More

    ವರ್ಷಗಳ ಬಳಿಕ ಸಾಹಿತ್ಯ ನೊಬೆಲ್ ಘೋಷಣೆ- ಅಮೆರಿಕದ ಕವಯತ್ರಿಗೆ ಪ್ರಶಸ್ತಿ

    ಸ್ಟಾಕ್​ಹೋಂ: ಕಾವ್ಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಗಾಗಿ ಅಮೆರಿಕದ ಕವಯತ್ರಿ ಲೂಯಿಸ್ ಗ್ಲುಕ್ (77) 2020ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆಯಾಗಿದೆ. ಸಾಹಿತ್ಯದಲ್ಲಿ ನೊಬಲ್ ಪ್ರಶಸ್ತಿಗೆ ಆಯ್ಕೆಯಾದ 16ನೇ ಮಹಿಳೆ ಗ್ಲುಕ್.

    ಸ್ಪರ್ಧೆಯಲ್ಲಿದ್ದ ಫ್ರೆಂಚ್ ಸಾಹಿತಿ ಮಾರಿಸ್ ಕೊಂಡ್, ಕೆನಡಾ ಕಾದಂಬರಿಕಾರ್ತಿ ಮಾರ್ಗರೆಟ್ ಅಟ್​ವೂಡ್, ರಷ್ಯಾ ಸಾಹಿತಿ ಲ್ಯುಡ್​ವಿುಲಾ ಉಲಿತ್ಸ್​ಕಯಾ ಮತ್ತು ಜಪಾನ್​ನ ಹರುಕಿ ಮುರಕಾಮಿ ಅವರನ್ನು ಗ್ಲುಕ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. 1943ರಲ್ಲಿ ನ್ಯೂಯಾರ್ಕ್​ನಲ್ಲಿ ಜನಿಸಿದ ಗ್ಲುಕ್ ಮಸಾಚುಯೆಟ್ಸ್​ನ ಕೇಂಬ್ರಿಜ್​ನಲ್ಲಿ ನೆಲೆಸಿದ್ದಾರೆ.

    ಇದನ್ನೂ ಓದಿ: ಮೂವರು ಸೈಂಟಿಸ್ಟ್​​ಗಳಿಗೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ

    ಯೇಲ್ ವಿಶ್ವವಿದ್ಯಾಲಯದಲ್ಲಿ ಬೋಧಕಿಯಾಗಿದ್ದಾರೆ. ವಿಶ್ವ ಮಾನವತ್ವದ ಹುಡುಕಾಟದಲ್ಲಿರುವ ಗ್ಲುಕ್, ಪುರಾಣಗಳು ಮತ್ತು ಶಾಸ್ತ್ರಿಯ ಗ್ರಂಥಗಳಿಂದ ಸ್ಪೂರ್ತಿ ಪಡೆದಿದ್ದಾರೆ. ಅದು ಅವರ ಬಹುತೇಕ ಕೃತಿಗಳ ಪ್ರಧಾನ ಲಕ್ಷಣವಾಗಿದೆ ಎಂದು ಸ್ವೀಡಿಶ್ ಅಕಾಡೆಮಿ ಹೇಳಿದೆ. ಗ್ಲುಕ್ 1993ರಲ್ಲಿ ಪುಲಿಟ್ಜರ್ ಪ್ರಶಸ್ತಿ ಹಾಗೂ 2014ರಲ್ಲಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಗಳಿಸಿದ್ದಾರೆ. ವಿವಾದ ಹಾಗೂ ಲೈಂಗಿಕ ಹಗರಣ ಆರೋಪಗಳ ಹಿನ್ನೆಲೆಯಲ್ಲಿ ಕೆಲವು ವರ್ಷ ಸಾಹಿತ್ಯ ನೊಬೆಲ್ ಪ್ರಶಸ್ತಿ ನೀಡಿರಲಿಲ್ಲ. (ಏಜೆನ್ಸೀಸ್)

    ‘ಅಧಿಕಾರ ಸಿದ್ಧಾಂತ’ ಒಂದಕ್ಕೇ ಅಂಟಿಕೊಂಡ ಕಾರಣ ಮೈತ್ರಿಕೂಟಗಳ ಆಪ್ತಮಿತ್ರರಾಗಿದ್ದರು ಅವರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts