More

    ಒಟ್ಟಿಗೇ ವಿಮಾನ ಹಾರಿಸಿ ಇತಿಹಾಸ ಸೃಷ್ಟಿಸಿದ ಅಮ್ಮ-ಮಗಳು: ವೈರಲ್​ ವಿಡಿಯೋಗೆ ಕಮೆಂಟ್ಸ್​ಗಳ ಸುರಿಮಳೆ

    ನ್ಯೂಯಾರ್ಕ್​: ತಾಯಿ ಮತ್ತು ಮಗಳು ಇಬ್ಬರೂ ಒಂದೇ ವಿಮಾನದಲ್ಲಿ ಒಟ್ಟಿಗೇ ವಿಮಾನ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಸೌತ್ ವೆಸ್ಟ್ ಏರ್​ಲೈನ್ಸ್​ನಲ್ಲಿ ತಾಯಿ ಹಾಲಿ ಕ್ಯಾಪ್ಟರ್​ ಹೋಲಿ ಪೆಟಿಟ್ ಮತ್ತು ಪುತ್ರಿ ಕೀಲಿ ಪೆಟಿಟ್ ಒಟ್ಟಾಗಿ ವಿಮಾನ ಹಾರಿಸಿದ್ದಾರೆ. ಅದರ ವಿಡಿಯೋ ಈಗ ಸಕತ್​ ವೈರಲ್​ ಆಗಿದೆ. ಕಳೆದ ಜುಲೈ 23 ರಂದು ಡೆನ್ವರ್​ನಿಂದ ಸೇಂಟ್ ಲೂಯಿಸ್​ಗೆ ಇವರ ಒಟ್ಟಿಗೇ ವಿಮಾನ ಹಾರಿಸಿದ್ದಾರೆ. ಈ ಮೂಲಕ ಏರ್​ಲೈನ್ಸ್​ನಲ್ಲಿ ಒಟ್ಟಿಗೇ ವಿಮಾನ ಹಾರಿಸಿರುವ ತಾಯಿ-ಮಗಳ ಮೊದಲ ಜೋಡಿ ಎಂದು ದಾಖಲಾಗಿದ್ದಾರೆ.

    ಕಾಲೇಜು ಮುಗಿಸಿದ ನಂತರ ತಾಯಿ ಹೋಲಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಆರಂಭಿಸಿದ್ದರು. ನಂತರ ಪೈಲಟ್ ಆಗಿ ಬಡ್ತಿ ಪಡೆದಿದ್ದರು. ಅಮ್ಮನಂತೆಯೇ ವಿಮಾನ ಹಾರಿಸುವ ಕನಸನ್ನು ಕೀಲಿ 14ನೇ ವಯಸ್ಸಿನ್ನಲ್ಲಿಯೇ ಕಂಡಿದ್ದಳು. ಅದರಂತೆಯೇ ತರಬೇತಿ ಪಡೆದು ಈಗ ಅಮ್ಮನೊಟ್ಟಿಗೆ ಕನಸು ನನಸು ಮಾಡಿಕೊಂಡಿದ್ದಾಳೆ. 2017 ರಲ್ಲಿ ಸೌತ್ ವೆಸ್ಟ್ ಏರ್​ಲೈನ್ಸ್​ನಲ್ಲಿ ಇಂಟರ್ನ್​ಷಿಪ್​ ಪಡೆದು ಅಲ್ಲಿ ಉದ್ಯೋಗ ಪಡೆದ ಕೀಲಿ, ಇದೀಗ ಅಲ್ಲಿಯೇ ಫಸ್ಟ್​ ಆಫೀಸರ್ ಫೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.

    ಅಮ್ಮ-ಮಗಳು ಒಂದು ಫೋಟೋ ಫ್ರೇಮ್ ಹಿಡಿದುಕೊಂಡು ನಿಂತಿರುವ ದೃಶ್ಯದಿಂದ ಈ ವೈರಲ್​ ವಿಡಿಯೋ ಆರಂಭವಾಗುತ್ತದೆ. ಅದರಲ್ಲಿ ತಾಯಿ ಮಗಳ ಫೋಟೋದೊಂದಿಗೆ ಅವರ ಇಡೀ ಪೈಲೆಟ್ ಜೀವನ ರೂಪುಗೊಂಡ ಬಗೆಯನ್ನು ತೋರಿಸುತ್ತದೆ. ಈ ಕುರಿತು ಬರೆದುಕೊಂಡ ತಾಯಿ, ಇಂದು ನನ್ನ ಬುದೊಡ್ಡ ಕನಸು ನನಸಾಗಿದೆ. ನಾನು ನನ್ನ ಈ ವೃತ್ತಿಯನ್ನು ಪ್ರೀತಿಸುತ್ತಿದ್ದೆ. ಆದರೆ ಇದೀಗ ನನ್ನ ಮಗಳು ಈ ವೃತ್ತಿಯನ್ನು ನನ್ನ ಮಗಳು ಸಹ ಪ್ರೀತಿಸಿ ಇದೇ ವೃತ್ತಿಗೆ ಸೇರಿಕೊಂಡಿದ್ದಾಳೆ ಎಂದಿದ್ದಾರೆ. (ಏಜೆನ್ಸೀಸ್​)

    ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ನೋಡಿ ವೈರಲ್​ ವಿಡಿಯೋ:

    https://www.vijayavani.net/s-two-muslim-students-wins-online-ramayana-quiz-contest-at-kerala/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts