣ: ಕಾಂಗ್ರೆಸ್​ ಜತೆಗಿನ ನಂಟಿನ ಬಗ್ಗೆ ಸಿಐಡಿ ಎದುರು ತಿಳಿಸಿದ ದಿವ್ಯಾ ಹಾಗರಗಿ

    ಪಿಎಸ್​ಐ ನೇಮಕಾತಿ ಅಕ್ರಮ: ಪರೀಕ್ಷೆ ಬರೆದಿದ್ದ 9 ಅಭ್ಯರ್ಥಿಗಳ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts