More

    VIDEO: ‘ತ್ರಿವಳಿ ತಲಾಖ್ ಬ್ಯಾನ್‌ ಆದಾಗ ಖುಷಿಯಿಂದ ‘ಮೋದಿ ಮೋದಿ’ ಎಂದು ಖುಷಿಪಟ್ರಲ್ಲ, ಇದು ಅದರದ್ದೇ ಪರಿಣಾಮ’

    ಸಹರಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಇನ್ನೂ ಆರು ಹಂತಗಳು ಬಾಕಿ ಇವೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಅದರಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಉಲ್ಲೇಖಿಸಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ಘಟನೆಯ ಬೆನ್ನಲ್ಲೇ ಪ್ರಧಾನಿ ಅದನ್ನು ನೇರವಾಗಿ ಉಲ್ಲೇಖಿಸದೇ ಭಾಷಣ ಮಾಡಿದ್ದಾರೆ.

    ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ನಮ್ಮ ಸರ್ಕಾರ ಪ್ರತಿ ಸಂತ್ರಸ್ತ ಮುಸ್ಲಿಂ ಮಹಿಳೆಯೊಂದಿಗೆ ನಿಂತಿದೆ. ಆದರೆ ದುರದೃಷ್ಟ ಎಂದರೆ ಇವರ ಬದುಕನ್ನು ಮತ್ತಷ್ಟು ಹಿಂದಕ್ಕೆ ತಳ್ಳುವ ಕೆಲಸಗಳು ಕೂಡ ನಡೆಯುತ್ತಿವೆ. ತ್ರಿವಳಿ ತಲಾಖ್‌ ಅನ್ನು ನಾವು ನಿಷೇಧಿಸಿದಾಗ ಅದೆಷ್ಟೋ ಮುಸ್ಲಿಂ ಮಹಿಳೆಯರು ಪಟ್ಟಿರುವ ಖುಷಿಗೆ ಲೆಕ್ಕವೇ ಇಲ್ಲ. ರಸ್ತೆ ರಸ್ತೆಗಳಲ್ಲಿಯೂ ‘ಮೋದಿ.. ಮೋದಿ’ ಎಂದು ಜೈಜೈಕಾರ ಹಾಕಿದರು. ಇದನ್ನು ಸಹಿಸದೇ ಅವರು ಮುಸ್ಲಿಂ ಸಹೋದರಿಯರನ್ನು ಹಾದಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಹಿಜಾಬ್‌ ವಿವಾದ ಕುರಿತು ಉಲ್ಲೇಖಿಸಿದರು.

    ಮುಸ್ಲಿಂ ಹೆಣ್ಣುಮಕ್ಕಳು ನಮ್ಮ ಸರ್ಕಾರದ ಸ್ಪಷ್ಟ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಇದಾಗಲೇ ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಅವರ ನೋವನ್ನು ಅರಿತುಕೊಂಡು ಅವರಿಗೆ ಬೇಕಾಗಿರುವ ಅಗತ್ಯ ನೆರವು ನೀಡಲಾಗಿದೆ. ಮುಸ್ಲಿಂ ಸಹೋದರಿಯರು ಇದನ್ನೆಲ್ಲಾ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವ ಭರವಸೆ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    42 ನಿಮಿಷಗಳ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿ ತಮ್ಮ ಸರ್ಕಾರ ಮಾಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಉಲ್ಲೇಖಿಸಿದರು.

    ಇಲ್ಲಿದೆ ನೋಡಿ ವಿಡಿಯೋ:

    ‘ಮಲಾಲಾಜೀ ನಿಮ್‌ ಮೇಲೆ ದಾಳಿಯಾಗಿದ್ದು ಪಾಕ್‌ನಲ್ಲೇ… ಸಚಿವರೇ ಮೂಗು ತೂರಿಸೋದು ನಿಲ್ಲಿಸಿ… ಪಾಕಿಸ್ತಾನ ನರಕಕ್ಕೆ ಹೋಗಲಿ’

    ‘ಅಮ್ಮಾ ಭಯವಾಗ್ತಿದೆ, ಬೇಗ ಬಾ…ಎಲ್ಲಾ ಸೇರಿ ಸಾಯಿಸ್ತಾರೆ’ ಎಂದು ಕರೆ ಮಾಡಿದ್ದ ಮರುಕ್ಷಣವೇ ಶವವಾದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts