More

    ಇನ್ಮುಂದೆ 90 ನಿಮಿಷ ಕಿಮ್​ನ ಗುಣಗಾನ ಕಡ್ಡಾಯ- ಸಹೋದರಿಯಿಂದ ವಿಚಿತ್ರ ಆದೇಶ

    ಸಿಯಾಲ್: ಚಿತ್ರ-ವಿಚಿತ್ರ ಆದೇಶಗಳಿಂದ ಹುಚ್ಚುದೊರೆ ಎಂದೇ ಪ್ರಸಿದ್ಧಿಯಾಗಿರುವ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜಾಂಗ್​ ಉನ್​ ಬದುಕಿದ್ದಾರೋ, ಸತ್ತಿದ್ದಾರೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಇದರ ಬೆನ್ನಲ್ಲೇ ಅವರಿಗಿಂತಲೂ ಭಯಾನಕಳು ಎಂದೇ ಬಿಂಬಿತವಾಗಿರುವ ಇವರ ಉತ್ತರಾಧಿಕಾರಿ, ಅವರ ಸಹೋದರಿ ಕಿಮ್ ಯೋ ಜಾಂಗ್ ಇದೀಗ ವಿಚಿತ್ರ ಆದೇಶವೊಂದನ್ನು ಹೊರಡಿಸಿದ್ದಾರೆ.

    ಕಿಮ್ ಯೋ ಜಾಂಗ್ ಹೊರಡಿಸಿರುವ ಈ ಆದೇಶದಲ್ಲಿ ಇನ್ನುಮುಂದೆ ಪ್ರೀ ನರ್ಸರಿ ಮಕ್ಕಳು ಕಡ್ಡಾಯವಾಗಿ ಪ್ರತಿದಿನ 90 ನಿಮಿಷ ತನ್ನ ಸಹೋದರನ ಗುಣಗಾನ ಮಾಡಬೇಕು. ಅಂದರೆ ತನ್ನ ಸಹೋದರ ಇಲ್ಲಿಯವರೆಗೆ ಮಾಡಿರುವ ‘ಮಹಾನ್​’ ಕಾರ್ಯಗಳ ಬಗ್ಗೆ ಕಡ್ಡಾಯವಾಗಿ ಕಲಿಯಬೇಕು. ಕಲಿಕೆಯ ಸಂದರ್ಭದಲ್ಲಿ ಕಿಮ್​ ಜಾಂಗ್​ ಉನ್​ ಮಾಡಿರುವ ಸಾಧನೆಗಳ ಬಗ್ಗೆ ಶ್ಲಾಘನೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

    ಕಿಮ್​ ಜಾಂಗ್​ ಉನ್​ನ ಸಾಧನೆಗಳ ಪಟ್ಟಿಯನ್ನು ಪ್ರೀ ನರ್ಸರಿ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು, ಪ್ರತಿದಿನ ಕನಿಷ್ಠ 90 ನಿಮಿಷ ಮಕ್ಕಳು ಅದರ ಬಗ್ಗೆ ಕಲಿಯಬೇಕಿದೆ. ಉತ್ತರ ಕೊರಿಯಾದ ಬಗ್ಗೆ ನಿಷ್ಠೆ ಮತ್ತು ನಂಬಿಕೆಯನ್ನು ಉಳಿಸಿ ಬೆಳೆಸಿಕೊಳ್ಳಲು ಅಧ್ಯಕ್ಷ ಕಿಮ್​ನ ಗುಣಗಾನ, ಅವರ ಶ್ರೇಷ್ಠತೆ ಬಗ್ಗೆ ಮಕ್ಕಳು ಕಲಿಯಬೇಕು ಎನ್ನುವುದು ಸಹೋದರಿ ಕಿಮ್ ಯೋ ಜಾಂಗ್ ಅನಿಸಿಕೆ.

    ಇದನ್ನೂ ಓದಿ: ನನ್ನನ್ನು ಉಪಮುಖ್ಯಮಂತ್ರಿ ಮಾಡಮ್ಮಾ… ದುರ್ಗಿಗೆ ಪತ್ರ ಬರೆದರಂತೆ ಶ್ರೀರಾಮುಲು!

    ಇದಕ್ಕಾಗಿಯೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈ ಮೊದಲು ಇದ್ದ ಪಠ್ಯಕ್ರಮದಲ್ಲಿ 30 ನಿಮಿಷ ಕಿಮ್​ನ ಗುಣಗಾನ ಮಾಡುವುದು ಕಡ್ಡಾಯವಾಗಿತ್ತು. ಅದನ್ನೀಗ 90 ನಿಮಿಷಕ್ಕೆ ಏರಿಕೆ ಮಾಡಲಾಗಿದೆ.

    ಈ ಪಠ್ಯದ ತರಬೇತಿಗಾಗಿ ವಿಶೇಷ ಅಧ್ಯಾಪಕರನ್ನೂ ನೇಮಕ ಮಾಡಿದ್ದು, ಅದಕ್ಕಾಗಿಯೇ ಪ್ರತ್ಯೇಕ ತರಗತಿಯನ್ನೂ ಮೀಸಲು ಇರಿಸಲಾಗಿದೆ. ಇದರ ಅವಧಿ 90 ನಿಮಿಷಗಳಾಗಿದ್ದು, ಅದರಲ್ಲಿ ಮಕ್ಕಳು ಕಿಮ್​ ಬಗ್ಗೆ ತಿಳಿದುಕೊಳ್ಳುವುದು ಇನ್ನುಮುಂದೆ ಕಡ್ಡಾಯವಾಗಿದೆ.

    ಹೆಬ್ಬಾವನ್ನೇ ಮಾಸ್ಕ್​ ಆಗಿ ಧರಿಸಿ ಬಸ್​ ಹತ್ತಿದ: ಹೌಹಾರಿಹೋದ ಪ್ರಯಾಣಿಕರು!

    ನಸುಕಿನಲ್ಲಿಯೇ ಯೋಧರಿಂದ ಬೇಟೆ: ಮೂರು ಉಗ್ರರ ಹೊಡೆದುರುಳಿಸಿದ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts