More

    ತುಳಿತಕ್ಕೊಳಗಾದವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ತಿಲ್ವಾ ಎಂದು ತಮ್ಮದೇ ಪಕ್ಷವನ್ನು ತಿವಿದ ಮುನಿಯಪ್ಪ

    ಬೆಂಗಳೂರು: ತಮ್ಮ ಪಕ್ಷದ ನಾಯಕರಿಗೆ ಆಗಿಂದಾಗೆ ಕಿವಿಹಿಂಡಿ ಎಚ್ಚರಿಸುವ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮತ್ತೊಮ್ಮೆ ತಮ್ಮೊಳಗಿನ ಆತಂಕವನ್ನು ಪಕ್ಷದ ವೇದಿಕೆಯಲ್ಲಿ ಹೊರಹಾಕಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ತುಳಿತಕ್ಕೊಳಗಾದ ಸಮುದಾಯವನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಕಾಂಗ್ರೆಸ್‌ನಿಂದ ಪರಿಶಿಷ್ಟರು ದೂರ ಸರಿಯುತ್ತಿದ್ದಾರೆ, ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಇದನ್ನು ಗಮನಿಸಬೇಕು ಎಂದು ಹೇಳಿದರು.
    ಪರಿಶಿಷ್ಟರಿಗೆ ಪಕ್ಷದಲ್ಲಿ ಅಗತ್ಯ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದ ಅವರು, ಆದ್ಯತೆ ನೀಡದೇ ಇರುವ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

    ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಿಜೆಪಿಯವರು ದೇಶವಿಭಜನೆ ಮಾಡುತ್ತಿದ್ದಾರೆ. ಜಾತಿಜಾತಿಗಳ ನಡುವೆ ದ್ವೇಷ ಮೂಡಿಸುತ್ತಿದ್ದಾರೆ. ಅವರು ಧರ್ಮ ಮುಂದಿಟ್ಟುಕೊಂಡೇ ಅಧಿಕಾರಕ್ಕೆ ಬಂದವರು. ದೇಶದ ಅಭಿವೃದ್ಧಿಯ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ದೇಶವನ್ನ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗುತ್ತ್ತಿದ್ದಾರೆ ಎಂದರು.

    ಕೇರಳ, ಬಸವ ಕಲ್ಯಾಣದಲ್ಲಿ ಆರ್‌ಎಸ್‌ಎಸ್ ಐಡಿಯಾಲಜಿಯಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಇದೊಂದು ವಿಷವಿದ್ದಂತೆ. ವಿಷವನ್ನ ಎಲ್ಲಾದರೂ ಟೆಸ್ಟ್ ಮಾಡಲು ಸಾಧ್ಯವಾಗುತ್ತದೆಯೇ? ಅದನ್ನು ಒಂದು ತೊಟ್ಟು ಕುಡಿದರೆ ಸಾಕು ಸಾಯುತ್ತಾರೆ. ಹೋಗಲಿ ಎಂದು ಒಮ್ಮೆ ಅವಕಾಶ ಕೊಟ್ಟರೆ ಮುಗಿಯಿತು, ಎಲ್ಲವೂ ಮುಗಿದಂತೆಯೇ ಸರಿ ಎಂದು ತಮ್ಮ ಆತಂಕ ಹೊರಹಾಕಿದರು.

    ಒಂಟಿ ಕಾಲಿನಲ್ಲಿ ಬಂಗಾಳ ಗೆಲ್ಲುವೆ- ಮುಂದೆ ಎರಡೂ ಕಾಲಲ್ಲಿ ದೆಹಲಿ ಗೆದ್ದು ಬರುವೆ

    ಇಸ್ರೋದಲ್ಲಿ ಕೆಲಸ ಮಾಡಲು ಬಯಸುವವರಿಗೆ ಗುಡ್​ ನ್ಯೂಸ್​: ವಿವಿಧ ಘಟಕಗಳಲ್ಲಿ ಭರ್ಜರಿ ಉದ್ಯೋಗಾವಕಾಶ

    ಸಿಡಿ ಕೇಸ್​ನಲ್ಲಿ ಸಿಕ್ಕಾಕೊಂಡಿರೋ ಆಂಟಿ ನನ್ನನ್ನು ಪ್ರೀತಿಸ್ತೇನೆ ಅಂತ ದುಂಬಾಲು ಬಿದ್ದಿದ್ದಾಳೆ- ಹೇಗೆ ತಪ್ಪಿಸಿಕೊಳ್ಳಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts