More

    ತಾಜ್​ ಮಹಲ್​ನ 22 ಕೊಠಡಿ ತೆರೆಯಲು ಅನುಮತಿ ಕೋರಿದ್ದ ಅರ್ಜಿ ಹೈಕೋರ್ಟ್​ನಿಂದ ವಜಾ

    ಪ್ರಯಾಗರಾಜ್ (ಉತ್ತರ ಪ್ರದೇಶ): ವಿಶ್ವವಿಖ್ಯಾತ ತಾಜ್​ಮಹಲ್‌ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್​ ಹೈಕೋರ್ಟ್​ನ ಲಖನೌ ಪೀಠ​ ವಜಾ ಮಾಡಿದೆ.

    ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿ ಇದಾಗಿತ್ತು. ತಾಜ್ ಮಹಲ್​ನಲ್ಲಿರುವ 22 ಕೊಠಡಿಗಳಲ್ಲಿ ಏನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

    ತಾಜ್​ಮಹಲ್​ನಲ್ಲಿ 22 ಕೊಠಡಿಗಳಿಗೆ ಬೀಗ ಹಾಕಿ ಇರಿಸಲಾಗಿದೆ. ಅದಕ್ಕೆ ಯಾರಿಗೂ ಪ್ರವೇಶ ಇಲ್ಲ. ಅಲ್ಲಿ ಹಿಂದು ದೇವರ ವಿಗ್ರಹಗಳು, ಹಳೆಯ ಶಾಸನಗಳು ಇವೆ ಎಂದು ಹೇಳಲಾಗುತ್ತಿದೆ. ಇದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಇದಕ್ಕಾಗಿ ಎಎಸ್​ಐಗೆ ನಿರ್ದೇಶನ ನೀಡಬೇಕು ಎಂದು ಕೋರಿಕೊಂಡಿದ್ದರು.

    ಅನುಮಾನ ಹೆಚ್ಚಿಸಿದ ಆರ್​ಟಿಐ ಮಾಹಿತಿ: ತಾಜ್​ಮಹಲ್​ನ 20 ಕೊಠಡಿಗಳಿಗೆ ಸಂಬಂಧಿಸಿ ಮಾಹಿತಿ ಕೋರಿ ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ತಾಜ್​ಮಹಲ್​ನ 20 ಕೊಠಡಿಗಳಿಗೆ ಬೀಗ ಹಾಕಲಾಗಿದೆ ಯಾಕೆ ಎಂದು ಕೇಳಲಾಗಿತ್ತು. ಇದಕ್ಕೆ ಕೇಂದ್ರ ಸಂಸತಿ ಸಚಿವಾಲಯವು ದೆಹಲಿಯ ಸೆಂಟ್ರಲ್​ ಇನ್​ಫಾಮೇರ್ಷನ್​ ಕಮಿಷನ್​ಗೆ ನೀಡಿದ ಮಾಹಿತಿ ಪ್ರಕಾರ, ಸುರಕ್ಷತೆ ದೃಷ್ಟಿಯಿಂದ ಕೊಠಡಿಗಳಿಗೆ ಬೀಗ ಹಾಕಲಾಗಿದೆ ಎಂದಷ್ಟೇ ಇದೆ. 2020ರಿಂದ ಆರ್​ಟಿಐ ಮೂಲಕ ಮಾಹಿತಿ ಹೊರತೆಗೆಯಲು ಪ್ರಯತ್ನಿಸುತ್ತಿದ್ದೇನೆ. ಸರ್ಕಾರದ ಮಾಹಿತಿ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಸಿಂಗ್​ ಹೇಳಿದ್ದರು. ಆರ್​ಟಿಐ ಮೂಲಕವೇ ಮತ್ತೆ ಅರ್ಜಿ ಸಲ್ಲಿಸಿ ಕೊಠಡಿಗಳ ಒಳಗೆ ಏನಿದೆ? ಅವುಗಳನ್ನು ಲಾಕ್​ ಮಾಡಿರುವುದು ಯಾಕೆ? ಎಂಬ ಪ್ರಶ್ನೆ ಕೇಳಿ ಮಾಹಿತಿ ಕೋರಲಾಗಿತ್ತು. ಆದರೆ, ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೈಕೋರ್ಟ್​ ಮೆಟ್ಟಿಲೇರಬೇಕಾಗಿ ಬಂದಿದೆ ಎಂದು ಸಿಂಗ್​ ಹೇಳಿದ್ದರು.

    ಆದರೆ ಇದನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ನಿಮ್ಮ ವಾದವನ್ನು ನಾವು ಒಪ್ಪುವುದಿಲ್ಲ. ಸತ್ಯಶೋಧನಾ ಸಮಿತಿಯ ಮೂಲಕ ಸತ್ಯವನ್ನು ಅನ್ವೇಷಿಸಲು ನೀವು ಬಯಸುತ್ತಿರುವುದು ಏನು? ಅದು ನಿಮ್ಮ ಹಕ್ಕಲ್ಲ. ಈ ರೀತಿ ಮಾಹಿತಿ ನೀಡುವುದು ಆರ್​ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ.

    ‘ನಾನು ಸಮಾಧಿಯಲ್ಲಿದ್ದೇನೆ… 2026ಕ್ಕೆ ಲೌಖಿಕ ಲೋಕಕ್ಕೆ ಬರುತ್ತೇನೆ, ದೀಪದ ಬೆಳಕಲ್ಲಿ ನಾನು ಕಾಣುವೆ…’

    ಪತ್ನಿ ಒಪ್ಪದಿದ್ದರೂ ಲೈಂಗಿಕ ಸಂಪರ್ಕ ನಡೆಸುವುದು ಅಪರಾಧವೆ? ಒಮ್ಮತಕ್ಕೆ ಬರದ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts