More

  ಕ್ರಿಕೆಟ್ ತಂಡದ ಮಾಜಿ ನಾಯಕನ ವಿರುದ್ಧ ರೇಪ್​ ಕೇಸ್​: ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿ ಸಿಕ್ಕಿಬಿದ್ದ ಕ್ರಿಕೆಟಿಗ

  ಕಠ್ಮಂಡು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪದಡಿ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ ಅವರನ್ನು ಬಂಧಿಸಲಾಗಿದೆ.

  ಕ್ರಿಕೆಟ್ ಆಡಲು ವಿದೇಶಕ್ಕೆ ಹೋಗಿದ್ದ ಲಮಿಚಾನೆ ತವರಿಗೆ ವಾಪಸಾಗುತ್ತಿದ್ದಂತೆಯೇ ನೇಪಾಳ ಪೊಲೀಸರು ಅವರನ್ನು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ. ತಾವು ತವರಿಗೆ ವಾಪಸಾಗುತ್ತಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರಿಂದ ಪೊಲಿಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು.

  ಸೆಪ್ಟೆಂಬರ್ 7 ರಂದು ಇವರ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. 17 ವರ್ಷ ವಯಸ್ಸಿನ ಬಾಲಕಿ ಇವರ ವಿರುದ್ಧ ರೇಪ್​ ಕೇಸ್​ ದಾಖಲು ಮಾಡಿದ್ದಾಳೆ. ತಾನು ಲಮಿಚಾನೆ ಅವರ ಅಭಿಮಾನಿಯಾಗಿದ್ದು, ವಾಟ್ಸ್​ಆ್ಯಪ್​ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿದ್ದೆ ಎಂದಿರುವ ಬಾಲಕಿ, ನೇಪಾಳ ಕ್ರಿಕೆಟ್ ತಂಡದ ಕೀನ್ಯಾಗೆ ತೆರಳುವ ಮುನ್ನ ಸಂದೀಪ್ ಲಮಿಚಾನೆ ನನ್ನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾಗ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ರಾತ್ರಿ 8 ಗಂಟೆಗೆ ಹಾಸ್ಟೆಲ್​ ಗೇಟ್‌ ಮುಚ್ಚಿದ್ದರಿಂದ ಅವರ ಜತೆ ಕಠ್ಮಂಡುವಿನ ಹೋಟೆಲ್​ನಲ್ಲಿ ಉಳಿಸಿಕೊಂಡಾಗ ಈ ಘಟನೆ ನಡೆದಿದೆ ಎಂದು ದೂರಿದ್ದಾಳೆ.

  ದೂರು ದಾಖಲಾಗುತ್ತಿದ್ದಂತೆಯೇ ವಿಚಾರಣೆಗೆ ಆಗಮಿಸುವಂತೆ ಸಂದೀಪ್ ಲಮಿಚಾನೆಗೆ ತಿಳಿಸಲಾಗಿತ್ತು. ಆದರೆ ಸಿಪಿಎಲ್​ ಮುಗಿದರೂ ಯುವ ಕ್ರಿಕೆಟಿಗ ಸ್ವದೇಶಕ್ಕೆ ಮರಳಿರಲಿಲ್ಲ. ಹೀಗಾಗಿ ಸಂದೀಪ್ ಲಮಿಚಾನೆ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿತ್ತು. ಅದರಂತೆ ಇದೀಗ ಕಠ್ಮಂಡುವಿಗೆ ಆಗಮಿಸಿದ ಕ್ರಿಕೆಟಿಗನನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್​)

  ಅಂಬಾನಿ ಕುಟುಂಬಕ್ಕೆ ಬೆದರಿಕೆ ಹಾಕಿದವ ಕೊನೆಗೂ ಸಿಕ್ಕಿಬಿದ್ದ: ಎಂಟು ಬಾರಿ ಕರೆ ಮಾಡಿದ್ದ ಭೂಪ..

  ಸತ್ತವನನ್ನೇ ಮದ್ವೆಯಾದ ಖತರ್ನಾಕ್​ ಬಾರ್​ ಗರ್ಲ್​! ಪಾದ್ರಿ ನೀಡಿದ ಸಾಥ್​: 20 ಕೋಟಿ ರೂ. ಗುಳುಂ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts