More

    ಎರಡನೇ ವಿವಾಹವಾಗಿದ್ದ ವಿಚ್ಛೇದಿತೆಗೆ ಎಂಜಲು ನೆಕ್ಕುವ ಶಿಕ್ಷೆ! ಮಹಾರಾಷ್ಟ್ರದಲ್ಲಿ ಆಘಾತದ ಘಟನೆ

    ಮುಂಬೈ: ವಿಚ್ಛೇದಿತೆಯೊಬ್ಬಳು ಎರಡನೆಯ ವಿವಾಹವಾಗಿದ್ದನ್ನು ಖಂಡಿಸಿ ಆಕೆಗೆ ಎಂಜಲು ನೆಕ್ಕುವ ಶಿಕ್ಷೆ ನೀಡಿರುವ ಘನಘೋರ ಘಟನೆಯು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ!

    ಮೊದಲ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದ ಮಹಿಳೆ ಇನ್ನೊಂದು ವಿವಾಹವಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರು ಈ ಅನಾಮವೀಯ ಶಿಕ್ಷೆ ಕೊಟ್ಟಿದ್ದಾರೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ನಾಥ್ ಜೋಗಿ ಸಮುದಾಯಕ್ಕೆ ಸೇರಿರುವ ಮಹಿಳೆ 2015ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. 2019ರಲ್ಲಿ ಮತ್ತೊಂದು ವಿವಾಹವಾಗಿದ್ದಾರೆ. ಮದುವೆಯಾಗಿ ಎರಡು ವರ್ಷವಾಗುತ್ತ ಬಂದಿದ್ದು, ಇದೀಗ ಪಂಚಾಯತ್ ಸದಸ್ಯರು ಎರಡನೇ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ!‌

    ಇದ್ದಕ್ಕಿದ್ದಂತೆಯೇ ಪಂಚಾಯತ್ ಸದಸ್ಯರು ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ನಂತರ ಅಲ್ಲಿ ತೆಗೆದುಕೊಂಡ ನಿರ್ಧಾರದಂತೆ ಮಹಿಳೆಯ ಕುಟುಂಬಸ್ಥರನ್ನು ಕರೆಸಿದ್ದಾರೆ. ಅಲ್ಲಿ ಪಂಚಾಯತ್ ಸದಸ್ಯರು ಬಾಳೆ ಎಲೆ ಮೇಲೆ ಉಗುಳಲಿದ್ದು, ಈ ಉಗುಳನ್ನು ಶಿಕ್ಷೆಯಾಗಿ ಮಹಿಳೆ ನೆಕ್ಕಬೇಕೆಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಮರ ವಿವಾಹವಾದುದಕ್ಕೆ 1 ಲಕ್ಷ ರೂಪಾಯಿ ದಂಡ ಕಟ್ಟುವಂತೆ ತಿಳಿಸಿದ್ದಾರೆ. ಶಿಕ್ಷೆ ಪೂರ್ಣಗೊಂಡ ಬಳಿಕ ಮಹಿಳೆಯನ್ನು ಮರಳಿ ಸಮುದಾಯಕ್ಕೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

    ಈ ವಿಷಯವನ್ನು ಕುಟುಂಬಸ್ಥರು ಮಹಿಳೆಗೆ ತಿಳಿಸಿದ್ದಾರೆ. ಇದರಿಂದ ಆಘಾತಗೊಂಡ ಮಹಿಳೆ, ಕೂಡಲೇ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ಘಟನೆ ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪಂಚಾಯತ್ ಸದಸ್ಯರ ವಿರುದ್ಧ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2016, ಮಹಾರಾಷ್ಟ್ರ ಜನರ ಸಂರಕ್ಷಣೆ ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪ್ರಧಾನಿ ವಿರುದ್ಧ ಪೋಸ್ಟರ್‌ ಅಂಟಿಸಲು ಹಣ ಪಡೆದುಕೊಂಡವರು ಅರೆಸ್ಟ್‌- ದುಡ್ಡು ಕೊಟ್ಟವರಿಗಾಗಿ ಶೋಧ!

    ಓಕೆ ಅನ್ನದಿದ್ರೆ ಇರಲ್ಲ ವಾಟ್ಸ್‌ಆ್ಯಪ್‌! ಮುಗಿದಿದೆ ಡೆಡ್‌ಲೈನ್‌, ಎಲ್ಲಾ ಆಪ್ಷನ್ಸ್‌ ಆಗಲಿವೆ ಮಾಯ

    ಅಸಹಿಷ್ಣುತೆಯನ್ನು ಮುಸ್ಲಿಂ ಸಮುದಾಯಗಳು ತ್ಯಜಿಸಬೇಕು- ಹೈಕೋರ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts