More

    ಈ ಮಗುವಿಗೆ 60 ವರ್ಷ ಎಷ್ಟು ಬೇಕೋ ಅಷ್ಟು ಪಿಜ್ಜಾ ಫ್ರೀ! ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ…

    ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹುಟ್ಟಿರುವ ನವಜಾತ ಗಂಡು ಮಗುವಿಗೆ ಡೋಮಿನಾಸ್​ ಪಿಜ್ಜಾ ಸಂಸ್ಥೆ ಭರ್ಜರಿ ಆಫರ್​ ನೀಡಿದೆ. ಅದೇನೆಂದರೆ ಮುಂದಿನ 60 ವರ್ಷಗಳವರೆಗೆ ಉಚಿತವಾಗಿ ಪಿಜ್ಜಾ ನೀಡಲಿದೆ.

    ಇಂಥದ್ದೊಂದು ವಿಶೇಷ ಆಫರ್​ ಮಗುವಿಗೆ ಕೊಟ್ಟಿರುವುದು ಏಕೆ ಗೊತ್ತಾ? ಅದರ ಹೆಸರಿನಿಂದಾಗಿ. ನಿಜ. ಹಾಗಿದ್ದರೆ ಆ ಮಗುವಿಗೆ ಅದೆಂಥ ಹೆಸರು ಇಟ್ಟಿರಬಹುದು ಎಂದು ನೀವು ಊಹಿಸಬಹುದು. ಮಗುವಿಗೆ ಇಟ್ಟಿರುವ ಹೆಸರು ಡೊಮಿನಿಕ್​ ಜೂಲಿಯನ್​ ಲಾಟ್​​.

    ಈ ಹೆಸರು ಡೊಮಿನಿಕ್​ ಸಂಸ್ಥೆಗೆ ತುಂಬಾ ಖುಷಿ ತಂದಿದೆ. ತಮ್ಮದೇ ಸಂಸ್ಥೆಯ ಹೆಸರನ್ನು ಮಗುವಿಗೆ ಇಟ್ಟಿರುವುದರಿಂದ ಈ ಉಡುಗೊರೆ ಎಂದಿದೆ.

    ಅಷ್ಟಕ್ಕೂ ಈ ಉಡುಗೊರೆ ನೀಡಿರುವ ಹಿಂದೆ ಕಾರಣವೂ ಇದೆ. ಡೊಮಿನಿಕ್​ ಸಂಸ್ಥೆಗೆ ಇದೀಗ 60ರ ಹರೆಯ. ಇದು ತನ್ನ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಇದೇ ಸಮಯದಲ್ಲಿ ಈ ಮಗುವೂ ಹುಟ್ಟಿದ್ದು, ಆ ಮಗುವಿಗೆ ಸಂಸ್ಥೆಯ ಹೆಸರನ್ನೇ ಇಟ್ಟಿರುವುದಕ್ಕೆ ಈ ಭರ್ಜರಿ ಆಫರ್​ ಸಿಕ್ಕಿದೆ.

    ಡಿಸೆಂಬರ್​ 9ರಂದು ಸಂಸ್ಥೆಗೆ 60 ವರ್ಷ ಆಗಿದ್ದು, ಕ್ಲೆಮೆಂಟೈನ್​ ಓಲ್ಡ್​ಫೀಲ್ಡ್ ಹಾಗೂ ಆಂಥೋನಿ ಲಾಟ್​ ದಂಪತಿಗೆ ಮಗು ಕೂಡ ಅಂದೇ ಹುಟ್ಟಿದೆ.

    ಮಗುವಿನಿಂದಾಗಿ ಈ ದಂಪತಿ ಇದೀಗ ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮೊದಲೇ ಗೊತ್ತಿದ್ದರೆ ಈಗ ಹುಟ್ಟಿರುವ ಮಗುವಿಗೆ ಇದೇ ಹೆಸರು ಇಡುತ್ತಿದ್ದೆವು ಎಂದು ಇತರ ದಂಪತಿ ಬೇಸರ ಪಟ್ಟಿಕೊಳ್ಳುತ್ತಿರಬಹುದೇನೋ.

    ಲಿವ್​ ಇನ್ ಹೆಸರಲ್ಲಿ ಗರ್ಭಿಣಿ ಮಾಡಿ ಬೀದಿಗೆ ಬಿಟ್ಟಿದ್ದಾನೆ- ಆತ್ಮಹತ್ಯೆ ಬಿಟ್ಟು ಬೇರೆನು ಮಾಡಲಿ?

    ಜಗಳ ಮಾಡುವಾಗ ಮೆದುಳಿನಿಂದ ಶಬ್ದ ಬರುತ್ತಿದ್ದು, ಭಯವಾಗುತ್ತಿದೆ; ಪರಿಹಾರ ಏನು?

    ಇಲ್ಲಿ ನಿರ್ಮಾಣವಾಯ್ತು ನಟ ಸೋನು ಸೂದ್​ ದೇವಾಲಯ: ನಿತ್ಯವೂ ಪೂಜೆ, ಆರತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts