More

    ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರು ಕೆಲಸಕ್ಕೆ ಬೇಡ ಎಂಬ ಎಸ್‌ಬಿಐ! ಮಹಿಳಾ ಆಯೋಗ ನೋಟಿಸ್‌

    ನವದೆಹಲಿ: ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರನ್ನು ಕೆಲಸಕ್ಕೆ ಸೇರದಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಾರ್ಗಸೂಚಿ ಹೊರಡಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

    ಡಿಸೆಂಬರ್ 31 ಎಸ್​​ಬಿಐ ಈ ಕುರಿತಾಗಿ ಸುತ್ತೋಲೆ ಹೊರಡಿಸಿದೆ. ಸರಿಯಾದ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಮಹಿಳೆಯರು ಒಂದು ವೇಳೆ 3 ತಿಂಗಳು ಮೇಲ್ಪಟ್ಟ ಗರ್ಭಿಣಿಯರಾಗಿದ್ದರೆ ಅವರು ಕೂಡ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರುವಂತಿಲ್ಲ. ಅವರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಲಾಗುವುದು ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ. ಆಯ್ಕೆಯಾದ ಮಹಿಳೆಯರು ಹೆರಿಗೆಯಾದ ನಾಲ್ಕು ತಿಂಗಳೊಳಗೆ ಸೇವೆಗೆ ಅನುಮತಿಸಲಾಗುವುದು ಎಂದು ಉಲ್ಲೇಖಿಸಿದೆ.

    ಈ ಮೊದಲು, ಆರು ತಿಂಗಳ ಗರ್ಭಿಣಿಯರು ಕೆಲವು ಷರತ್ತುಗಳ ಅಡಿಯಲ್ಲಿ ಎಸ್‌ಬಿಐಗೆ ಸೇರಲು ಅವಕಾಶವಿತ್ತು. ಅವರು ಕೆಲಸಕ್ಕೆ ಹೋದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ತ್ರೀರೋಗತಜ್ಞರಿಂದ ಪಡೆದ ಪ್ರಮಾಣಪತ್ರವನ್ನು ಒದಗಿಸಬೇಕಿತ್ತು. ಇದೀಗ ಹೊಸ ನಿಯಮ ಜಾರಿ ಮಾಡಲಾಗಿದೆ.

    ಇದು ಕಾನೂನು ಬಾಹಿರ ಎಂದು ದೆಹಲಿ ಮಹಿಳಾ ಆಯೋಗವು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನೋಟಿಸ್ ಜಾರಿ ಮಾಡಿದೆ. ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರು ತಾತ್ಕಾಲಿಕವಾಗಿ ಅನರ್ಹರಾಗಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಸೇರುವಂತಿಲ್ಲ ಎಂದು ಬ್ಯಾಂಕ್‌ ಹೆಳಿದ್ದು, ಇದು ಇದು ತಾರತಮ್ಯ ಮತ್ತು ಕಾನೂನುಬಾಹಿರವಾಗಿದೆ ಎಂದು ಆಯೋಗ ಅಭಿಪ್ರಾಯ ಪಟ್ಟಿದ್ದು, ವಾರದೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದೆ.

    VIDEO: ಭಾರತ ಮಾತೆಯ ಫೋಟೋ ಕಿತ್ತುಕೊಂಡು ಪೊಲೀಸರ ಕೆನ್ನೆಗೆ ಹೊಡೆದಳು, ಮೊಬೈಲ್‌ ಪುಡಿಪುಡಿ ಮಾಡಿದಳು!

    ಶಾಲಾ, ಕಾಲೇಜು ಓಪನ್‌ ಯಾವಾಗ? ಮದುವೆ ಮನೆಗಳಿಗೆ ಎಷ್ಟು ಜನ? ಪಬ್‌-ಬಾರ್‌, ಕರ್ಫ್ಯೂ ರೂಲ್ಸ್ ಏನು? ಇಲ್ಲಿವೆ ಸಂಪೂರ್ಣ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts