More

    ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕು ಇಲ್ಲವೇ? ಕಾನೂನು ಏನು ಹೇಳುತ್ತದೆ?

    ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕು ಇಲ್ಲವೇ? ಕಾನೂನು ಏನು ಹೇಳುತ್ತದೆ?ಪ್ರಶ್ನೆ: ನಮ್ಮ ತಾತ ಅಜ್ಜಿಗೆ ಇಬ್ಬರು ಮಕ್ಕಳು. ನಮ್ಮ ತಂದೆ , ಮತ್ತು ನಮ್ಮ ತಂದೆಯ ತಂಗಿ. ನಮ್ಮ ತಾತ ಅಜ್ಜಿ ನಮ್ಮ ತಂದೆಯನ್ನೂ ನಮ್ಮನ್ನೂ ಹೊರಗೆ ಹಾಕಿ ಐದು ವರ್ಷ ಆಗಿದೆ. ನಮ್ಮ ತಂದೆಯೂ ತೀರಿಕೊಂಡಿದ್ದಾರೆ.

    ನಮ್ಮ ತಾತ ಅಜ್ಜಿ ಬದುಕಿದ್ದಾರೆ .ನಮ್ಮ ತಂದೆಯ ತಂಗಿ ಆಸ್ತಿಯನ್ನೆಲ್ಲಾ ತಮ್ಮ ಹೆಸರಿಗೆ ದಾನ ಪತ್ರ ಮಾಡಿಸಿಕೊಂಡಿದ್ದಾರೆ. ನಾವು ಕಟ್ಟಿರುವ ಮನೆಯನ್ನೂ ತಮ್ಮ ಹೆಸರಿಗೇ ರಿಜಿಸ್ಟರ್‌ ಮಾಡಿಸಿಕೊಂಡಿದ್ದಾರೆ. ಮನೆಯನ್ನು ನಮ್ಮ ತಂದೆ ಕಷ್ಟ ಪಟ್ಟು ಕಟ್ಟಿದ್ದು. ಈಗ ನಮಗೆ ಏನೂ ಇಲ್ಲ ಎನ್ನುತ್ತಿದ್ದಾರೆ. ನಮಗೆ ಹಕ್ಕು ಇಲ್ಲವೇ ದಯವಿಟ್ಟು ತಿಳಿಸಿ.

    ಉತ್ತರ : ನಿಮ್ಮ ತಾತ ಅಥವಾ ಅಜ್ಜಿಯ ಸ್ವಯಾರ್ಜಿತ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ನಿಮ್ಮ ತಾತನಿಗೆ ಅವರ ತಂದೆಯಿಂದ ಬಂದ ಅಸ್ತಿ ಇದ್ದರೆ ಅದನ್ನೂ ಅವರು ಯಾರಿಗೆ ಬೇಕಾದರೂ ಕೊಡಬಹುದು. ಏಕೆಂದರೆ ಅಂತಹ ಆಸ್ತಿ ಅವರ ಪ್ರತ್ಯೇಕ ಆಸ್ತಿ ಆಗುತ್ತದೆ.

    ನಿಮ್ಮ ತಂದೆಯ ಅತ್ತೆಗೆ ಅವರು ದಾನ ಮಾಡುವ ಹಕ್ಕು ಅವರಿಗೆ ಇರುತ್ತದೆ. ನಿಮ್ಮ ತಂದೆ ಮನೆ ಕಟ್ಟುವ ಮೊದಲು, ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡು ಆ ನಂತರ ಕಟ್ಟಿದ್ದರೆ ಚೆನ್ನಾಗಿತ್ತು. ನಿಮ್ಮ ತಾತನ ಮತ್ತು ಅಜ್ಜಿಯ ಹೆಸರಿನಲ್ಲಿ ಏನಾದರೂ ಆಸ್ತಿ ಇನ್ನೂ ಉಳಿದಿದ್ದರೆ, ಅವರು ತೀರಿಕೊಂಡ ಮೇಲೆ, ಅದರಲ್ಲಿ ನಿಮಗೆ ನಿಮ್ಮ ತಂದೆಯ ಭಾಗ ಎಂದು ಅರ್ಧ ಹಿಸ್ಸೆ ಬರುತ್ತದೆ.

    ಈಗ ನೀವು ಹಿರಿಯರನ್ನು ಕೂಡಿಸಿ ಮಾತಾಡಿ ರಾಜಿ ಮಾಡಿಕೊಳ್ಳುವುದು ಒಳ್ಳೆಯದು. ಮೋಸದಿಂದ ನೋಂದಣಿ ಮಾಡಿಸಿಕೊಂಡಿದ್ದರೆ ಮಾತ್ರ ದಾನ ಪತ್ರವನ್ನು ರದ್ದು ಮಾಡಬಹುದು. ಸ್ವ ಇಚ್ಛೆಯಿಂದ ಮಾಡಿದ ದಾನ ಪತ್ರವನ್ನು ರದ್ದು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ನೀವು ರಾಜಿ ಮಾಡಿಕೊಳ್ಳುವುದು ಒಳ್ಳೆಯದು.

    ಅಪ್ಪನ ಆಸ್ತಿಗೆ ವಿಲ್‌ ಮಾಡದೇ ಅಮ್ಮ ಮೃತಪಟ್ಟಳು- ಅದನ್ನು ಭಾಗ ಮಾಡುವುದು ಹೇಗೆ?

    ಮಗನ ಮದುವೆಗೆ ನೆರವಾದದ್ದೇ ತಪ್ಪಾಯ್ತು: ಗಂಡ ಹತ್ತಿರ ಸೇರಿಸುತ್ತಿಲ್ಲ- ಅವರ ಆಸ್ತಿ ಸಿಗುವುದಿಲ್ಲವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts