More

    ಮತಾಂತರಿಗಳಿಗೆ ಮೀಸಲಾತಿಯೂ ಇಲ್ಲ, ಮೀಸಲು ಪ್ರದೇಶದಿಂದ ಸ್ಪರ್ಧೆಯೂ ಇಲ್ಲ- ಸಂವಿಧಾನ ಉಲ್ಲೇಖಿಸಿದ ಸಚಿವ

    ನವದೆಹಲಿ: ಒತ್ತಾಯಪೂರ್ವಕವಾಗಿ, ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವ ಪ್ರಕರಣಗಳು ಒಂದೆಡೆ ಸದ್ದು ಮಾಡುತ್ತಿದ್ದರೆ, ಇದೀಗ ಮತಾಂತರಿಗಳಿಗೆ ಮೀಸಲಾತಿ ಸಿಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪರಿಶಿಷ್ಟ ಜಾತಿಗಳ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖವಾದ ಮಾಹಿತಿಯನ್ನು ನೀಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದೆ.

    ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಂದ ಮೀಸಲಾತಿ ಪಡೆಯುತ್ತಿರುವವರು ಮತಾಂತರಗೊಂಡು ಮುಸ್ಲಿಂ, ಕ್ರೈಸ್ತ ಧರ್ಮವನ್ನು ಪಾಲಿಸಿದರೆ ಅವರಿಗೆ ಯಾವುದೇ ರೀತಿಯ ಮೀಸಲಾತಿ ಸಿಗುವುದಿಲ್ಲ ಹಾಗೂ ಈ ಮೀಸಲಾತಿಗೆ ಸಂಬಂಧಿಸಿದಂತೆ ಇರುವ ಕ್ಷೇತ್ರಗಳಿಂದ ಸ್ಪರ್ಧಿಸಲೂ ಅವಕಾಶವಿಲ್ಲ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ರವಿಶಂಕರ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

    ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಈ ಮಾತನ್ನು ಹೇಳಿದ್ದಾರೆ. ಮತಾಂತರಗೊಂಡ ದಲಿತರು ಪರಿಶಿಷ್ಟ ಜಾತಿಯವರಿಗೆ ಮೀಸಲಾದ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತಿಲ್ಲ. ಅಲ್ಲದೇ, ಇತರೆ ಮೀಸಲಾತಿ ಸೌಲಭ್ಯಗಳು ಕೂಡ ಅವರಿಗೆ ಸಿಗುವುದಿಲ್ಲ ಎಂದು ಹೇಳಿದ್ದಾರೆ.

    ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟ ಜಾತಿ ಅಥವಾ ಪಂಗಡದ ವ್ಯಕ್ತಿಗಳು ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸಲು ಅರ್ಹರೇ, ಹೌದಾದರೆ ಇದಕ್ಕೆ ಇರುವ ಕಾನೂನಿನ ನೆಲೆ ಏನು ಎಂದು ರಾವ್‌ ಅವರು ಪ್ರಶ್ನಿಸಿದ್ದರು.

    ಸಂವಿಧಾನದ ಮೂರನೇ ಪ್ಯಾರ (ಪರಿಶಿಷ್ಟ ಜಾತಿ)ಯ ಪ್ರಕಾರ, ಹಿಂದು, ಸಿಖ್ಖ್‌ ಅಥವಾ ಬೌಧ ಧರ್ಮದ ಹೊರತಾಗಿ ಬೇರೆ ಧರ್ಮದ ಯಾವುದೇ ವ್ಯಕ್ತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿದವರೆಂದು ಪರಿಗಣಿಸಬಾರದು ಎಂದು ಹೇಳುತ್ತದೆ ಎಂಬುದನ್ನು ಅವರ ಸ್ಪಷ್ಟಪಡಿಸಿದ್ದಾರೆ.

    ಇದೇ ವೇಳೆ, ಸಿಖ್ ಮತ್ತು ಬೌದ್ಧ ಧರ್ಮಕ್ಕೆ ಮತಾಂತರವಾದವರಿಗೆ ಮೀಸಲಾತಿ ಸೌಲಭ್ಯ ಸಿಗಲಿದೆ. ಸಂವಿಧಾನದ ಪ್ರಕಾರ ಹಿಂದೂ, ಸಿಖ್, ಬೌದ್ಧ ಧರ್ಮದ ಹೊರತಾಗಿ ಬೇರೆಯವರಿಗೆ ಮೀಸಲಾಗಿರಿಸಿದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಮತಾಂತರಗೊಂಡವರಿಗೆ ಹಕ್ಕು ಇರುವುದಿಲ್ಲ ಎಂದು ತಿಳಿಸಿದ್ದಾರೆ.

    ಸಿಖ್ ಮತ್ತು ಬೌದ್ಧ ಧರ್ಮಕ್ಕೆ ಸೌಲಭ್ಯ ಏಕೆ ಸಿಗಲಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಪರಿಶಿಷ್ಟ ಜನಾಂಗದ ಜನರು ಕಾಡಿನಲ್ಲಿ ನೆಲೆಸಿರುವವರು. ಇವರನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಕಾರಣಕ್ಕಾಗಿಯೇ ರಾಜಕೀಯ ಮೀಸಲಾತಿ ನೀಡಲಾಗಿದೆ.
    ಈ ಮೀಸಲಾತಿಯು ಹಿಂದೂ ಧರ್ಮದಲ್ಲಿ ಇರುವವರಿಗೆ ಮಾತ್ರ ಎಂಬುದನ್ನು 1950ರ ಪರಿಶಿಷ್ಟ ಜಾತಿಗಳ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಂತರದ ದಿನಗಳಲ್ಲಿ ಸಿಖ್‌ ಮತ್ತು ಬೌದ್ಧ ಧರ್ಮವನ್ನು ಇದಕ್ಕೆ ಸೇರಿಸಲಾಗಿದೆ ಎಂದು ರವಿಶಂಕರ್‌ ಪ್ರಸಾದ್‌ ವಿವರಿಸಿದ್ದಾರೆ. ಹಿಂದೂ ಪೂಜಾ ವಿಧಾನಗಳನ್ನೇ ಈ ಎರಡು ಸಮುದಾಯಗಳು ಅನುಸರಿಸುತ್ತಾರೆ ಎಂಬುದನ್ನು ಸಂವಿಧಾನದಲ್ಲಿ ಉಲ್ಲೇಖಿಸಿರುವ ಕಾರಣಕ್ಕೆ ಈ ಜಾತಿಗಳನ್ನೂ ಸೇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

    ಗಂಡನ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಪತ್ನಿ, ಮಕ್ಕಳಿಗೆ ಹಕ್ಕಿದೆಯೆ?

    ಪತಿ ಪಕ್ಕದ ಮನೆಯ ಗಂಡ ಬಿಟ್ಟ ಆಂಟಿಯ ಜತೆ ತುಂಬಾ ಸಲುಗೆಯಿಂದಿದ್ದಾರೆ- ಸರಿದಾರಿಗೆ ಹೇಗೆ ತರಲಿ?

    ಪ್ಯಾಂಟ್‌ ಜಿಪ್‌ ತೆಗೆಯುವುದು, ಬಟ್ಟೆಯ ಮೇಲಿನಿಂದ ಅಂಗ ಮುಟ್ಟುವುದು… ವಿವಾದಿತ ಲೇಡಿ ಜಡ್ಜ್‌ಗೆ ಬಡ್ತಿ ಕಟ್‌!

    ತಾನು ಲವರ್‌ ಜತೆ ಮದುವೆಯಾಗಲು ಪತ್ನಿಯ ಸ್ಕೂಟಿಗೆ ಟ್ರ್ಯಾಕರ್‌ ಫಿಕ್ಸ್‌ ಮಾಡಿದ ಪತಿರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts