More

    ‘ನೀಟ್‌’ ಪರೀಕ್ಷೆ ಕರೊನಾದಿಂದ ಪೋಸ್ಟ್‌ಪೋನ್‌ ಆಗಿದ್ಯಾ? ವೈರಲ್‌ ಸುದ್ದಿಯ ಹಿಂದಿನ ಸತ್ಯ ಇಲ್ಲಿದೆ ನೋಡಿ…

    ನವದೆಹಲಿ: ನೀಟ್​-ಪಿಜಿ (NEET PG) ಕೌನ್ಸೆಲಿಂಗ್‌ನ ನೋಂದಣಿ ಪ್ರಕ್ರಿಯೆಯು ಜನವರಿ 12ರಿಂದ ಪ್ರಾರಂಭವಾಗಿದ್ದು, ಮಾರ್ಚ್‌ 12ರಿಂದ ಪರೀಕ್ಷೆ ನಡೆಯುತ್ತಿದೆ. ಈ ನಡುವೆಯೇ ಈ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ರಾಷ್ಟ್ರೀಯ ಪರೀಕ್ಷಾ ಮಂಡಳಿಯ (National Board of Examinations) ಹೆಸರಿನಲ್ಲಿ ಸುತ್ತೋಲೆಯೊಂದು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಸಿದೆ. ಆದರೆ ಅಸಲಿಗೆ ಏನೆಂದರೆ ಈ ಸುತ್ತೋಲೆಯು ನಕಲಿಯಾಗಿದ್ದು, ಸದ್ಯ ಪರೀಕ್ಷೆಯನ್ನು ಮುಂದೂಡಲಾಗಿಲ್ಲ.

    ಈ ಬಗ್ಗೆ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿ ಸ್ಪಷ್ಟನೆ ನೀಡಿದ್ದು. ಸರ್ಕಾರವು ಪರೀಕ್ಷೆಯನ್ನು ಮುಂದೂಡುವ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನೋಟಿಸ್‌ ಅನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಹೇಳಿದೆ.

    ಇದರ ಕೌನ್ಸೆಲಿಂಗ್ ಅನ್ನು ನಾಲ್ಕು ವಿಭಿನ್ನ ಸುತ್ತುಗಳಲ್ಲಿ ನಡೆಸಲಾಗುತ್ತದೆ. AQI Round 1, AQI Round 2, AIQ mop-up round ಮತ್ತು stray vacancy round. ಅಭ್ಯರ್ಥಿಗಳು ಜನವರಿ 18 ರಿಂದ ಜನವರಿ 19, 2022 ರವರೆಗೆ 1 ನೇ ಸುತ್ತಿನ ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಅದರ ನಂತರ, ಸೀಟು ಹಂಚಿಕೆ ಪ್ರಕ್ರಿಯೆಯು ಜನವರಿ 20 ಮತ್ತು 21 ರಂದು ಪ್ರಾರಂಭವಾಗುತ್ತದೆ. ಫಲಿತಾಂಶಗಳು ಜನವರಿ 22, 2022 ರಂದು ಬಿಡುಗಡೆಯಾಗುತ್ತವೆ. ಅಭ್ಯರ್ಥಿಗಳು ಸಂಪೂರ್ಣ ನೀಟ್‌ ಪಿಜಿ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

    ನಕಲಿ ಸುತ್ತೋಲೆಯಲ್ಲಿ ಏನಿದೆ?
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW), ಭಾರತ ಸರ್ಕಾರವು 10.01.2022 ದಿನಾಂಕದ ತನ್ನ ಪತ್ರ ಸಂಖ್ಯೆ V. 11025/215/2020-MEP (FTS-8079808) ಅನ್ನು ಪ್ರಸ್ತುತ COVID ಪರಿಸ್ಥಿತಿಯ ಬೆನ್ನಲ್ಲೇ ನಿರ್ದೇಶನ – ಕೋವಿಡ್ -19 ಸಾಂಕ್ರಾಮಿಕ ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಗಣನೆಗೆ ತೆಗೆದುಕೊಂಡು, ಮಾರ್ಚ್ 12, 2022 ರಂದು ನಡೆಯಲಿರುವ NEET-PG 2022 ಪರೀಕ್ಷೆಯನ್ನು ಮುಂದೂಡಲಾಗಿದೆ. ನೀಟ್-ಪಿಜಿ 2022 ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಪ್ರಕಟಿಸಲಾಗುವುದು’ ಎಂದು ಸುತ್ತೋಲೆ ಹರಿದಾಡುತ್ತಿದ್ದು, ಇದು ನಕಲಿಯದ್ದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts