More

    ಮಹಿಳೆ ಎಂದರೆ ವೇಶ್ಯೆ, ಕೆಟ್ಟ ಹೆಂಗಸು ಎಂದಿದ್ದ ಆಕ್ಸ್​ಫರ್ಡ್​​ ಡಿಕ್ಷನರಿಗೆ ಕೊನೆಗೂ ಆಯ್ತು ಜ್ಞಾನೋದಯ!

    ವಾಷಿಂಗ್ಟನ್​: WOMAN (ಮಹಿಳೆ) ಎಂಬ ಶಬ್ದದ ಅರ್ಥ ಹುಡುಕಿದರೆ ಇಷ್ಟು ವರ್ಷ ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಮಹಿಳೆ, ಸ್ನೇಹಿತೆ, ಪ್ರೇಯಸಿ ಎನ್ನುವ ಹೊರತಾಗಿ ಪುರುಷನ ಪತ್ನಿ ಸೇರಿದಂತೆ ತುಂಬಾ ಕೆಟ್ಟ ಅರ್ಥ ಕೊಡುವ ಪದಗಳೂ ಸಮಾನಾರ್ಥಕವಾಗಿ ಕಾಣಿಸುತ್ತಿದ್ದವು. ವೇಶ್ಯೆ, ಹೆಣ್ಣುನಾಯಿ, ಕೆಟ್ಟ ಹೆಂಗಸು ಎಂದೆಲ್ಲಾ ಅರ್ಥವನ್ನೂ ಕೊಡಲಾಗಿತ್ತು.

    ಲೈಂಗಿಕತೆಗೆ ಸಂಬಂಧಿಸಿದ ಅವಾಚ್ಯ ಶಬ್ದಗಳಿಗೂ ಮಹಿಳೆ ಎಂದು ಸಮಾನಾರ್ಥಕವಾಗಿ ಬಿಂಬಿಸಲಾಗಿತ್ತು. ಇದರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿತ್ತು. ಇದು ಮಹಿಳೆಯರಿಗೆ ತೋರುವ ಅಗೌರವ ಹಾಗೂ ಲಿಂಗ ತಾರತಮ್ಯತೆಯ ಸಂಕೇತ ಎಂದು ಇದರ ವಿರುದ್ಧ ಅಭಿಯಾನವನ್ನೂ ಶುರು ಮಾಡಲಾಗಿತ್ತು.

    ಇದೀಗ ಭಾರಿ ಪ್ರತಿಭಟನೆಯ ನಂತರ ವುಮೆನ್​ ಎನ್ನುವ ಶಬ್ದಕ್ಕೆ ಪತ್ನಿ, ಸ್ನೇಹಿತೆ, ಪ್ರೇಯಸಿ ಎಂದಷ್ಟೇ ಮಾರ್ಪಾಡು ಮಾಡುವ ಮೂಲಕ ಮಹಿಳೆಯರಿಗೆ ಗೌರವ ನೀಡಿದೆ. ಮಹಿಳೆ ಎಂದರೆ ಪುರುಷನ ಪತ್ನಿ ಏಕೆ ಎಂಬ ಬಗ್ಗೆಯೂ ತಕರಾರು ಇದ್ದ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯ ದೃಷ್ಟಿಯಿಂದ ಅದನ್ನೂ ಈಗ ತೆಗೆಯಲಾಗಿದೆ. ಮಹಿಳೆಗೆ ಸ್ವತಂತ್ರ ಅಸ್ತಿತ್ವ ಇದೆ ಎಂಬುದನ್ನು ಎತ್ತಿಹಿಡಿಯಲಾಗಿದೆ.

    ಇದನ್ನೂ ಓದಿ: ಬೈಡೆನ್​ ಗೆಲುವಿನಿಂದ ಹಿರಿಹಿರಿ ಹಿಗ್ಗಿದರೂ ಅಭಿನಂದಿಸದೇ ಮೌನಕ್ಕೆ ಜಾರಿದ ಚೀನಾ!

    ಇದರ ಜತೆಗೆ, ಪುರುಷ ಪದದ ವ್ಯಾಖ್ಯಾನಕ್ಕೂ ಕೆಲ ಮಾರ್ಪಾಡುಗಳನ್ನು ತರಲಾಗಿದ್ದು ಲಿಂಗ ಸಮಾನತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಆಕ್ಸ್​ಫರ್ಡ್ ನಿಘಂಟಿನ ವಕ್ತಾರರು ಹೇಳಿದ್ದಾರೆ.

    ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿರುವ ಶಬ್ದದ ವಿರುದ್ಧ ಮೊದಲು ಸಹಿ ಸಂಗ್ರಹ ಚಳವಳಿ ಆರಂಭಿಸಿದವರು ಮೇರಿಯಾ ಎನ್ನುವವರು. 2019ರಲ್ಲಿ ಇದು ಆರಂಭವಾಗಿತ್ತು. ಈ ಅಭಿಯಾನಕ್ಕೆ 30 ಸಾವಿರಕ್ಕೂ ಅಧಿಕ ಸಹಿಗಳು ಸಂಗ್ರವಾಗಿ ವ್ಯಾಪಕ ಬೆಂಬಲ ಸಿಕ್ಕಿತ್ತು.

    ಇದೀಗ ಈ ಚಳವಳಿಗೆ ಮಣಿದು ಕೆಟ್ಟ ಶಬ್ದಗಳನ್ನು ಕೈಬಿಡಲಾಗಿದೆ. ಇದಕ್ಕೆ ಸಹಿ ಸಂಗ್ರಹದಾರರು ಖುಷಿಪಟ್ಟಿದ್ದಾರೆ. ಆದರೆ ಇನ್ನೂ ಇದು ಸಂಪೂರ್ಣ ಫಲ ಕೊಟ್ಟಿಲ್ಲ ಎಂಬ ನೋವೂ ಇದೆ. ಏಕೆಂದರೆ ಹಗೆತನ ಸಾಧಿಸುವ ಮಹಿಳೆ, ಅಹಿತಕರ ಮಹಿಳೆ ಎಂಬ ಅರ್ಥವನ್ನು ಇಂದಿಗೂ ಮುಂದುವರೆಸಲಾಗಿದೆ. ಅದೂ ಬದಲಾಗಬೇಕು ಎಂದು ಆಗ್ರಹಿಸಲಾಗಿದೆ.

    ಇದೇ ರೀತಿ, ಪುರುಷರಿಗೆ ಸಂಬಂಧಿಸಿದ ಪದಗಳಲ್ಲಿ ನಿಘಂಟಿನ ಅರ್ಥಗಳು ಹೆಚ್ಚು ಸಂವೇದನಾಶೀಲವಾಗಿರುವುದನ್ನು ಉಲ್ಲೇಖಿಸಿದ ಅವರು ಇದು ಪುರುಷ ಹಾಗೂ ಮಹಿಳೆಯ ನಡುವಿನ ವ್ಯತ್ಯಾಸಕ್ಕೆ ಸಾಕ್ಷಿ ಎಂದಿದ್ದಾರೆ.

    ನನ್ನ ಸಾವಿಗೆ ಉದ್ಧವ್​ ಠಾಕ್ರೆಯೇ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್​!

    ವರದಿಗಾರನ ಜೀವವನ್ನೇ ತೆಗೆದ ಅಪರಾಧ ವರದಿ- ಕುಡುಗೋಲಿನಿಂದ ಭೀಕರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts