More

    ಮದರಾಸಾಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ: ಮೊದಲು ಜನ ಗಣ ಮನ, ನಂತರ ಕಲಿಕೆ ಎಂದ ಯುಪಿ

    ಲಖನೌ: ಉತ್ತರ ಪ್ರದೇಶದ ಎಲ್ಲಾ ಮದರಸಾಗಳು ತರಗತಿ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪಠಿಸುವಂತೆ ಉತ್ತರ ಪ್ರದೇಶ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರದ ಪರವಾಗಿ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಡ್ಯಾನಿಷ್​ ಆಜಾನ್​ ಅನ್ಸಾರಿ ಈ ಆದೇಶ ಹೊರಡಿಸಿದ್ದಾರೆ.

    ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ನಡೆಸಿದ ಸಭೆಯಲ್ಲಿ ಕೆಲ ದಿನಗಳ ಹಿಂದೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಇದೀಗ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಆದೇಶಿಸಿದೆ. 2017ರಲ್ಲಿ ಮದರಸಾ ಶಿಕ್ಷಣ ಮಂಡಳಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಗೀತೆ ಮತ್ತು ರಾಷ್ಟ್ರ ಧ್ವಜಾರೋಹಣವನ್ನು ಕಡ್ಡಾಯಗೊಳಿಸಿದ ಸುಮಾರು ಐದು ವರ್ಷಗಳ ನಂತರ ಇದೀಗ ಜಾರಿಗೆ ತರಲಾಗಿತ್ತು.

    ವಿವಿಧ ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ ಮತ್ತು ಮದರಸಾ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಲು ನಾವು ಇಚ್ಚಿಸುತ್ತೇವೆ. ಇದರಿಂದಾಗಿ ಅವರು ಧಾರ್ಮಿಕ ಅಧ್ಯಯನದ ಹೊರತಾಗಿಯೂ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳುತ್ತಾರೆ. ಇದನ್ನು ಈಗಾಗಲೇ ಕೆಲವು ಮದರಸಾಗಳಲ್ಲಿ ಪಠಿಸಲಾಗಿದೆ. ಮುಂಬರುವ ಶೈಕ್ಷಣಿಕ ಅಧಿವೇಶನದಿಂದ ನಾವು ಈಗ ಅದನ್ನು ಕಡ್ಡಾಯಗೊಳಿಸಿದ್ದೇವೆ ಎಂದು ಅಧ್ಯಕ್ಷ ಇಫ್ತಿಕರ್ ಅಹ್ಮದ್ ಜಾವೇದ್ ಹೇಳಿದ್ದಾರೆ.

    BREAKING: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಕೋರ್ಟ್​ ಗ್ರೀನ್​ ಸಿಗ್ನಲ್​: ಕಮಿಷನರ್​ ಬದಲಾಯಿಸಲಾಗದು ಎಂದ ನ್ಯಾಯಾಧೀಶರು

    ತಾಜ್​ ಮಹಲ್​ನ 22 ಕೊಠಡಿ ತೆರೆಯಲು ಅನುಮತಿ ಕೋರಿದ್ದ ಅರ್ಜಿ ಹೈಕೋರ್ಟ್​ನಿಂದ ವಜಾ

    ‘ನಾನು ಸಮಾಧಿಯಲ್ಲಿದ್ದೇನೆ… 2026ಕ್ಕೆ ಲೌಖಿಕ ಲೋಕಕ್ಕೆ ಬರುತ್ತೇನೆ, ದೀಪದ ಬೆಳಕಲ್ಲಿ ನಾನು ಕಾಣುವೆ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts