More

    ಪ್ರವಾದಿ ಮೊಹಮ್ಮದ್‌ ವಿರುದ್ಧ ಹೇಳಿಕೆ- ಪ್ರಾಂಶುಪಾಲೆಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್‌!

    ಲಾಹೋರ್ (ಪಾಕಿಸ್ತಾನ): ಪ್ರವಾದಿ ಮೊಹಮ್ಮದ್‌ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನುವ ಕಾರಣದಿಂದ ಕಾಲೇಜಿನ ಪ್ರಾಂಶುಪಾಲೆಯೊಬ್ಬರಿಗೆ ಪಾಕಿಸ್ತಾನದ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ!

    ಧರ್ಮ ನಿಂದನೆ, ದೇಶಕ್ಕೆ ಅವಮಾನ ಮಾಡುವುದು, ದೇಶದ ವಿರುದ್ಧ ಹೇಳಿಕೆ ನೀಡುವುದು ಇಲ್ಲಿಯ ಕಾನೂನಿನ ಪ್ರಕಾರ ಅಪರಾಧ ಇದಕ್ಕೆ ಕಠಿಣ ಶಿಕ್ಷೆ ಇದೆ. ಈ ಕಾನೂನಿನ ಆಧಾರದ ಮೇಲೆ ತನ್ವೀರ್‌ ಎನ್ನುವವರಿಗೆ ಶಿಕ್ಷೆ ವಿಧಿಸಲಾಗಿದೆ.

    ಇವರು ಖಾಸಗಿ ಕಾಲೇಜಿನ ಮಹಿಳಾ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2013ರ ಕೇಸ್‌ ಇದಾಗಿದೆ. ಇವರ ವಿರುದ್ಧ ಸ್ಥಳೀಯ ಪಾದ್ರಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನ್ವೀರ್‌ ಅವರನ್ನು ಬಂಧಿಸಲಾಗಿತ್ತು. ಇದೀಗ ಇಲ್ಲಿಯ ಸೆಷನ್ಸ್‌ ಕೋರ್ಟ್‌ ತೀರ್ಪು ನೀಡಿದ್ದು ಗಲ್ಲು ಶಿಕ್ಷೆ ವಿಧಿಸಿದೆ, ಜತೆಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ.

    ಪಾಕಿಸ್ತಾನದ ಧರ್ಮನಿಂದನೆ ಕಾನೂನು ಪುರಾತನವಾಗಿದ್ದು, ಶಿಕ್ಷೆ ಕೂಡ ಅತ್ಯಂತ ಕಠಿಣವಾಗಿದೆ. ಹೀಗಾಗಿ ಈ ಕುರಿತು ಕಳೆದ ಹಲವು ದಶಕಗಳಿಂದ ಕೆಲ ಸಂಘಟನೆಗಳು ಹೋರಾಟ ನಡೆಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

    ಇವರು ಮಾನಸಿಕವಾಗಿ ದುರ್ಬಲರಾಗಿದ್ದು, ಈ ರೀತಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಇವರನ್ನು ಕ್ಷಮಿಸಬೇಕು ಎಂದು ತನ್ವೀರ್‌ ಪರ ವಕೀಲರು ಮನವಿ ಮಾಡಿಕೊಂಡಿದ್ದರು. ಆದರೆ ಈ ವಾದವನ್ನು ಕೋರ್ಟ್‌ ತಿರಸ್ಕರಿಸಿದೆ. ಗಲ್ಲು ಶಿಕ್ಷೆ ವಿಧಿಸಿದೆ. ಇದೀಗ ಈ ಶಿಕ್ಷೆ ಪಾಕಿಸ್ತಾನದಲ್ಲಿ ಭಾರಿ ಪರ-ವಿರೋಧಗಳ ಚರ್ಚೆಯನ್ನು ಹುಟ್ಟುಹಾಕಿದೆ.

    ತನ್ವೀರ್ ಪರ ವಕೀಲ ಮಾನಸಿಕ ಆರೋಗ್ಯ ಸ್ಥಿಮಿತ ಆಧಾರದಲ್ಲಿ ಜಾಮೀನು ನೀಡಲು ವಾದಿಸಿದರು. ಆದರೆ ನ್ಯಾಯಾಲದ ಈ ವಾದನ್ನು ತಳ್ಳಿಹಾಕಿತು. ಬಳಿಕ ಗಲ್ಲು ಶಿಕ್ಷೆ ವಿಧಿಸಿತು. ಇದೀಗ ಈ ತೀರ್ಪು ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಸರ್ಕಾರಿ ಹಣ ಪತಿಯ ಟ್ರಸ್ಟ್‌ಗೆ: ಮಾಜಿ ಸಚಿವೆಗೆ ಐದು ವರ್ಷ ಜೈಲು- ತೀರ್ಪು ಪ್ರಕಟಿಸುತ್ತಿದ್ದಂತೆಯೇ ಅನಾರೋಗ್ಯ!

    ಈ ಅರ್ಹತೆಗಳಿವೆಯೆ? ಹಾಗಿದ್ರೆ ನನ್ನ ಸೊಸೆಯಾಗ್ಬೋದು: ಫೇಸ್‌ಬುಕ್‌ನಲ್ಲಿ ವಿವಾದಿತ ಧರ್ಮಗುರು ಆಹ್ವಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts