More

    ಚಿನ್ನದ ಪದಕವನ್ನು ಮಿಲ್ಕಾಸಿಂಗ್‌ಗೆ ಅರ್ಪಿಸಿದ ನೀರಜ್‌: ಸ್ವರ್ಗದಿಂದ ತಂದೆ ನೋಡುತ್ತಿದ್ದಾರೆಂದು ಕಂಬನಿ ಮಿಡಿದ ಮಗ

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಗೆದ್ದಿರುವ ಭಾರತದ ನೀರಜ್ ಚೋಪ್ರಾ ಅವರು ತಮ್ಮ ಪದಕವನ್ನು ಫ್ಲೈಯಿಂಗ್ ಸಿಖ್’ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್ ಅರ್ಪಣೆ ಮಾಡಿದ್ದಾರೆ. ಜಗತ್ತು ಕಂಡ ಅತ್ಯುತ್ತಮ ಅಥ್ಲೀಟ್ ಮಿಲ್ಕಾ ಸಿಂಗ್‌ ಅವರಿಗೆ ಅಥ್ಲೇಟಿಕ್ಸ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಬಹುದೊಡ್ಡ ಕನಸಿತ್ತು. ಆದ್ದರಿಂದ ಇದನ್ನು ಅವರಿಗೆ ಅರ್ಪಣೆ ಮಾಡುವುದಾಗಿ ಚೋಪ್ರಾ ಹೇಳಿದ್ದಾರೆ.

    ಫೈನಲ್ಸ್‌ನ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನ ಗೆದ್ದ ಚೋಪ್ರಾ, ಈ ಮೂಲಕ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯರಾದರು.

    ‘ಮಿಲ್ಕಾ ಸಿಂಗ್ ಅವರು ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಕೇಳಲು ಬಯಸಿದ್ದರು. ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರ ಕನಸು ಈಡೇರಿದೆ’ ಎಂದಿದ್ದಾರೆ ಚೋಪ್ರಾ.

    ಕರೊನಾದಿಂದಾಗಿ ಮಿಲ್ಕಾ ಸಿಂಗ್‌ ಅವರು ಕಳೆದ ಜೂನ್‌ನಲ್ಲಿ ನಿಧನರಾಗಿದ್ದಾರೆ. 1960 ಒಲಿಂಪಿಕ್ಸ್‌ನಲ್ಲಿ ಕೈತಪ್ಪಿದ ಪದಕ ದೇಶಕ್ಕೆ ಬರಲಿ ಎನ್ನುವ ದೊಡ್ಡ ಆಸೆ ಹೊಂದಿದ್ದರು ಅವರು. 400ಮೀಟರ್ ಓಟದಲ್ಲಿ ಮಿಲ್ಕಾ ನಾಲ್ಕನೆಯವರಾಗಿ ಗುರಿ ಮುಟ್ಟಿದ್ದರು. ಭಾರತದ ಪಿ.ಟಿ ಉಷಾ ಸಹ 24 ವರ್ಷದ ಹಿಂದೆ ಕೊಂಚದರಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಆದರೆ ಸಿಂಗ್‌ ಅವರ ಕನಸು ಈಗ ಈಡೇರಿದೆ.

    ಈ ನಡುವೆಯೇ ಮಿಲ್ಕಾ ಸಿಂಗ್ ವರ ಮಗ ಜೀವ್ ಟ್ವಿಟ್ ಮೂಲಕ ಕಂಬನಿ ಹರಿಸಿದ್ದಾರೆ. ‘ಚಿನ್ನದ ಪದಕ ನೋಡಲು ತಂದೆ ತುಂಬಾ ವರ್ಷಗಳ ಕಾಲ ಕಾಯುತ್ತಿದ್ದರು. ಭಾರತದ ಮೊದಲ ಅಥ್ಲೆಟಿಕ್ ಚಿನ್ನದ ಪದಕ ಗೆದ್ದಿರುವುದು ಅವರ ಕನಸು ಕೊನೆಗೂ ನನಸಾಗಿದೆ. ನಾನು ಈ ಟ್ವೀಟ್ ಮಾಡುವಾಗ ನಾನು ಅಳುತ್ತಿದ್ದೇನೆ. ತಂದೆ ಮೇಲೆ ಅಳುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. ನಿಮ್ಮ ಒಲಿಂಪಿಕ್ಸ್ ಪದಕವನ್ನು ಅವರಿಗೆ ಅರ್ಪಿಸಿದ್ದಕ್ಕಾಗಿ ಧನ್ಯವಾದಗಳು’ ಎಂದಿದ್ದಾರೆ.

    ದೇಶದಲ್ಲಿಯೇ ಮೊದಲ ಪ್ರಯೋಗವಾದ ರಾಷ್ಟ್ರೀಯ ವೆಬಿನಾರ್​ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

    40 ಚಪಾತಿ ತಿಂದು ದೃಷ್ಟಿ ಕಳೆದುಕೊಂಡ 12 ವರ್ಷದ ಬಾಲಕ! ತಲೆಯಲ್ಲಿ ಕೀವು: ವೈದ್ಯರೇ ಶಾಕ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts