More

    ಪಂಜ್‌ಶೀರ್‌ ನಾಯಕ ಮಸೂದ್‌ ನಿಜವಾಗ್ಲೂ ಓಡಿಹೋದ್ರಾ ಅಥ್ವಾ ಅಫ್ಘಾನ್‌ನಲ್ಲಿಯೇ ಇದ್ದಾರಾ?

    ಕಾಬುಲ್‌: ಸ‍ಂ‍ಪೂರ್ಣ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡರೂ ಇಲ್ಲಿನ ಚಿಕ್ಕ ಪ್ರಾಂತ್ಯ ಪಂಜ್‌ಶೀರ್‌ ಮಾತ್ರ ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಎರಡು ದಶಕಗಳ ಹಿಂದೆ ಕೂಡ ತಾಲಿಬಾನಿಗಳಿಗೆ ಬುದ್ಧಿ ಕಲಿಸಿದ್ದು ಇದೇ ಪಂಜ್‌ಶೀರ್‌ ಪ್ರಾಂತ್ಯ.

    ಆದರೆ ಇದಾಗಲೇ ಈ ಪ್ರಾಂತ್ಯವನ್ನು ಕೂಡ ತಾಲಿಬಾನಿಗಳ ವಶಪಡಿಸಿಕೊಂಡಿರುವುದಾಗಿ ಒಂದೆಡೆ ವರದಿಯಾಗುತ್ತಿದ್ದರೆ, ಇದು ಅವರ ವಶಕ್ಕೆ ಇದುವರೆಗೆ ಬಂದಿಲ್ಲ, ಬದಲಾಗಿ, ಪಂಜ್‌ಶೀರ್‌ ಬಂಡುಕೋರರು ಸಹಸ್ರಾರು ತಾಲಿಬಾನಿಗಳನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಿದೆ ಇನ್ನೊಂದು ವರದಿ. ಅದೇನೇ ಇದ್ದರೂ ಸದ್ಯ ತಾಲಿಬಾನಿಗಳ ವಿರುದ್ಧ ರಣಕಹಳೆ ಮೊಳಗಿಸಿರುವ ಪಂಜ್‌ಶೀರ್‌ ನಾಯಕ, ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ನಾಯಕ ಅಹಮ್ಮದ್‌ ಮಸೂದ್ ತಜಿಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ ಎಂದು ತಾಲಿಬಾನ್ ಹೇಳಿಕೆ ನೀಡಿತ್ತು. ಆದರೆ ಈ ಹೇಳಿಕೆ ಸುಳ್ಳು, ಮಸೂದ್ ಅಫ್ಘಾನಿಸ್ತಾನವನ್ನು ತೊರೆದಿಲ್ಲ ಎಂದು ಇದೀಗ ವರದಿಯಾಗಿದೆ.

    ಅಹಮ್ಮದ್‌ ಮಸೂದ್ ಆಫ್ಘಾನಿಸ್ತಾನವನ್ನು ಬಿಟ್ಟು ಟರ್ಕಿ ಅಥವಾ ಬೇರೆಲ್ಲೋ ಪಲಾಯನ ಮಾಡಿದ್ದಾನೆ ಎಂದು ಹಬ್ಬಿರುವ ಸುದ್ದಿ ತೀರಾ ಸುಳ್ಳು. ಪಂಜ್‌ಶೀರ್‌ ಜನರನ್ನು ಬಿಟ್ಟು, ಅವರು ಪಲಾಯನ ಮಾಡಲು ಸಾಧ್ಯವಿಲ್ಲ, ಬದಲಿಗೆ ತಾಲಿಬಾನಿಗಳ ಕಣ್ಣಿಗೆ ಬೀಳದಂತೆ ಸುರಕ್ಷಿತ ಸ್ಥಳದಲ್ಲಿದ್ದು, ಪಂಜ್​ಶೀರ್​ ಪ್ರದೇಶದ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಫಾರ್ಸ್ ಸುದ್ದಿಸಂಸ್ಥೆ ವಿವರಣೆ ನೀಡಿದೆ.

    ಇದೇ 6ರಂದು ಮಾಧ್ಯಮಗಳಿಗೆ ಮಾಹಿತಿ ಕಳುಹಿಸಿದ್ದ ಮಸೂದ್ ತಾಲಿಬಾನ್ ವಿರುದ್ಧ ದಂಗೆಯೇಳಲು ಜನರಿಗೆ ಕರೆ ನೀಡಿದ್ದರು. ದೇಶದ ಒಳಗೆ, ಹೊರಗೆ, ಎಲ್ಲಿದ್ದರೂ ನಮ್ಮ ದೇಶದ ಘನತೆ, ಸ್ವಾತಂತ್ರ್ಯ ಮತ್ತು ಸಮೃದ್ಧಿಗಾಗಿ ಹೋರಾಡಿ ಎಂದು ಜನರಲ್ಲಿ ಮನವಿ ಮಾಡಿದ್ದರು. ಅಷ್ಟೇ ಅಲ್ಲದೇ ಇದೇ ವೇಳೆ ಪಂಜ್​ಶೀರ್​ಅನ್ನು ತಾವು ವಶಕ್ಕೆ ಪಡೆದಿರುವುದಾಗಿ ತಾಲಿಬಾನಿಗಳು ನೀಡಿರುವ ಹೇಳಿಕೆಯನ್ನು ತಳ್ಳಿಹಾಕಿದ್ದ ಮಸೂದ್‌, 1.75 ಲಕ್ಷ ಜನಸಂಖ್ಯೆಯನ್ನು ಉಳಿಸಲು ತನ್ನ ಕೊನೆಯ ಉಸಿರು ಇರುವವರೆಗೂ ಹೋರಾಡಲಿದ್ದೇನೆ ಎಂದಿದ್ದರು.

    ಇಷ್ಟೇ ಅಲ್ಲದೇ, ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಅವರು, ಪಂಜ್​ಶೀರ್ ಮತ್ತು ಅಂದರಬ್‌ನಿಂದ ತಾಲಿಬಾನಿಗಳ​ ತಮ್ಮ ಸೈನ್ಯವನ್ನು ಹಿಂಪಡೆದುಕೊಂಡರೆ ಮಾತ್ರ ನಾವು ಹೋರಾಟ ನಿಲ್ಲಿಸುತ್ತೇವೆ, ಅವರ ಜತೆ ಮಾತುಕತೆ ನಡೆಸುತ್ತೇವೆ. ಆದರೆ ಅವರು ದಾಳಿ ಮುಂದುವರೆಸಿದರೆ ನಾವು ಕೂಡ ಪ್ರತಿದಾಳಿ ಮಾಡುತ್ತೇವೆ ಎಂದಿದ್ದರು.

    ಅಧ್ಯಕ್ಷನಂತೆ ಓಡಿಹೋಗಲ್ಲ, ಧೈರ್ಯವಿದ್ದರೆ ಹೋರಾಡಿ ಗೆಲ್ಲಿ- ಎದೆಯೊಡ್ಡಿನಿಂತ ಕಣಿವೆಯತ್ತ ತಾಲಿಬಾನಿಗಳ ದೌಡು

    ‘ಗಂಡ ವ್ಯಾಕ್ಸಿನ್‌ ತಗೊಂಡಿದ್ದಾರೆ…. ಪ್ಲೀಸ್‌, ಕಾಲಿಗೆ ಬೀಳ್ತೇನೆ… ಆಫೀಸ್‌ಗೆ ಅವ್ರನ್ನ ಕರೆದು ನನ್ನನ್ನು ಕಾಪಾಡಿ….’

    ಮ್ಯಾನ್ಮಾರ್‌ದಿಂದ ಬಾಂಗ್ಲಾದೇಶದವರೆಗೆ ಭುಜದ ಮೇಲೆ ಹೆತ್ತವರನ್ನು ಒಯ್ದ ಆಧುನಿಕ ‘ಶ್ರವಣ ಕುಮಾರ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts