More

    ದೇಶದಲ್ಲಿಯೇ ಮೊದಲ ಪ್ರಯೋಗವಾದ ರಾಷ್ಟ್ರೀಯ ವೆಬಿನಾರ್​ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

    ಬೆಂಗಳೂರು: ಯಾವುದೇ ಒಂದು ವಿಚಾರವಾಗಿ ಎಲ್ಲ ಆಯಾಮಗಳಲ್ಲಿ ಚರ್ಚೆ, ವಾದ-ಸಂವಾದ, ಅಭಿಪ್ರಾಯಗಳ ಹಂಚಿಕೆ ದೇಶಾದ್ಯಂತ ನಡೆಯುತ್ತಿದ್ದು, ಹಳ್ಳಿಯಿಂದ ದೆಹಲಿಯವರೆಗೆ ನಡೆಯುತ್ತಿರುವ ಈ ವಾದಗಳು ಏತಕೋಸ್ಕರ, ಯಾರಿಗೋಸ್ಕರ ನಡೆಯುತ್ತಿವೆ ಎಂಬುದರ ಬಗ್ಗೆ ನಿರ್ದಿಷ್ಟ ದಿಕ್ಸೂಚಿ, ಮಾರ್ಗದರ್ಶನ ನೀಡುವಂತಹ ಅಧ್ಯಯನ ವರದಿಯನ್ನು ವಿಜ್ಞಾನೇಶ್ವರ ಅಧ್ಯಯನ ಪೀಠ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಲಹೆ ನೀಡಿದರು.

    ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಮಿತಾಕ್ಷರ, ವಚನ, ದಾಸ ಮತ್ತು ಜಾನಪದದಲ್ಲಿ ಕಾನೂನಿನ ಸಮಾಜಮುಖಿ ಮೌಲ್ಯಗಳು – ಒಂದು ಪರಿಶೋಧನೆ’ ರಾಷ್ಟ್ರೀಯ ವೆಬಿನಾರ್ ಅನ್ನು ಸಿಎಂ ಗೃಹ ಕಚೇರಿ ಕೃಷ್ಣಾ ದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಕಾನೂನು ಮತ್ತು ಸಮಾಜ ಎರಡು ಬೇರೆಯಲ್ಲ. ಕಾನೂನಿನಲ್ಲಿ ಸಾಮಾಜಿಕ ಮೌಲ್ಯಗಳು ಬದಲಾಗುತ್ತಿವೆ. ಹಾಗೆಯೇ ಸಾಮಾಜಿಕ ಮೌಲ್ಯಗಳು, ಪ್ರತಿ ವ್ಯಕ್ತಿಯ ನಡುವಿನ ಬಾಂಧವ್ಯ‌ಗಳು ಪರಿವರ್ತನೆಯಾಗುತ್ತಿದ್ಸು, ಪ್ರತಿಯೊಂದು ವಿಷಯ ಮೇಲೆ‌ ವಾದಗಳು ನಡೆಯುತ್ತಿವೆ ಎಂದು ಬೊಮ್ಮಾಯಿ‌ ಹೇಳಿದರು.

    ಆಡಳಿತದಲ್ಲಿ ಮೌಲ್ಯಗಳ ಮರು ಸ್ಥಾಪನೆಯ ಕಾಲಘಟ್ಟದಲ್ಲಿದ್ದು, ಈ‌ ನಿಟ್ಟಿನಲ್ಲಿ ರಾಷ್ಟ್ರೀಯ ವೆಬಿನಾರ್ ಮೊದಲ ಹೆಜ್ಜೆಯಾಗಿದ್ದು, ಇದೊಂದು ವಿಶಿಷ್ಟ ಹಾಗೂ ದೇಶದಲ್ಲಿಯೇ ಮೊದಲ ಪ್ರಯೋಗವೆಂದು ಬಸವರಾಜ ಬೊಮ್ಮಾಯಿ‌ ಪ್ರಶಂಸಿಸಿದರು.

    ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ. ಬಿ.ಎನ್.ಶ್ರೀಕೃಷ್ಣ, ನ್ಯಾ. ಶಿವರಾಜ್ ಪಾಟೀಲ್, ಸಚಿವ ವಿ.ಸೋಮಣ್ಣ, ಡಾ:ಕೆ.ಸುಧಾಕರ್, ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ: ಪಿ.ಈಶ್ವರ ಭಟ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ , ಬಿ.ಬಿ.ಎಂ.ಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದರು.

    VIDEO: ಮುಖ್ಯಮಂತ್ರಿ ಬೊಮ್ಮಾಯಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಅಜ್ಜಿಯ ದೌಡು

    ಬೇಡ ಅಂದ್ರೂ ರಾಜ್​ ಕುಂದ್ರಾ ಕಿಸ್​ ಮಾಡಿ, ಹೇಗೇಗೋ ವರ್ತಿಸಿದ್ರು ಅಂದ ನಟಿಗೆ ಪೊಲೀಸರಿಂದ ಬುಲಾವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts