More

    ಪ್ರಧಾನಿ ಮೋದಿಗೆ ಬಂತು ಹೊಚ್ಚ ಹೊಸ ಕಾರು: ಇದರ ಬೆಲೆ, ವಿಶೇಷತೆಗಳು ಏನು ಗೊತ್ತಾ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕಾರನ್ನು ಬದಲಾಯಿಸಿದ್ದು, ಈ ಹೊಸ ಕಾರು ಇನ್ನಷ್ಟು ಭದ್ರತೆಯನ್ನು ಹೊಂದಿದೆ. ಅವರು ಇಲ್ಲಿಯವರೆಗೆ ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್​​ ಬಳಸುತ್ತಿದ್ದರು. ಇದೀಗ ಅದನ್ನು ಬದಲಾಯಿಸಿ ಮರ್ಸಿಡಸ್​ ಮೇಬ್ಯಾಕ್​​ ಎಸ್‌ 650 ಕಾರ್‌ (Mercedes-Maybach S650) ಬಳಸಲು ಶುರು ಮಾಡಿದ್ದಾರೆ.

    ಶಸ್ತ್ರಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯದೊಂದಿಗೆ ಹೆಚ್ಚಿನ ಭದ್ರತೆಯನ್ನೂ ಹೊಂದಿರುವ ಈ ಕಾರಿನ ಬೆಲೆ 12 ಕೋಟಿ ರೂಪಾಯಿ. ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋದಿಯವರು ಇದೇ ಕಾರನ್ನು ಬಳಸಿ ಹೈದರಾಬಾದ್​ ಹೌಸ್​ನಲ್ಲಿ ಪುಟಿನ್‌ ಅವರನ್ನು ಭೇಟಿಯಾಗಿದ್ದರು.

    ಮೋದಿಯವರು ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದ ಕಾರು ಬುಲೆಟ್​ ಪ್ರೂಫ್​ ಆಗಿತ್ತು. 2014ರಲ್ಲಿ ಪ್ರಧಾನಿಯಾದ ನಂತರ ಮೊದಲ ಅವಧಿಗೆ ತಮ್ಮ ಕಾರಿನಲ್ಲಿ ಅಷ್ಟೊಂದು ಬದಲಾವಣೆ ಮಾಡಲಿಲ್ಲ. ಆದರೆ ಎರಡನೇ ಅವಧಿಯಲ್ಲಿ ಆಗಾಗ ಅವರು ಬಳಸುವ ಕಾರು ಬದಲಾಗುತ್ತಿದೆ. ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಮತ್ತು ಬಿಎಂಡಬ್ಲ್ಯೂ ಸರಣಿಯ ಕಾರುಗಳನ್ನು ಈಗಾಗಲೇ ಬಳಸಿದ್ದಾರೆ.

    ಪ್ರಧಾನಿ ಮೋದಿ ಈ ಹಿಂದೆ ಬಳಸುತ್ತಿದ್ದ ಕಾರಿನಲ್ಲಿಯೂ ವಿಶೇಷವಾದ ಭದ್ರತಾ ವ್ಯವಸ್ಥೆ ಇತ್ತು. ಆದರೆ ಇದೀಗ ಈ ಹೊಸ ಕಾರಿನಲ್ಲಿ ಇನ್ನಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಕಾರು ಕಳೆದ ವರ್ಷವಷ್ಟೇ ಭಾರತದಲ್ಲಿ ಬಿಡುಗಡೆಯಾಗಿದ್ದು, ಆಗ ಅದರ ಬೆಲೆ 10.5 ಕೋಟಿ ರೂಪಾಯಿ ಇತ್ತು. ಆದರೆ ಸದ್ಯ ಅದರ ಮೌಲ್ಯ 12 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

    ಇದರ ವಿಶೇಷತೆಗಳು ಏನು ಗೊತ್ತಾ?
    ಇದರ ಬೆಲೆ ಮೊದಲೇ ಹೇಳಿದ ಹಾಗೆ 12 ಕೋಟಿ ರೂಪಾಯಿ. ಈ ಕಾರು 6.0 ಲೀಟರ್​​ ಸಾಮರ್ಥ್ಯದ ಅವಳಿ ಟರ್ಬೋ ವಿ12 ಇಂಜಿನ್‌ನಿಂದ ಚಾಲಿತವಾಗುತ್ತದೆ. ಗಂಟೆಗೆ 160 ಕಿಮೀಗಳಷ್ಟು ವೇಗವಾಗಿ ಓಡುವ ಶಕ್ತಿ ಇದಕ್ಕಿದೆ.

    ಕಾರಿನ ಕಿಟಕಿ ಮತ್ತು ಇಡೀ ಮೈ ಸ್ಟೀಲ್​ ಕೋರ್​ ಗುಂಡುಗಳನ್ನು ತಡೆದುಕೊಳ್ಳಬಹುದು. ಕಾರಿನ ಕಿಟಕಿಗಳು ಸಲೂನ್ ಬುಲೆಟ್‌ಗಳನ್ನು ತಡೆದುಕೊಳ್ಳಬಲ್ಲವು. ಇದು 2010ರ ಸರಣಿಯ ಸ್ಫೋಟಕ ಪ್ರೂಫ್​ ರೇಟಿಂಗ್​ ಪಡೆದುಕೊಂಡಿದ್ದು, ಕೆಲ ಮೀಟರ್ ಅಂತರದಲ್ಲೇ ಟ್ರಿನಿಟ್ರೋಟೊಲ್ಯೂನ್ ಸ್ಫೋಟವಾದರೂ ಈ ಕಾರು ತಡೆದುಕೊಳ್ಳಬಹುದು. ಕೇವಲ ಎರಡು ಮೀಟರ್ ದೂರದಿಂದ 15 ಕೆ.ಜಿ ಟಿಎನ್‌ಟಿ ಸ್ಫೋಟದಿಂದ ಪ್ರಯಾಣಿಕರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ.

    ಕಾರಿನ ಕಿಟಕಿಗಳ ಒಳಭಾಗವನ್ನು ಪಾಲಿಕಾರ್ಬೊನೇಟ್ ಲೇಪನದಿಂದ ತಯಾರಿಸಲಾಗಿದೆ. ಇದು ನೇರ ಸ್ಫೋಟದಿಂದ ಪ್ರಯಾಣಿಕರನ್ನು ರಕ್ಷಿಸಲು ಹೆಚ್ಚು ನೆರವಾಗುತ್ತದೆ. ರಾಸಾಯನಿಕ ದಾಳಿಯ ಸಂದರ್ಭದಲ್ಲಿ ಕ್ಯಾಬಿನ್​ನಿಂದಾಗಿ ಪ್ರತ್ಯೇಕ ಗಾಳಿಯ ಪೂರೈಕೆಯನ್ನು ನೀಡುವಂತೆ ಈ ಕಾರನ್ನು ತಯಾರಿಸಲಾಗಿದೆ. ಕಾರು ವಿಶೇಷವಾದ ರನ್-ಫ್ಲಾಟ್ ಟೈರ್‌ಗಳನ್ನು ಹೊಂದಿದೆ. ಇದಕ್ಕೆ ಹಾನಿಯಾದರೆ ಅಥವಾ ಯಾವುದಾದರೂ ಕಾರಣಕ್ಕೆ ಪಂಕ್ಚರ್‌ ಆದರೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.

    ಮದ್ಯ ಬೇಕಾ? ನಮ್‌ ರಾಜ್ಯ ಬೇಕಾ? ಒಂದನ್ನು ಆಯ್ಕೆ ಮಾಡ್ಕೊಳಿ… ಎಣ್ಣೆ ಬೇಕಾದ್ರೆ ಕಾಲಿಡ್ಲೇಬೇಡಿ ಎಂದ ಬಿಹಾರದ ಸಿಎಂ

    ಯಾರಲ್ಲಿ.. ಎಲ್ರೂ ಬರ್ರಪ್ಪಾ.. ಯಾವ್‌ ಪಕ್ಷ ಆದ್ರೇನು… ಎಲ್ಲರೂ ನಮ್ಮವ್ರೇ.. ಬನ್ನಿ ಫೋಟೋಗೆ ಎಂದು ಮನಗೆದ್ದ ಸಿ.ಟಿ.ರವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts