More

    ಪ್ರಯಾಗ್‌ರಾಜ್‌ ಸಂತನ ಸಾವಿಗೆ ಕಾರಣವಾಯ್ತಾ ಯುವತಿ ಜತೆಗಿನ ಫೋಟೋ? ಜಟಿಲವಾಗುತ್ತಲೇ ಸಾಗಿದೆ ಕೇಸ್‌…

    ಪ್ರಯಾಗ್​ರಾಜ್​ (ಉತ್ತರಪ್ರದೇಶ): ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಅವರ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಅವರ ಸಾವಿನ ರಹಸ್ಯ ಇನ್ನೂ ನಿಗೂಢವಾಗುತ್ತಲೇ ಸಾಗಿದೆ.

    ಅವರು ಕಳೆದ ಸೋಮವಾರ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈಗ ಪೊಲೀಸರಿಗೆ ಅವರೇ ಬರೆದಿದ್ದಾರೆ ಎನ್ನಲಾದ ಏಳೆಂಟು ಪುಟಗಳಷ್ಟು ಬರೆದಿರುವ ಡೆತ್ ನೋಟ್ ಕೂಡ ಸಿಕ್ಕಿದ್ದು, ‘ಇದುವರೆಗೆ ನಾನು ಹೆಮ್ಮೆಯಿಂದ ಬದುಕಿದ್ದೇನೆ, ಹೆಮ್ಮೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ’ ಎಂದು ಆ ನೋಟ್‌ನಲ್ಲಿ ಬರೆಯಲಾಗಿದೆ. ಅದರಲ್ಲಿ ಶಿಷ್ಯ ಆನಂದ ಗಿರಿ ಸೇರಿದಂತೆ ಕೆಲವರ ಹೆಸರು ಉಲ್ಲೇಖವಾಗಿದೆ.

    ಡೆತ್‌ನೋಟ್‌ನಲ್ಲಿ ಇರುವ ಇನ್ನೂ ಕೆಲವು ಅಂಶಗಳು ಇದೀಗ ಬಹಿರಂಗಗೊಂಡಿದೆ. ಅದೇನೆಂದರೆ, ‘ಶಿಷ್ಯ ಆನಂದ ಗಿರಿ ನನಗೆ ಅವಮಾನಗೊಳಿಸಲು ಪ್ರಯತ್ನ ಪಟ್ಟಿದ್ದರು. ಯುವತಿಯೊಂದಿಗೆ ನಾನು ಇರುವ ಫೋಟೋ ಒಂದನ್ನು ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಇದು ಯಾವುದೋ ಯುವತಿಯ ಫೋಟೋವನ್ನು ನನ್ನ ಫೋಟೋ ಜತೆ ಮಾರ್ಫಿಂಗ್‌ (ನಕಲಿ ಮಾಡಿರುವುದು) ಮಾಡಲಾಗಿದೆ. ಇದೇ ನಕಲಿ ಫೋಟೋ ಇಟ್ಟುಕೊಂಡು ಅದನ್ನು ಸಾರ್ವಜನಿಕ ವಲಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದರು. ಆನಂದ ಗಿರಿ ಕಂಪ್ಯೂಟರ್​ನಲ್ಲಿ ಇವೆಲ್ಲಾ ಫೋಟೋಗಳು ಇವೆ. ನಾನು ಸಮಾಜದಲ್ಲಿ ಘನತೆಯಿಂದ ಬದುಕಿದ ವ್ಯಕ್ತಿ. ಈ ಅವಮಾನ ತಾಳಲಾರೆನು. ಹಾಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆಯಲಾಗಿದೆ.

    ಆದರೆ ಈ ಡೆತ್‌ನೋಟ್‌ ಬಗ್ಗೆಯೇ ಅನುಮಾನ ಬಂದಿದೆ. ಏಕೆಂದರೆ ಆನಂದ ಗಿರಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ‘ಡೆತ್‌ನೋಟ್‌ ಬರೆದಿರುವುದು ನನ್ನ ಗುರುವಲ್ಲ. ಬದಲಿಗೆ ಅದು ಯಾರೋ ಮಾಡಿರುವ ಷಡ್ಯಂತ್ರ. ಗುರೂಜಿ ಅವರಿಂದ ಕೆಲವು ಮಂದಿ ಹಣ ಪಡೆಯುತ್ತಿದ್ದರು. ಅವರು ಪತ್ರದಲ್ಲಿ ನನ್ನ ಹೆಸರು ಬರೆದಿದ್ದಾರೆ. ಗುರೂಜಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಜೀವನದಲ್ಲಿ ಎಂದೂ ಪತ್ರಬರೆದವರಲ್ಲ, ಪತ್ರದಲ್ಲಿರುವ ಕೈ ಬರಹದ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

    ಇಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಅದರ ವರದಿ ಬಂದ ಮೇಲೆ ಒಂದಿಷ್ಟು ಸತ್ಯ ಹೊರಬೀಳುವ ಸಾಧ್ಯತೆ ಇದೆ. ಪೋಸ್ಟ್​ಮಾರ್ಟಂ ನಿಮಿತ್ತ ಶಾಲಾ ಕಾಲೇಜುಗಳಿಗೆ ಪ್ರಯಾಗ್‌ರಾಜ್‌ನಲ್ಲಿ ರಜೆ ಘೋಷಿಸಲಾಗಿದೆ. ಐದು ತಜ್ಞರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದರ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

    VIDEO: ಇಡೀ ದ್ವೀಪವನ್ನು ಆವರಿಸಿದ ಜ್ವಾಲಾಮುಖಿ- ಭಯಾನಕ ವಿಡಿಯೋ ವೈರಲ್‌

    ಪುರುಷರು ಸ್ತ್ರೀಯರ ಬಳಿ, ಸ್ತ್ರೀಯರು ಪುರುಷರ ಬಳಿ ಮಸಾಜ್‌ ಮಾಡಿಸಿಕೊಳ್ಳುವಂತಿಲ್ಲ- ಹೊಸ ರೂಲ್ಸ್‌ ತಂದ ಕೇಜ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts