More

    ಆಟೋ ರಾಜ, ನಾ ನಿನ್ನ ಬಿಡಲಾರೆಯಂಥ ಸೂಪರ್‌ಹಿಟ್‌ ಚಿತ್ರ ನೀಡಿದ ನಿರ್ಮಾಪಕ ಜಯರಾಮ್‌ ಇನ್ನಿಲ್ಲ

    ಬೆಂಗಳೂರು : ಆಟೋ ರಾಜ, ಗಲಾಟೆ ಸಂಸಾರ, ನಾ ನಿನ್ನ ಬಿಡಲಾರೆ ಸೇರಿದಂತೆ ಹಲವಾರು ಸೂಪರ್‌ಹಿಟ್‌ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದ ಹಿರಿಯ ನಿರ್ಮಾಪಕ ಸಿ. ಜಯರಾಮ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

    ಸಿ. ಜಯರಾಮ್​ ಅನೇಕ ಸ್ಟಾರ್​ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿದ್ದರು. 1976ರಲ್ಲಿ ತೆರೆಕಂಡ ಶ್ರೀನಾಥ್‌ ಮತ್ತು ಆರತಿ ಅಭಿನಯದ ‘ಪಾವನ ಗಂಗ’ ಜಯರಾಮ್‌ ಅವರಿಗೆ ಭಾರಿ ಜನಪ್ರಿಯತೆಯನ್ನು ತಂದುಕೊಂಡಿತ್ತು. ಅದಾದ ಮೇಲೆ ಭರ್ಜರಿ ಗೆಲುವು ಕಂಡಿದ್ದು ಅವರ ನಿರ್ಮಾಣದ ರಜನಿಕಾಂತ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದ ‘ಗಲಾಟೆ ಸಂಸಾರ’, ಆನಂತ್ ನಾಗ್ ನಟಿಸಿದ್ದ ‘ನಾ ನಿನ್ನ ಬಿಡಲಾರೆ’, ಶಂಕರ್ ನಾಗ್ ಅವರ ಮೆಗಾ ಹಿಟ್ ಸಿನಿಮಾ ‘ಆಟೋ ರಾಜ’ ಮುಂತಾದವು.

    70-80ರ ದಶಕದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿದ ನಂತರ ಜಯರಾಮ್‌ ಅವರು ಸಿನಿಮಾ ನಿರ್ಮಾಣದಿಂದ ದೂರ ಉಳಿದಿದ್ದರು. ನಂತರ ಅವರ ಪುತ್ರ ‘ಮಿಲನ’ ಪ್ರಕಾಶ್ ನಿರ್ದೇಶಕರಾಗಿ ಗುರುತಿಸಿಕೊಂಡರು. ಪುನೀತ್ ರಾಜ್ ಕುಮಾರ್ ನಟನೆಯ ಮಿಲನ, ದರ್ಶನ್​ ಅಭಿನಯದ ತಾರಕ್​ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.

    ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರಿಯನ್ನು ಸಿ. ಜಯರಾಮ್ ಅವರು ವಿವಾಹವಾಗಿದ್ದರು. ಸಿ. ಜಯರಾಮ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸುಮ್ಮನಹಳ್ಳಿ ಸ್ಮಶಾನದಲ್ಲಿ ನೆರವೇರಲಿದೆ.

    ಮೇಜರ್‌ ಆಗಿದ್ದೀನಿ, ಓಡಿ ಹೋಗ್ಬೋದು ಎಂದು ಎಂಗೇಜ್‌ಮೆಂಟ್‌ ಚಿನ್ನಾಭರಣದೊಂದಿಗೆ ಮಂಗಳೂರು ಯುವತಿ ಎಸ್ಕೇಪ್‌!

    ಮಂಡ್ಯದಲ್ಲೊಂದು ಭಾರಿ ದುರಂತ: ಹಂದಿ ಎಂದು ತಿಳಿದು ಬೇಟೆಗಾರನಿಂದ ಯುವಕನಿಗೆ ಗುಂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts