More

    ಅರ್ಥಶಾಸ್ತ್ರದಲ್ಲಿ ಇಬ್ಬರಿಗೆ ಸಿಕ್ಕಿತು ನೊಬೆಲ್​ ಪ್ರಶಸ್ತಿ

    ವಾಷಿಂಗ್ಟನ್​: ಅಮೆರಿಕದ ಅರ್ಥಶಾಸ್ತ್ರಜ್ಞ ಪಾಲ್ ಆರ್. ಮಿಲ್​ಗ್ರೋಮ್​ ಮತ್ತು ರಾಬರ್ಟ್ ಬಿ. ವಿಲ್ಸನ್ ಅವರಿಗೆ ಈ ಸಾಲಿನ ಅರ್ಥಶಾಸ್ತ್ರದಲ್ಲಿ ನೊಬೆಲ್​ ಪ್ರಶಸ್ತಿ ಲಭಿಸಿದೆ.

    ಸ್ಟಾಕ್ ಹೋಮ್ ಮೂಲದ ನೊಬೆಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋರಾನ್ ಹಾನ್ಸನ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಣೆ ಮಾಡಿದರು. ಹೊಸ ಹರಾಜು ಸ್ವರೂಪದ ಸಿದ್ಧಾಂತ ಮತ್ತು ಆವಿಷ್ಕಾರಗಳ ಹರಾಜಿನ ಸುಧಾರಣೆಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ.

    ಪಾಲ್ ಆರ್. ಮಿಲ್​ಗ್ರೋಮ್​ ಹರಾಜಿಗೆ ಸಂಬಂಧಪಟ್ಟ ಸಾಮಾನ್ಯ ಸಿದ್ಧಾಂತವನ್ನು ರೂಪಿಸಿದ್ದಾರೆ. ರಾಬರ್ಟ್ ಬಿ. ವಿಲ್ಸನ್ ತರ್ಕಬದ್ಧ ಬಿಡ್​ದಾರರು ಹೇಗೆ ಬಿಡ್​ ಮಾಡುವಾಗ ಚಾಕಚಕ್ಯತೆ ತೋರುತ್ತಾರೆ, ಅಂದಾಜಿಗಿಂತ ಅವರು ಕಡಿಮೆ ಏಕೆ ಬಿಡ್ ಮಾಡುತ್ತಾರೆ ಎಂಬುದರ ಬಗ್ಗೆ ತೋರಿಸಿಕೊಟ್ಟಿದ್ದಾರೆ. ಈ ಅಧ್ಯಯನಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

    ಇದನ್ನೂ ಓದಿ: ವರ್ಲ್ಡ್​ ಫುಡ್​ ಪ್ರೋಗ್ರಾಮ್​ಗೆ ನೊಬೆಲ್​ ಶಾಂತಿ ಪುರಸ್ಕಾರ

    1969ರಿಂದ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದುವರೆಗೂ 51 ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗಿದೆ.

    ಕಳೆದ ಬಾರಿ ಜಾಗತಿಕ ಬಡತನದ ಬಗ್ಗೆ ಸಂಶೋಧನೆ ಮಾಡಿದ್ದ ಮ್ಯಾಚಾಸ್ಯುಸೆಟ್ಸ್ ವಿವಿಯ ಇಬ್ಬರು ಹಾಗೂ ಹಾರ್ವಡ್ ವಿವಿಯ ಮೂವರಿಗೆ ಈ ಪ್ರಶಸ್ತಿ ಲಭಿಸಿತ್ತು.

    ರಸಾಯನ ಶಾಸ್ತ್ರದ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ

    ವರ್ಷಗಳ ಬಳಿಕ ಸಾಹಿತ್ಯ ನೊಬೆಲ್ ಘೋಷಣೆ- ಅಮೆರಿಕದ ಕವಯತ್ರಿಗೆ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts