More

    ಪ್ರಧಾನಿ ಮೋದಿಗೆ ಪಾಕ್‌ ಸಹೋದರಿಯಿಂದ ಬಂದಿತೊಂದು ರಾಖಿ

    ನವದೆಹಲಿ: ರಕ್ಷಾ ಬಂಧನವಾಗಿರುವ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಸಹೋದರಿಯೊಬ್ಬರು ರಾಖಿ ಕಳುಹಿಸಿದ್ದಾರೆ.

    ಖಮರ್ ಮೊಹ್ಸೀನ್‌ ಶೇಖ್‌ ಎಂಬುವವರು ರಾಖಿಯನ್ನು ಕಳುಹಿಸಿದ್ದಾರೆ. ಇವರು ಕಳೆದ 25 ವರ್ಷಗಳಿಂದ ಮೋದಿಯವರಿಗೆ ರಾಖಿಯನ್ನು ಕಳುಹಿಸುತ್ತಲೇ ಇದ್ದಾರೆ.

    ಹಲವಾರು ವರ್ಷಗಳಿಂದ ನನ್ನ ಅಣ್ಣನಿಗೆ ನಾನು ರಾಖಿ ಕಳುಹಿಸುತ್ತಿದ್ದೇನೆ. ಇಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ಐದು ವರ್ಷಗಳು ಅವರಿಗೆ ಉತ್ತಮವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಖಮರ್‌.

    ಮೋದಿಯವರ ಸಕಾರಾತ್ಮಕ ಹಾಗೂ ಸದಾ ದೇಶಕ್ಕಾಗಿ ತುಡಿಯುವ ಮನಸ್ಸನ್ನು ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಗುರುತಿಸುತ್ತಿದೆ ಎಂದು ಖಮರ್‌ ಹೇಳಿದ್ದಾರೆ. ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವನ್ನು ಅವರು ಈ ಹಿಂದೆ ಸ್ವಾಗತಿಸಿದ್ದರು. ಇದು ಅತ್ಯಂತ ಮಹತ್ವದ ನಿರ್ಧಾರ ಎಂದು ಅವರು ಬಣ್ಣಿಸಿದ್ದರು.

    ಇದನ್ನೂ ಓದಿ: ಒಂದು ಕಪ್‌ ಟೀಗೆ ₹100: ಮೋದಿಗೆ ಹೋಯಿತೊಂದು ಮೇಲ್‌- ಮುಂದೆ ನಡೆದದ್ದೆಲ್ಲ ಅಚ್ಚರಿಯೋ ಅಚ್ಚರಿ!

    ಖುರಾನ್ ಹಾಗೂ ಇಸ್ಲಾಂನಲ್ಲಿ ತ್ರಿವಳಿ ತಲಾಖ್ ಕುರಿತು ನಿಬಂಧನೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹೊರತು ಇನ್ನಾರೂ ತ್ರಿವಳಿ ತಲಾಖ್ ನಿಷೇಧಿಸುವ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮುಸ್ಲಿಂ ಮಹಿಳೆಯರ ಹಿತದೃಷ್ಟಿಯಿಂದ ಮೋದಿಯವರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದ್ದರು. ಅಷ್ಟೇ ಅಲ್ಲದೇ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದುಪಡಿಸಿದ ಆದೇಶಕ್ಕೂ ಖಮರ್‌ ತೀವ್ರವಾಗಿ ಸಂತಸ ವ್ಯಕ್ತಪಡಿಸಿದ್ದರು.

    ಇವರ ಪತಿ ಪೇಂಟಿಂಗ್‍ ರಚಿಸಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲು ಖಮರ್‌ ಉತ್ಸುಕರಾಗಿದ್ದಾರೆ. ಭಾರತದಿಂದ ತಮಗೆ ಆಹ್ವಾನ ಬಂದರೆ ದೆಹಲಿಗೆ ಭೇಟಿಯಾಗುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

    ಭೂಮಿಗೆ ಬಂದಿಳಿದ ಮೊದಲ ಸಿಬ್ಬಂದಿ ಆಕಾಶನೌಕೆ- ಸೌಂದರ್ಯ ಕಣ್ತುಂಬಿಸಿಕೊಳ್ಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts