More

    ಹಲವು ರಾಜ್ಯಗಳ ಸಿಎಂಗಳ ಭೇಟಿ ಮಾಡಿದ ಪ್ರಧಾನಿ: ಮಧ್ಯರಾತ್ರಿ ಟ್ವೀಟ್‌- ಪತ್ನಿಯ ಜತೆ ಕಾಶಿಯಲ್ಲಿ ಬೊಮ್ಮಾಯಿ

    ವಾರಣಾಸಿ: ಹಿಂದುಗಳ ಪವಿತ್ರ ಕ್ಷೇತ್ರ ವಾರಾಣಸಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟನೆ ಕಾರ್ಯಕ್ರಮ ನಿನ್ನೆ (ಸೋಮವಾರ) ನಡೆದಿದೆ. ಸುಮಾರು 339 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದ್ದಾರೆ. ಇದರ ಬೆನ್ನಲ್ಲೇ ಮಧ್ಯರಾತ್ರಿಯವರೆಗೂ ವಾರಣಾಸಿ ಮತ್ತು ಕಾಶಿಯ ಹಲವು ಅಭಿವೃದ್ಧಿ ಕಾರ್ಯಗಳನ್ನು ಅವರು ಪರಿಶೀಲಿಸಿದ್ದಾರೆ.

    “ಕಾಶಿಯಲ್ಲಿನ ಪ್ರಮುಖ ಅಭಿವೃದ್ಧಿಕಾರ್ಯಗಳ ತಪಾಸಣೆ ನಡೆಸಲಾಗುತ್ತಿದೆ. ಈ ಪವಿತ್ರ ನಗರಕ್ಕೆ ಸಾಧ್ಯವಾದಷ್ಟು ಉತ್ತಮ ಮೂಲಸೌಕರ್ಯಗಳನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಮೋದಿ ಮಧ್ಯರಾತ್ರಿ 12:52 ರಲ್ಲಿ ತಮ್ಮ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡುವುದರ ಮೂಲಕ ತಾವು ಅಭಿವೃದ್ಧಿ ಕಾರ್ಯಕ್ಕೆ 24 ಗಂಟೆಗಳು ಕಟಿಬದ್ಧರಾಗಿರುವುದಾಗಿ ಹೇಳಿದ್ದಾರೆ.

    https://twitter.com/narendramodi/status/1470474104604016640

    ಎರಡು ದಿನಗಳ ಕಾಶಿ ಪ್ರವಾಸದಲ್ಲಿರುವ ಪ್ರಧಾನಿ ಇಂದು (ಮಂಗಳವಾರ) ಮಧ್ಯಾಹ್ನ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದಾರೆ. ಕರ್ನಾಟಕ ಸೇರಿದಂತೆ ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಅಸ್ಸಾಂ, ಅರುಣಾಚಲಪ್ರದೇಶ, ಗುಜರಾತ್​, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಣಿಪುರ, ತ್ರಿಪುರದ ಮುಖ್ಯಮಂತ್ರಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಿಹಾರ ಮತ್ತು ನಾಗಾಲ್ಯಾಂಡ್​ ರಾಜ್ಯಗಳ ಉಪಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದಾರೆ.

    https://twitter.com/narendramodi/status/1470474104604016640

    ಈ ನಡುವೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ನಿಯೊಂದಿಗೆ ಕಾಶಿಗೆ ತೆರಳಿದ್ದು ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಪ್ರಧಾನಿಯವರನ್ನು ಭೇಟಿಯಾಗಿರುವುದು ಅತೀವ ಆನಂದ ತಂದಿದೆ. ಕಾಶಿಯಲ್ಲಿ ಆಗಿರುವ ಬದಲಾವಣೆ ಗಮನಾರ್ಹವಾಗಿದೆ. ಅವರು ಈ ನಿಟ್ಟಿನಲ್ಲಿ ಮಾಡಿರುವ ಕಾರ್ಯ ಪ್ರಶಂಸಾರ್ಹನೀಯ ಎಂದಿದ್ದಾರೆ.

    ಸಿಎಂಗಳ ಜೊತೆಗಿನ ಸಭೆಯ ನಂತರ ವಾರಣಾಸಿತ್‌ನ ಸ್ವರ್ವೇದ್ ಮಹಾಮಂದಿರದಲ್ಲಿ ಸದ್ಗುರು ಸದಾಫಲ್ದಿಯೋ ವಿಹಂಗಮ ಯೋಗ ಸಂಸ್ಥಾನದ 98ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts