More

    ಸಂಗೀತ ಕೇಳಿದರೆ, ಟಿ.ವಿ ನೋಡಿದರೆ ಭಾರಿ ದಂಡ: ಪಶ್ಚಿಮ ಬಂಗಾಳದಲ್ಲಿ ಫತ್ವಾ!

    ಮುರ್ಶಿದಾಬಾದ್ (ಪಶ್ಚಿಮ ಬಂಗಾಳ): ಇನ್ನು ಮುಂದೆ ಟಿ.ವಿ. ನೋಡುವಂತಿಲ್ಲ, ಸಂಗೀತ ಕೇಳುವಂತಿಲ್ಲ, ಕೇರಂ ಆಡುವಂತಿಲ್ಲ ಇನ್ನು ಏನೇನೋ…

    ಇದನ್ನು ಕೇಳಿ ದೂರದ ಯಾವುದೋ ದೇಶದಲ್ಲಿ ಇಂಥದ್ದೊಂದು ಕಾನೂನು ಮಾಡಿದ್ದಾರೆ ಎಂದುಕೊಳ್ಳಬೇಡಿ. ಇದು ನಮ್ಮದೇ ದೇಶದ ರಾಜ್ಯದಲ್ಲಿ ಮಾಡಿರುವ ಹೊಸ ಕಾನೂನು.

    ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಇಂಥದ್ದೊಂದು ಕಾನೂನು ಜಾರಿಗೊಳಿಸಲಾಗಿದೆ. ಈ ಕಾನೂನು ಜಾರಿಗೊಳಿಸಿರುವುದು ಫತ್ವಾ ಮೂಲಕ. ಅಂದರೆ ಅಲ್ಲಿನ ಮುಸ್ಲಿಮರು ಇನ್ನುಮುಂದೆ ಇದನ್ನೆಲ್ಲಾ ಮಾಡುವಂತಿಲ್ಲ ಎಂದು ಫತ್ವಾ ಹೊರಡಿಸಲಾಗಿದೆ.

    ಮುರ್ಶಿದಾಬಾದ್ ಜಿಲ್ಲೆಯಲ್ಲಿ ಪ್ರಬಲವಾಗಿರುವ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕೆಲವೊಂದು ಚಟುವಟಿಕೆಗಳ ಮೇಲೆ ನಿಷೆಧ ವಿಧಿಸಿದ್ದು (ಫತ್ವಾ), ಈ ಪೈಕಿ ಟಿ.ವಿ ನೋಡುವುದು, ಸಂಗೀತ ಕೇಳುವುದು, ಲಾಟರಿ ಟಿಕೆಟ್ ಮಾರಾಟ ಮಾಡುವುದು, ಮದ್ಯ ಮಾರಾಟ ಮಾಡುವುದು, ಕೇರಂ ಆಡುವುದೂ ಸಹ ಸೇರ್ಪಡೆಯಾಗಿದೆ. ಒಂದು ವೇಳೆ ಈ ಫತ್ವಾವನ್ನು ಉಲ್ಲಂಘನೆ ಮಾಡಿದವರು 500 ರೂಪಾಯಿಗಳಿಂದ 7,000 ರೂಪಾಯಿಗಳವರೆಗೆ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

    ಇದನ್ನೂ ಓದಿ: ಕರುಳ ಕುಡಿಗೇ ಬೆಂಕಿ ಇಟ್ಟ ಅಮ್ಮ- ಅದೇ ಅಗ್ನಿಯಲ್ಲಿ ತಾನೂ ಸುಟ್ಟುಹೋದಳು!

    ಸಾಮಾಜಿಕ ಸುಧಾರಣಾ ಸಮಿತಿಯ ಬ್ಯಾನರ್ ನ ಅಡಿಯಲ್ಲಿ ಈ ಫತ್ವಾ ಹೊರಡಿಸಲಾಗಿದೆ. ಈ ಆದೇಶವನ್ನೂ ಮೀರಿ ನಡೆದರೆ ಸಂಗೀತ ಕೇಳಿದರೆ 1,000 ರೂಪಾಯಿ ದಂಡ, ಕೇರಮ್ ಆಡಿದರೆ 500 ರೂಪಾಯಿ ದಂಡ ಲಾಟರಿ ಖರೀದಿಸಿದರೆ 2,000 ರೂಪಾಯಿ ದಂಡ, ಮದ್ಯ ಮಾರಾಟ ಮಾಡಿದರೆ, 7,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

    ಫತ್ವಾ ಉಲ್ಲಂಘಿಸಿದವರ ಬಗ್ಗೆ ಮಾಹಿತಿ ನೀಡುವವರಿಗೂ 200-2000 ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಅಂಶಗಳೆಲ್ಲವೂ ಯುವ ಪೀಳಿಗೆಯನ್ನು ಸಂಸ್ಕೃತಿ ಮತ್ತು ನೈತಿಕ ಅಧಃಪತನದತ್ತ ಕೊಂಡೊಯ್ಯುವುದನ್ನು ತಪ್ಪಿಸಲು ಸಮಿತಿ ಈ ರೀತಿಯ ನಿಷೇಧ, ಫತ್ವಾ ವಿಧಿಸಿದೆ ಎಂದು ಸಮಜಾಯಿಷಿ ನೀಡಲಾಗಿದೆ.

    ಕರೊನಾಕ್ಕೆ ಆಯುರ್ವೇದ ಔಷಧ ಕಂಡುಹಿಡಿದಿದ್ದೇನೆಂದ ವೈದ್ಯನಿಗೆ ‘ಸುಪ್ರೀಂ’ನಿಂದ ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts