More

    ದೆಹಲಿಯ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್‌: ಮಕರ ಸಂಕ್ರಾಂತಿಗೆ ಖರೀದಿಗೆ ಬರುವವರೇ ಟಾರ್ಗೆಟ್‌!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಾಜಿಪುರದಲ್ಲಿರುವ ಹೂವಿನ ಮಾರ್ಕೆಟ್​ನಲ್ಲಿ ಬಾಂಬ್ ಇರಿಸಿರುವ ಘಟನೆ ನಡೆದಿದೆ. ಮಕರ ಸಂಕ್ರಾಂತಿ ನಿಮಿತ್ತ ಹೂವಿನ ಖರೀದಿಗೆ ಬರುವವರನ್ನು ಟಾರ್ಗೆಟ್‌ ಮಾಡಲಾಗಿತ್ತೆ ಎಂಬ ಸಂದೇಹ ಪೊಲೀಸರಲ್ಲಿ ಬಲವಾಗಿದೆ.

    ಅನುಮಾನಾಸ್ಪದವಾದ ಚೀಲವೊಂದು ಹೂವಿನ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು. ಆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಅರಿವೇ ಇಲ್ಲದಿದ್ದ ಜನರು ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಹೂವಿನ ಮಾರುಕಟ್ಟೆ ಜನರಿಂದ ತುಂಬಿ ಹೋಗಿತ್ತು. ಈ ಬ್ಯಾಗ್‌ನ ಮಾಹಿತಿ ಸಿಗುತ್ತಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.

    ಚೀಲದಲ್ಲಿ ಬಾಂಬ್‌ ಇರುವುದು ತಿಳಿಯುತ್ತಲೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಜೊತೆಗೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದು ಬ್ಯಾಗನ್ನು ವಶಕ್ಕೆ ಪಡೆದಿದ್ದಾರೆ. ನಂತರ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಹಬ್ಬಕ್ಕೆ ಭರ್ಜರಿ ಖರೀದಿಗೆಂದು ಬರುವವರನ್ನೇ ಟಾರ್ಗೆಟ್‌ ಮಾಡಿರುವ ಶಂಕೆ ಇದೆ. ಬಾಂಬ್‌ ಬ್ಲಾಸ್ಟ್‌ ಆಗಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾ ತಿಳಿಸಿದ್ದಾರೆ.

    ಸನ್ಯಾಸಿನಿಯ ಮೇಲೆ ಅತ್ಯಾಚಾರ: ಆರೋಪಮುಕ್ತಗೊಂಡ ಕೇರಳದ ಬಿಷಪ್‌- ಕೋರ್ಟ್‌ನಿಂದ ಆದೇಶ

    ಕರೊನಾದಿಂದ ಮರುಜೀವ: ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟ ದಾನ ಮಾಡಿದ ಕೇರಳದ ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts