More

    ಶಾಲೆಗೆ ರಜೆ ಎಂದು ಮೈಸೂರಿಗೆ ಹೊರಟಿರುವಿರಾ? ಹಾಗಿದ್ರೆ ಇದನ್ನು ತಪ್ಪದೇ ಓದಿ…

    ಮೈಸೂರು: ಕರೊನಾ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ಲಾಕ್​ಡೌನ್​, ನೈಟ್​ ಕರ್ಫ್ಯೂ ಜಾರಿಮಾಡಲಾಗಿದೆ. ಸದ್ಯ ಕರ್ನಾಟಕದಲ್ಲಿ ಅಂಥದ್ದೇನೂ ಆಗಿಲ್ಲ.

    ಆದರೆ ಮುಂಜಾಗರೂಕತಾ ಕ್ರಮವಾಗಿ ಕೆಲವು ನಿರ್ಧಾರಗಳನ್ನು ಇದಾಗಲೇ ರಾಜ್ಯ ಸರ್ಕಾರ ಕೈಗೊಂಡಿದೆ. ಇದೀಗ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆದೇಶ ಹೊರಡಿಸಿದ್ದು, ಮೈಸೂರಿಗೆ ಪ್ರವಾಸಕ್ಕೆಂದು ಬರುವವರಿಗೆ ಕೆಲವೊಂದು ನಿಯಮ ರೂಪಿಸಿದ್ದಾರೆ.

    ಇದಾಗಲೇ ಶಾಲೆಗಳು ನಡೆಯುತ್ತಿಲ್ಲ. ಕರೊನಾ ಭರಾಟೆ ಜೋರಾಗಿದ್ದರೂ ಮೊದಲಿನಂತೆ ಜನರು ಹೆದರುತ್ತಿಲ್ಲ. ಇದೇ ಕಾರಣಕ್ಕೆ ಮಕ್ಕಳನ್ನು ಕರೆದುಕೊಂಡು ಪ್ರೇಕ್ಷಣೀಯ ಸ್ಥಳಗಳಿಗೆ ಜನರು ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗುವವರ ಸಂಖ್ಯೆ ಹೆಚ್ಚಿಗೆಯೇ ಇರುತ್ತದೆ.

    ಇದೇ ಕಾರಣಕ್ಕೆ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರವಾಸಿ ತಾಣಗಳು, ರೆಸಾರ್ಟ್‌ಗಳು, ಕನ್ವೆನ್ಷನ್‌ಹಾಲ್‌, ಪಾರ್ಟಿ, ರಿಕ್ರಿಯೇಷನ್‌ ಕ್ಲಬ್‌ ಹಾಗೂ ಚಿತ್ರಮಂದಿರ ಪ್ರವೇಶಕ್ಕೆ ಕೋವಿಡ್‌-19 ನೆಗೆಟಿವ್‌ ವರದಿ ತರುವುದನ್ನು ಕಡ್ಡಾಯ ಮಾಡಲಾಗಿದೆ.

    ‘ಏ.10ರಿಂದ ಏ.20ರವರೆಗೆ ಕೋವಿಡ್​-19 ವರದಿ ತರುವುದನ್ನು ಕಡ್ಡಾಯ ಮಾಡಲಾಗಿದೆ. ಅದಕ್ಕಾಗಿ 300 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. ಈ ಸ್ಥಳಗಳಿಗೆ ಭೇಟಿ ನೀಡುವ 72 ಗಂಟೆಯೊಳಗೆ ಕೋವಿಡ್‌ ನೆಗೆಟಿವ್‌ ವರದಿ ಪಡೆದಿರಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

    ಈ ನಿಯಮ ಉಲ್ಲಂಘನೆಯಾದರೆ ಈ ಸ್ಥಳಗಳ ಅಧಿಕಾರಿಗಳು ಅಥವಾ ಮಾಲೀಕರೇ ಜವಾಬ್ದಾರಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಇವುಗಳನ್ನು ಪಾಲನೆ ಮಾಡದೇ ಹೋದರೆ ಅಂಥ ಸ್ಥಳಗಳನ್ನು ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೆ ಮುಚ್ಚಲಾಗುವುದು. ವಿಪತ್ತು ನಿರ್ವಹಣೆ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ‌

    ಮುಷ್ಕರ ನಿರತರಿಗೆ ‘ಬುದ್ಧಿ ಕಲಿಸುವೆ’ ಎಂದ ಸರ್ಕಾರ- ಹಾಲಿಗಳು ಬರದಿದ್ದರೆ ಮಾಜಿಗಳಿಂದ ಸೇವೆ: ಲಿಸ್ಟ್​ ರೆಡಿ

    ಎರಡನೆಯ ಮದುವೆಯಾಗಿದ್ದೇ ತಪ್ಪಾಯ್ತಾ? ಗಂಡನ ಪ್ರೀತಿಗಾಗಿ ಹಂಬಲಿಸುತ್ತಿರುವ ನನಗೇಕೇ ಈ ಹಿಂಸೆ ಮೇಡಂ?

    ಹಣ ಕೊಡಿದಿದ್ರೆ ‘ಆ’ ವಿಡಿಯೋ ರಿಲೀಸ್​: ಯುವತಿಯ ಫೇಸ್​ಬುಕ್​ನಿಂದ ಬೆದರಿಕೆ- ಎಂಬಿಎ ಪದವೀಧರ ಆತ್ಮಹತ್ಯೆ

    ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಹ್ವಾನ- ಎಸ್​ಎಸ್​ಎಲ್​ಸಿ ಆದವರಿಗೂ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts