More

    ಅಂಗವಿಕಲೆಯ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ: ಭಾವುಕನಾದ ಸಹೋದರ- ಶ್ಲಾಘನೆಗಳ ಮಹಾಪೂರ

    ಲಖನೌ: ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂಗವಿಕಲೆಯೊಬ್ಬರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದು, ಇದರ ಫೋಟೋ ಭಾರಿ ವೈರಲ್‌ ಆಗಿದೆ.

    ಪ್ರಧಾನಿಯವರನ್ನು ಭೇಟಿಯಾಗಲು ಬಂದಿದ್ದ ಶಿಖಾ ರಸ್ತೋಗಿ ಎಂಬ ಮಹಿಳೆಯ ಕಾಲಿಗೆ ಪ್ರಧಾನಿ ನಮಸ್ಕರಿಸಿದ್ದಾರೆ. ಡಿ.13 ರಂದು ಮೋದಿ ಕಾಶಿ ಪ್ರವಾಸದಲ್ಲಿದ್ದರು. ಆ ಸಮಯದಲ್ಲಿ ಮಹಿಳೆ ಅವರ ಭೇಟಿಗೆ ಬಂದಿದ್ದಾರೆ. ಪ್ರಧಾನಿಯವರನ್ನು ಕಂಡ ತಕ್ಷಣ ಅವರು ನಮಸ್ಕರಿಸಿದ್ದಾರೆ. ಆದರೆ ಮೋದಿ ಅವರನ್ನು ತಡೆದು ತಾವೇ ಬಗ್ಗೆ ನಮಸ್ಕಾರ ಮಾಡಿದ್ದಾರೆ. ನಂತರ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.

    ಶಿಖಾ ಜತೆಗೆ ಬಂದಿದ್ದ ಅವರ ಸಹೋದರ ವಿಶಾಲ್‌ ರಸ್ತೋಗಿ ಈ ಅಚಾನಕ್‌ ಬೆಳವಣಿಗೆಯಿಂದ ಅಚ್ಚರಿಗೊಂಡಿದ್ದಾರೆ. ಶಿಖಾ ಹುಟ್ಟಿನಿಂದಲೇ ಅಂಗವಿಕಲಳು. ನನ್ನ ಸಹೋದರಿಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಮನೆಯಲ್ಲಿ ಅಂಗವಿಕಲರು ಇದ್ದರೆ ಅವರನ್ನೂ ನಿಮ್ಮಂತೆಯೇ ನೋಡಿ, ಅವರನ್ನು ಕಡೆಗಣಿಸಬೇಡಿ. ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಖುದ್ದು ಪ್ರಧಾನಿಯವರೇ ತೋರಿಸಿಕೊಟ್ಟಿದ್ದಾರೆ ಎಂದು ಭಾವುಕರಾದರು.

    ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಈ ಚಿತ್ರವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಇದು ಎಲ್ಲಾ ಮಹಿಳಾ ಶಕ್ತಿಗೆ ದೊಡ್ಡ ಗೌರವವಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದ್ದಾರೆ.

    ಬಳಿಕ ಮಾತನಾಡಿದ ಶಿಖಾ ಸಹೋದರ ವಿಶಾಲ್ ರಸ್ತೋಗಿ, ಶಿಖಾ ಹುಟ್ಟಿನಿಂದಲೇ ಅಂಗವಿಕಲಳು. ನನ್ನ ಸಹೋದರಿಯ ಬಗ್ಗೆ ನನಗೆ ಹೆಮ್ಮೆ ಇದೆ. ಮನೆಯಲ್ಲಿ ದಿವ್ಯಾಂಗ ಇರುವವರನ್ನು ದುರ್ಬಲರು ಎಂದು ಪರಿಗಣಿಸಬೇಡಿ ಎಂದು ನಾನು ಮನವಿ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಮಹಿಳೆ ಕಾಲಿಗೆ ನಮಸ್ಕರಿಸಿದ ಮೋದಿ ಅವರ ಈ ಫೋಟೋವನ್ನು ಹಲವರು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಬಿಳಿ ಕೂದಲಿನಲ್ಲಿಯೇ ಮದುವೆಯಾದ ನಟನ ಮಗಳು: ಸಹಜ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು

    ಮತಾಂತರ ನಡೆಯುತ್ತಲೇ ಇಲ್ಲ ಎಂದು ವರದಿ ನೀಡಿದ್ದ ಹೊಸದುರ್ಗ ತಹಶೀಲ್ದಾರ್‌ ದಿಢೀರ್‌ ಎತ್ತಂಗಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts