More

    ಅನೇಕ ಮಕ್ಕಳಲ್ಲಿ ಇಬ್ಬರಿಗೆ ಮಾತ್ರ ವಿಲ್​ ಮಾಡಿದರೆ ಮುಂದೆ ಸಮಸ್ಯೆ ಆಗತ್ತಾ?

    ಅನೇಕ ಮಕ್ಕಳಲ್ಲಿ ಇಬ್ಬರಿಗೆ ಮಾತ್ರ ವಿಲ್​ ಮಾಡಿದರೆ ಮುಂದೆ ಸಮಸ್ಯೆ ಆಗತ್ತಾ?ಪ್ರಶ್ನೆ: ನಾನೊಬ್ಬ ನಿವೃತ್ತ ರೈಲ್ವೇ ನೌಕರ. ನನಗೆ ತೊಂಬತ್ತು ವರ್ಷ ವಯಸ್ಸಾಗಿದೆ. ನನಗೆ ಐದು ಹೆಣ್ಣು ಮಕ್ಕಳು ಮತ್ತು ಎರಡು ಗಂಡು ಮಕ್ಕಳು ಇದ್ದಾರೆ. ಎಲ್ಲರಿಗೂ ಮದುವೆ ಆಗಿದೆ. ಒಬ್ಬ ಮಗಳು ವಿಧವೆ . ಅವಳು ತನ್ನ ಇಬ್ಬರು ಮಕ್ಕಳೊಂದಿಗೆ ನನ್ನ ಜೊತೆಯೇ ಇದ್ದಾಳೆ. ನನ್ನ ಎರಡನೆಯ ಮಗ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದು ನಮ್ಮ ಜೊತೆ ಇದ್ದಾನೆ.

    ನನಗೆ ಒಂದು 50-60 ಲಕ್ಷ ಬೆಲೆ ಬಾಳುವ ಮನೆ ಮತ್ತು ಸೈಟು ಇದೆ. ಇದು ನಮ್ಮ ತಂದೆ ತಾತ ಇವರುಗಳಿಂದ ಬಂದ ಸ್ವತ್ತು. ಅದನ್ನು ನವೀಕರಿಸಲು 8-9 ಲಕ್ಷ ನನ್ನ ಸ್ವಂತ ಹಣ ಖರ್ಚು ಮಾಡಿದ್ದೇನೆ. ಈಗ ಈ ಸ್ವತ್ತನ್ನು ಅರ್ಧ ನನ್ನ ಕಿರಿಯ ಮಗನಿಗೂ ಅರ್ಧ ನನ್ನ ವಿಧವೆ ಮಗಳಿಗೂ ವಿಲ್ ಮಾಡಬೇಕೆಂದಿದ್ದೇನೆ. ಹೀಗೆ ಮಾಡುವುದರಿಂದ ಮುಂದೆ ಅವರಿಗೆ ಕಾನೂನಿನ ತೊಡಕು ಬರುತ್ತದೆಯೇ ತಿಳಿಸಿ.

    ಉತ್ತರ: ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಮತ್ತು ಪ್ರತ್ಯೇಕ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲ್ ಮಾಡಬಹುದು. ವಿಲ್ ಮಾಡುವ ವ್ಯಕ್ತಿಗೆ 3-4 ಮಕ್ಕಳು ಇದ್ದು, ಕೆಲವರಿಗೆ ಮಾತ್ರ ವಿಲ್ ಮಾಡುವ ಸಂದರ್ಭದಲ್ಲಿ, ಯಾವ ಕಾರಣದಿಂದ ಕೆಲವರಿಗೆ ಮಾತ್ರ ವಿಲ್ ಮಾಡುತ್ತಿದ್ದೇವೆ ಏಕೆ ಬೇರೆ ಮಕ್ಕಳಿಗೆ ವಿಲ್ ಮಾಡಿಲ್ಲ ಎನ್ನುವುದನ್ನು ಬರೆಯಿಸಿದರೆ ಒಳ್ಳೆಯದು. ನಿಮ್ಮ ಪಿತ್ರಾರ್ಜಿತ ಆಸ್ತಿ ಇದ್ದರೆ , ಅದರಲ್ಲಿ ನಿಮ್ಮ ಭಾಗವನ್ನು ಮಾತ್ರ ನೀವು ವಿಲ್ ಮಾಡಬಹುದು.

    ನೀವು ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ತೆಗೆದುಕೊಂಡು ವಕೀಲರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯುವುದು ಒಳ್ಳೆಯದು. ನೀವು ತಿಳಿಸಿರುವ ಆಸ್ತಿ ನಿಮ್ಮ ಪ್ರತ್ಯೇಕ ಆಸ್ತಿ /ಸಪರೇಟ್ ಪ್ರಾಪರ್ಟಿ ಆದರೆ ನೀವು ವಿಲ್ ಮಾಡಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿ ಆದರೆ ನಿಮ್ಮ ಭಾಗವನ್ನು ಮಾತ್ರ ವಿಲ್ ಮಾಡಬಹುದು.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಅಪ್ಪನ ಆಸ್ತಿಯಲ್ಲಿ ತನ್ನಿಚ್ಛೆಯಂತೆ ಭಾಗ ಮಾಡುವ ಅಧಿಕಾರ ಅಮ್ಮನಿಗೆ ಇದೆಯೆ?

    ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts