More

    ನಾಲ್ಕು ಲಕ್ಷ ರೂ. ಕೊಟ್ಟು ಒಂದು ಗಿಡ ಖರೀದಿಸಿದ- ಅಷ್ಟಕ್ಕೂ ಏನಿದರ ವಿಶೇಷತೆ?

    ನ್ಯೂಜಿಲ್ಯಾಂಡ್: ಬಹುತೇಕ ಎಲ್ಲರಿಗೂ ಒಂದೊಂದು ರೀತಿಯ ಹವ್ಯಾಸಗಳು ಇರುತ್ತವೆ. ಆದರೆ ಕೆಲವರು ತಮ್ಮ ಹವ್ಯಾಸಕ್ಕಾಗಿ ಎಷ್ಟು ಖರ್ಚು ಮಾಡಲು ಕೂಡ ರೆಡಿ ಇರುತ್ತಾರೆ.

    ಅಂಥದ್ದೇ ಒಂದು ಹವ್ಯಾಸ ಇರುವ ವ್ಯಕ್ತಿಯೊಬ್ಬ ಒಂದೇ ಒಂದು ಗಿಡಕ್ಕೆ 5400 ಡಾಲರ್‌ (ಸುಮಾರು ನಾಲ್ಕು ಲಕ್ಷ ರೂಪಾಯಿ) ಕೊಟ್ಟಿದ್ದಾನೆ.

    ನ್ಯೂಜಿಲ್ಯಾಂಡ್‌ನ ಈ ವ್ಯಕ್ತಿ ಒಂದು ಗಿಡಕ್ಕೆ ನಾಲ್ಕು ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದು, ಇದೀಗ ಭಾರಿ ಸುದ್ದಿಯಾಗಿದ್ದಾನೆ. ಮಾತ್ರವಲ್ಲದೇ ಒಂದೇ ಒಂದು ಗಿಡಕ್ಕೆ ಇಷ್ಟು ಬೃಹತ್‌ ಹಣಕೊಟ್ಟಿರುವ ವ್ಯಕ್ತಿ ಎಂದು ದಾಖಲೆಯ ಪುಟವನ್ನೂ ಸೇರಿದ್ದಾನೆ.

    ಸಸ್ಯಪ್ರೇಮಿಯಾಗಿರುವ ಈತ ಇದಾಗಲೇ ಹಲವಾರು ಬಗೆಯ ಅಪರೂಪದ ಸಸ್ಯಗಳನ್ನು ಖರೀದಿ ಮಾಡಿದ್ದಾನೆ. ಆದರೆ ಇದೀಗ ಇಷ್ಟು ಬೆಲೆ ಕೊಟ್ಟು ಖರೀದಿ ಮಾಡಿರುವ ಸಸ್ಯದ ಹೆಸರು ರಾಫಿಡೋಫೊರಾ. ವೈಜ್ಞಾನಿಕ ಹೆಸರು ಮಿನಿ ಮೊನೆಸ್ಟ್ರಾ.

    ಈ ಸಸ್ಯವು ಅಪರೂಪದ ಪ್ರಜಾತಿಗೆ ಸೇರಿದ್ದು, ಬಹಳ ವಿರಳವಾಗಿದೆ. ಇದರ ವಿಶೇಷವೆಂದರೆ ಎಲೆಗಳು ಹಳದಿ, ಗುಲಾಬಿ, ಬಿಳಿ ಮತ್ತು ನೇರಳೆ ಬಣ್ಣದಲ್ಲಿರುತ್ತವೆ. ಎಲೆಗಳಲ್ಲಿ ಕ್ಲೋರಿಫಿಲ್‌ ಇರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ರಾಫಿಡೋಫೊರಾ ಎಂಬ ಈ ಗಿಡದ ಎಲೆಗಳಲ್ಲಿ ಕ್ಲೊರೋಫಿಲ್‌ ಇರುವುದಿಲ್ಲ. ಇದನ್ನು ಹೊರತು‍ಪಡಿಸಿದರೆ, ಈ ಸಸ್ಯದಲ್ಲಿ ಅಂಥ ವಿಶೇಷತೆಗಳೇನೂ ಇಲ್ಲ.

    ಇದನ್ನೂ ಓದಿ: ಯುಜಿಸಿಇಟಿ ದಾಖಲೆ ಅಪ್‌ಲೋಡ್‌ ಪ್ರಕ್ರಿಯೆ ಮುಂದೂಡಿಕೆ

    ಅಷ್ಟೇ ಅಲ್ಲದೇ, ಈ ಮನೆಗಳಲ್ಲಿ ಬದುಕುಳಿಯುವುದೇ ಕಷ್ಟ. ಇದಕ್ಕೆ ಹೆಚ್ಚಿನ ರೀತಿಯಲ್ಲಿ ಕಾಳಜಿ ಮಾಡಬೇಕು. ಮಾತ್ರವಲ್ಲದೇ, ಒಂದು ವೇಳೆ ಸರಿಯಾಗಿ ಕಾಳಜಿ ಮಾಡದೇ ಹೋದರೆ ಹಳದಿ, ಗುಲಾಬಿ, ಬಿಳಿ ಮತ್ತು ನೇರಳೆ ಬಣ್ಣಗಳಲ್ಲಿ ಕಾಣಿಸಿಕೊಳ್ಳುವ ಎಲೆಗಳು ಕ್ರಮೇಣ ತನ್ನ ಬಣ್ಣವನ್ನು ಕಳಚಿಬಿಟ್ಟು ಪೇಲವವಾಗಿ ಕಾಣಿಸುತ್ತವೆ.

    ಈ ಕುರಿತು ಹೇಳಿಕೆ ನೀಡಿರುವ ಒರೆಗಾನ್‌ನ ಪಿಸ್ಟಿಲ್ಸ್ ನರ್ಸರಿಯ ಮಾರ್ಕೆಟಿಂಗ್ ಹಾಗೂ ಇ-ಕಾಮರ್ಸ್ ನಿರ್ದೇಶಕ ಜೆಸಿ ವಾಲ್ಡ್‌ಮನ್, ಇದರ ಒಂದು ಸಸಿಯಲ್ಲಿ ಒಂದೇ ಎಲೆ ಇರುತ್ತದೆ ಹಾಗೂ ಆ ಎಲೆಯೂ ಸಹ ಕ್ಲೊರೋಫಿಲ್ ಇರುವುದಿಲ್ಲ ಎಂದಿದ್ದಾರೆ.

    ಈ ಸಸ್ಯವನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. 33 ಮಂದಿ ಸಸ್ಯ ಖರೀದಿಗೆ ಮುಂದಾಗಿದ್ದರು. ಅತಿ ಹೆಚ್ಚು ಹಣವನ್ನು ನೀಡಲು ರೆಡಿಯಾಗಿದ್ದಾತನಿಗೆ ಇದೀಗ ಲಭ್ಯವಾಗಿದೆ.

    ಮೊಬೈಲ್‌ ಬಳಕೆದಾರರಿಗೆ ಬಿಗ್ ಶಾಕ್‌: ಶೀಘ್ರದಲ್ಲೇ ಏರಲಿದೆ ಕರೆ, ಡಾಟಾ ರೇಟ್‌?

    ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿರ ಅಡಿ ಪ್ರಪಾತಕ್ಕೆ ಬಿದ್ದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts